Thursday, 22 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..!
ರಾಜ್ಯ

Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..!

ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ನಿಯಂತ್ರಣ ತಪ್ಪಿದ ಪ್ರಕರಣ ಗಂಭೀರವಾಗಿ ಪರಿಗಣನೆ – ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ – ಒಂದು ತಿಂಗಳ ಮುಂಚಿತ ಅನುಮತಿ, 20 ದಿನಗಳ ತಾಲೀಮು ಕಡ್ಡಾಯಗೊಳಿಸಲು ನಿರ್ದೇಶನ..! ಶಿವಮೊಗ್ಗ: ನಗರದ ದಸರಾ…

ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ನಿಯಂತ್ರಣ ತಪ್ಪಿದ ಪ್ರಕರಣ ಗಂಭೀರವಾಗಿ ಪರಿಗಣನೆ – ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ – ಒಂದು ತಿಂಗಳ ಮುಂಚಿತ ಅನುಮತಿ, 20 ದಿನಗಳ ತಾಲೀಮು ಕಡ್ಡಾಯಗೊಳಿಸಲು ನಿರ್ದೇಶನ..!

ಶಿವಮೊಗ್ಗ: ನಗರದ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಸಕ್ರೆಬೈಲು ಆನೆ ಶಿಬಿರದ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಓಡಿದ ಘಟನೆ ಹಿನ್ನೆಲೆಯಲ್ಲಿ, ರಾಜ್ಯದ ಧಾರ್ಮಿಕ ಉತ್ಸವಗಳು, ಜಾತ್ರೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಿ ಜಾರಿಗೊಳಿಸುವಂತೆ ರಾಮಲಿಂಗಾ ರೆಡ್ಡಿ ಅವರು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.

ಅಕ್ಟೋಬರ್ 21ರಂದು ಶಿವಮೊಗ್ಗದಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಓಡತೊಡಗಿದ ಪರಿಣಾಮ ಮೂರು ಕಾರು ಒಂದು ಮನೆಗೆ ಹಾಗೂ ಕೆಲವು ದ್ವಿಚಕ್ರ ವಾಹನಗಳಿಗೆ ನಷ್ಟ ಉಂಟಾಗಿದ್ದು .

ಜನಸಂದಣಿಯ ನಡುವೆ ಆನೆ ನಿಯಂತ್ರಣ ತಪ್ಪಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ.

ಆನೆಗಳ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ..!

ಧಾರ್ಮಿಕ ಉತ್ಸವಗಳು, ಜಾತ್ರೆಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಆನೆಗಳನ್ನು ಬಳಸುವಾಗ ಅವುಗಳ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ರಾಮಲಿಂಗಾ ರೆಡ್ಡಿ ಅವರು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ .

ಸಾವಿರಾರು ಜನರು ಸೇರುವ ಕಾರ್ಯಕ್ರಮಗಳಲ್ಲಿ ಉಂಟಾಗುವ ಗದ್ದಲ, ಪಟಾಕಿಗಳ ಸದ್ದು, ವಾದ್ಯಗಳ ಘೋಷ ಹಾಗೂ ಇತರ ತೀವ್ರ ಶಬ್ದಗಳಿಂದ ಆನೆಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಆನೆಗಳು ವಿಚಲಿತಗೊಂಡು ಅನಿರೀಕ್ಷಿತವಾಗಿ ವರ್ತಿಸಬಹುದು. ಹೀಗಾಗಿ, ಆನೆಗಳ ಬಳಕೆಗೆ ಅನುಮತಿ ನೀಡುವ ಮುನ್ನ ಅವುಗಳ ಆರೋಗ್ಯ, ವರ್ತನೆ, ತರಬೇತಿ ಹಾಗೂ ಜನಸಂದಣಿಯನ್ನು ಎದುರಿಸುವ ಸಾಮರ್ಥ್ಯವನ್ನು ಸಮರ್ಪಕವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಒಂದು ತಿಂಗಳ ಮುಂಚಿತ ಅನುಮತಿ, 20 ದಿನಗಳ ತಾಲೀಮು!

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳ ಬಳಕೆಗೆ ಸಂಬಂಧಿಸಿದಂತೆ ಐದು ಪ್ರಮುಖ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲು ಸೂಚಿಸಲಾಗಿದೆ.

1. ಒಂದು ತಿಂಗಳ ಮುಂಚಿತ ಅನುಮತಿ: ಧಾರ್ಮಿಕ ಉತ್ಸವ, ಜಾತ್ರೆ ಅಥವಾ ಇತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸಲು ಆಯೋಜಕರು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು.

2. ಕನಿಷ್ಠ 20 ದಿನಗಳ ತಾಲೀಮು: ಕಾರ್ಯಕ್ರಮದಲ್ಲಿ ಭಾಗವಹಿಸುವ ಆನೆಗಳಿಗೆ ಕನಿಷ್ಠ 20 ದಿನಗಳ ಪೂರ್ವ ತರಬೇತಿ ನೀಡಬೇಕು. ಕಾರ್ಯಕ್ರಮದ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಅಗತ್ಯ ಸಿದ್ಧತೆಗಳನ್ನು ಮಾಡಬೇಕು.

3. ದೈಹಿಕ ಮತ್ತು ಮಾನಸಿಕ ಸ್ಥಿತಿ ಪರಿಶೀಲನೆ: ಕಾರ್ಯಕ್ರಮದಲ್ಲಿ ಭಾಗವಹಿಸಲು ಆನೆಗಳು ದೈಹಿಕ ಹಾಗೂ ಮಾನಸಿಕವಾಗಿ ಸನ್ನದ್ಧವಾಗಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.

