Friday, 23 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..!
ಬೆಂಗಳೂರು

ಮಾಜಿ ಭೂಗತ ಪಾತಕಿ ದಿವಂಗತ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಅಟ್ಯಾಕ್..! ಮಾಹಿತಿ ಕೊಟ್ಟವರು ಯಾರು..?!

ಮಾಜಿ ಭೂಗತ ಪಾತಕಿ ದಿವಂಗತ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ತಡರಾತ್ರಿ 11:30 ಸುಮಾರಿಗೆ ಫೈರಿಂಗ್ ನಡೆದಿದೆ. ರಾಮನಗರ ತಾಲೂಕಿನ ಬಿಡದಿ ಬಳಿಯಲ್ಲಿರುವ ಮುತ್ತಪ್ಪ ರೈ ಮನೆಯ ಬಳಿಯೇ ಈ ಘಟನೆ ನಡೆದಿದ್ದು ಬಿಡದಿಯ ತನ್ನ…

ಮಾಜಿ ಭೂಗತ ಪಾತಕಿ ದಿವಂಗತ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ತಡರಾತ್ರಿ 11:30 ಸುಮಾರಿಗೆ ಫೈರಿಂಗ್ ನಡೆದಿದೆ.

ರಾಮನಗರ ತಾಲೂಕಿನ ಬಿಡದಿ ಬಳಿಯಲ್ಲಿರುವ ಮುತ್ತಪ್ಪ ರೈ ಮನೆಯ ಬಳಿಯೇ ಈ ಘಟನೆ ನಡೆದಿದ್ದು ಬಿಡದಿಯ ತನ್ನ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ರಿಕ್ಕಿ ರೈ ಮೇಲೆ ವಿರೋಧಿ ಗ್ಯಾಂಗ್ ಫೈರಿಂಗ್ ಮಾಡಿದೆ.

ರಿಕ್ಕಿ ರೈ ಟಾರ್ಗೆಟ್..!

ಯಾವಾಗಲೂ ಡ್ರೈವಿಂಗ್ ಸೀಟ್ ನಲ್ಲಿ ತಾನೇ ಕುಳಿತು ಡ್ರೈವ್ ಮಾಡುತ್ತಿದ್ದ ರಿಕ್ಕಿ ರೈ ಅನ್ನು ಟಾರ್ಗೆಟ್ ಮಾಡಿ ಫೈರಿಂಗ್ ನಡೆಸಲಾಗಿದೆ ಆದರೆ ನಿನ್ನೆಯ ಫೈರಿಂಗ್ ನಲ್ಲಿ ರಿಕ್ಕಿ ರೈ ಡ್ರೈವರ್ ಸೀಟಿನಲ್ಲಿ ಕುಳಿತಿರಲಿಲ್ಲ ಹಾಗಾಗಿ ಬಚವಾಗಿದ್ದಾರೆ.ಸುಮಾರು 11.30 ರ ಹೊತ್ತಿಗೆ ಮನೆಯಿಂದ ಹೊರಬರ್ತಿದ್ದಂತೆ ಗೇಟ್ ಬಳಿ, ಎರಡು ಸುತ್ತಿನ ಫೈರಿಂಗ್ ಮಾಡಿದ್ದಾರೆ. 70 ಎಂಎಂ ಬುಲೆಟ್ ಶಾಟ್ಗನ್ ಬಳಸಿ ಫೈರಿಂಗ್ ಮಾಡಲಾಗಿದೆ.

ಕಾರು ಡ್ರೈವ್ ಮಾಡದೇ ಸೇಫ್ ಆದ ರಿಕ್ಕಿ ರೈ ಹೀಗಾಗಿ ಫೈರಿಂಗ್ ಆಗುತ್ತಿದ್ದಂತೆ ಕಾರು ಚಾಲಕ ಬಸವರಾಜು ಮುಂದೆ ಬಗ್ಗಿದ್ದು, ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

ಕಾಂಪೌಂಡ್ ರಂಧ್ರದಿಂದ ನಡೆದಿತ್ತು ಗುಂಡಿನ ದಾಳಿ..!

