5
ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ ಮೈತ್ರಿ (ಕಿರಿಯ ಶ್ರೇಣಿ ) ಇವರನ್ನು ಶಿವಮೊಗ್ಗ ಉಪವಿಭಾಗ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಆದರೆ ಇಲ್ಲಿಂದ ವರ್ಗಾವಣೆಗೊಂಡ ಸತ್ಯನಾರಾಯಣಗೆ ಜಾಗ ತೋರಿಸಿರಲಿಲ್ಲ ಇದನ್ನು ಪ್ರಶ್ನಿಸಿ ಸತ್ಯನಾರಾಯಣ ಕೆಎಟಿ ಮರೆ ಹೋಗಿದ್ದರು ಕೆಎಟಿ ವರ್ಗಾವಣೆಗೊಂಡ ಅಧಿಕಾರಿಗೆ ಸೂಕ್ತ ಸ್ಥಳ ನಿಯೋಜನೆ ಆಗುವವರೆಗೂ ವರ್ಗಾವಣೆಗೊಳಿಸುವಂತಿಲ್ಲ ಎಂದು ವರ್ಗಾವಣೆಗೆ ತಡೆ ನೀಡಿತ್ತು.
ಇದು ಶಿವಮೊಗ್ಗದ ಸಾರ್ವಜನಿಕರಲ್ಲಿ ಅಧಿಕಾರಿಗಳಲ್ಲಿ ಗೊಂದಲದ ಗೂಡಾಗಿತ್ತು ಯಾರು ಉಪವಿಭಾಗಾಧಿಕಾರಿ ಎನ್ನುವ ಗೊಂದಲ ಉಂಟಾಗಿತ್ತು ಆದರೆ ಈ ಗೊಂದಲಕ್ಕೆ ಇಂದು ತೆರೆ ಬಿದ್ದಿದ್ದು ಸತ್ಯನಾರಾಯಣ ಗೆ ಸರ್ಕಾರ ಜಾಗ ನಿಗದಿಪಡಿಸಿದ್ದು ಡಾಕ್ಟರ್ ಮೈತ್ರಿಯವರು ಬಿಡಿಎ ಇಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳಕ್ಕೆ ಕೂಡಲೇ ಕರ್ತವ್ಯ ನಿರ್ವಹಿಸುವಂತೆ ಸತ್ಯನಾರಾಯಣಗೆ ಸರ್ಕಾರ ಆದೇಶ ಹೊರಡಿಸಿದೆ.
ಕೆಎಟಿ ನೀಡಿದ ತಡೆ ಪ್ರತಿ :