4. ಜನಸಂದಣಿ ಮತ್ತು ಶಬ್ದ ಸಹಿಸುವ ಸಾಮರ್ಥ್ಯದ ಪರಿಶೀಲನೆ: ಹೆಚ್ಚಿನ ಜನಸಂದಣಿ, ಗದ್ದಲ ಹಾಗೂ ತೀವ್ರ ಶಬ್ದಗಳಿರುವ ವಾತಾವರಣಕ್ಕೆ ಆನೆಗಳು ಸಮರ್ಪಕವಾಗಿ ಹೊಂದಿಕೊಳ್ಳಬಲ್ಲವೇ ಎಂಬುದನ್ನು ಪರಿಶೀಲಿಸಿದ ನಂತರವೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು.

5. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ: ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಆನೆಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.

ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯಬೇಡಿ..!

ಆನೆಗಳ ಬಳಕೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಸ್ಪಷ್ಟ, ಸಮಗ್ರ ಹಾಗೂ ಪರಿಣಾಮಕಾರಿ ಮಾರ್ಗಸೂಚಿಗಳನ್ನು ತುರ್ತಾಗಿ ಹೊರಡಿಸಬೇಕು ಎಂದು ರಾಮಲಿಂಗಾ ರೆಡ್ಡಿ ಅವರು ಸೂಚಿಸಿದ್ದಾರೆ.ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂಬುದು ಅವರ ಸೂಚನೆಯ ಪ್ರಮುಖ ಅಂಶವಾಗಿದೆ.ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಜುಂ ಪರ್ವೇಜ್ ಅವರಿಗೆ ಪತ್ರ ಬರೆದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ತಿಳಿಸಿದ್ದಾರೆ.

ಅನಾಹುತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆಯೇ ಮುಖ್ಯ..!

ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ ಸಂಭವಿಸಿದ ಘಟನೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳ ಬಳಕೆಯ ಸುರಕ್ಷತಾ ವ್ಯವಸ್ಥೆಗಳ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.ಆನೆಗಳು ನಿಯಂತ್ರಣ ತಪ್ಪಿದಾಗ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ಕೇವಲ ಸಂಪ್ರದಾಯ ಮತ್ತು ವೈಭವಕ್ಕೆ ಆದ್ಯತೆ ನೀಡದೆ, ಜನರ ಸುರಕ್ಷತೆ ಹಾಗೂ ಆನೆಗಳ ಯೋಗಕ್ಷೇಮಕ್ಕೂ ಸಮಾನ ಮಹತ್ವ ನೀಡಬೇಕಾಗಿದೆ.ಆನೆಗಳ ಸಹಜ ವರ್ತನೆ, ಆರೋಗ್ಯ ಮತ್ತು ಸುರಕ್ಷತೆಯನ್ನು ಕಡೆಗಣಿಸದೆ ವೈಜ್ಞಾನಿಕ ವಿಧಾನದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ರೂಪಿಸುವ ಅಗತ್ಯವಿದೆ.

ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕಟ್ಟೆಚ್ಚರ!

ಮುಂದಿನ ದಿನಗಳಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಮಲಿಂಗಾ ರೆಡ್ಡಿ ಅವರು ಸೂಚಿಸಿದ್ದಾರೆ.ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳ ಬಳಕೆಗೆ ಸಂಬಂಧಿಸಿದ ಅನುಮತಿ ಪ್ರಕ್ರಿಯೆ, ಪೂರ್ವ ತರಬೇತಿ, ಆರೋಗ್ಯ ತಪಾಸಣೆ ಹಾಗೂ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸುವ ಅಗತ್ಯವನ್ನು ಈ ಘಟನೆ ಎತ್ತಿ ತೋರಿಸಿದೆ.ಸಂಭಾವ್ಯ ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆ ಯಾವ ರೀತಿಯ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲಿದೆ ಮತ್ತು ಅವುಗಳನ್ನು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ ಎಂಬುದು ಇದೀಗ ಗಮನಾರ್ಹವಾಗಿದೆ.

ಸಂಪ್ರದಾಯದ ಹೆಸರಿನಲ್ಲಿ ಸುರಕ್ಷತೆಯೊಂದಿಗೆ ರಾಜಿ ಬೇಡ..!

ದಸರಾ, ಜಾತ್ರೆ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ಆನೆಗಳ ಪಾಲ್ಗೊಳ್ಳುವಿಕೆಗೆ ಸಾಂಸ್ಕೃತಿಕ ಮಹತ್ವವಿದೆ. ಆದರೆ ಸಾರ್ವಜನಿಕರ ಜೀವಸುರಕ್ಷತೆ ಮತ್ತು ಮೂಕಪ್ರಾಣಿಗಳ ಯೋಗಕ್ಷೇಮಕ್ಕಿಂತ ಯಾವುದೇ ಆಚರಣೆ ದೊಡ್ಡದಲ್ಲ.ಆನೆಗಳ ಸುರಕ್ಷತೆಯೂ ಮುಖ್ಯ, ಸಾರ್ವಜನಿಕರ ಪ್ರಾಣರಕ್ಷಣೆಯೂ ಅಷ್ಟೇ ಮುಖ್ಯ. ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು.

ರಘುರಾಜ್ ಹೆಚ್. ಕೆ… 9449553305

ಶಿವಮೊಗ್ಗ

EDITOR NEWS WARRIORS