ಖಾಸಗಿಯವರಿಗೆ ಸೇರಿದ, ರಸ್ತೆ ಪಕ್ಕದ ಕಾಂಪೌಡ್ ಗ್ಯಾಪ್ ಮಧ್ಯೆ ಬಚ್ಚಿಟ್ಟುಕೊಂಡು ದುಷ್ಕರ್ಮಿ ದಾಳಿ ಮಾಡಿದ್ದಾನೆ. ಅಂದರೆ ಕಾರು ಬೆಂಗಳೂರಿಗೆ ಹೊರಡ್ತಿರಬೇಕಾದರೆ ಬಲಗಡೆ ಭಾಗದಲ್ಲಿ ಒಂದು ಕಾಂಪೌಂಡ್ ಗ್ಯಾಪ್ ಮಧ್ಯೆ ಅವಿತುಕೊಂಡು, ಅದರ ಒಂದು ರಂಧ್ರದಿಂದಲೇ ಫೈರಿಂಗ್ ಆಗಿದೆ.

ಬಿಡದಿ ಮನೆಯಿಂದ KA 53 MC 7128 ನಂಬರ್ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ರಿಕ್ಕಿ ರೈ ಜತೆಗೆ ಗನ್ ಮ್ಯಾನ್ ಇದ್ದು, ಚಾಲಕ ಕಾರು ಚಲಾಯಿಸ್ತಿದ್ದ. ಹಿಂಬದಿ ಸೀಟ್ ನಲ್ಲಿ ರಿಕ್ಕಿ ರೈ ಕುಳಿತಿದ್ದರು. ಪೊಲೀಸರ ಮಾಹಿತಿ ಪ್ರಕಾರ 70mm ಬುಲೆಟ್ ಶಾಟ್ಗನ್ ಬಳಸಿ ಫೈರಿಂಗ್ ನಡೆಸಲಾಗಿದೆ. ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್ ಎಡಭಾಗದ ಡೋರ್ ಗೆ ತಾಗಿದೆ . ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.

ರಿಕ್ಕಿ ರೈ ಹತ್ಯೆಗೆ ನಡೆದಿತ್ತಾ ಪೂರ್ವ ನಿಯೋಜಿತ ಸಂಚು..?

ಹಿಂದೆ ಹಲವು ಬಾರಿ ರಿಕ್ಕಿ ರೈ ಹತ್ಯೆಗೆ ಸಂಚು ನಡೆಯುತ್ತಿತ್ತು ಎನ್ನಲಾಗುತ್ತಿದೆ. ಆದರೆ ನಿನ್ನೆ ನಡೆದ ಘಟನೆಯಲ್ಲಿ ರಿಕ್ಕಿರೈ ಹೊರಡುವ ಮಾಹಿತಿ ಕೊಟ್ಟವರು ಯಾರು ಎರಡು ದಿನಗಳ ಹಿಂದೆ ಅಷ್ಟೇ ರಷ್ಯಾದಿಂದ ಬಂದ ರಿಕ್ಕಿ ರೈ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ ..?! ರಿಕ್ಕಿ ಬರೊದನ್ನೇ ಕಾದು ಜಾಗವನ್ನು ಗುರುತಿಸಿಕೊಂಡಿದ್ದ ಶಾರ್ಪ್ ಶೂಟರ್ ಗೋಡೆ ಒಂದರ ಮಧ್ಯೆ ಅವಿತುಕೊಂಡು ಶೂಟ್ ಮಾಡಿದ್ದಾನೆ. ರಿಕ್ಕಿ ರೈ ಬಗ್ಗೆ ರಾತ್ರಿ ಮಾಹಿತಿ ಕೊಟ್ಟವರು ಯಾರು..? ಪ್ರೊಫೆಷನಲ್ ಕಿಲ್ಲರ್ ನಿಂದ ಈ ಕೃತ್ಯ ನಡೆದಿದ್ದು ಪೊಲೀಸರಿಗೆ ಈತನ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ ಸ್ಥಳದಲ್ಲಿ ಎರಡು ಬುಲೆಟ್ ಹಾಗೂ ಒಂದು ಮೊಬೈಲ್ ಪತ್ತೆಯಾಗಿದ್ದು, ಪ್ರೊಫೆಷನಲ್ ಕಿಲ್ಲರ್ ಬೇಟೆಗೆ ಪೊಲೀಸರು ತೊಡಗಿದ್ದಾರೆ…

EDITOR NEWS WARRIORS