Home ರಾಜ್ಯShivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..!

Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..!

by EDITOR NEWS WARRIORS
0 comments
ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ (ಬಿಬಿಎಂಪಿ 7 ) ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ,ಎ,ಎಸ್ (ಕಿರಿಯ ಶ್ರೇಣಿ ) ಅಧಿಕಾರಿಯಾದ ಡಾಕ್ಟರ್ ಮೈತ್ರಿ ಅವರನ್ನು ರಾಜ್ಯ ಸರ್ಕಾರ ಕಳೆದ ವಾರ ಶಿವಮೊಗ್ಗದ ಉಪ ವಿಭಾಗ ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಹೆಚ್ ಸತ್ಯನಾರಾಯಣ ಅವರಿಗೆ ವರ್ಗಾವಣೆ ಮಾಡಲಾಗಿತ್ತು ಆದರೆ ಸ್ಥಳ ತೋರಿಸಿರಲಿಲ್ಲ.
 ಕೆಇಟಿ ಮರೆಹೋದ ಜಿಹೆಚ್ ಸತ್ಯನಾರಾಯಣ..?!
ಆದರೆ ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪವಿಭಾಗಅಧಿಕಾರಿ ಜಿಹೆಚ್ ಸತ್ಯನಾರಾಯಣ ಈ ಆದೇಶವನ್ನು ಪ್ರಶ್ನಿಸಿ ಕೆಇಟಿ ಮರೆ ಹೋಗಿದ್ದರು ಎನ್ನಲಾಗುತ್ತಿದ್ದು ಅವರ ಆಕ್ಷೇಪಣೆ ಪ್ರಸ್ತುತ ಅವರು ಜಿಲ್ಲಾ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದು ಖಜಾಂಚಿಯಾಗಿ ಆಯ್ಕೆಯಾಗಿದ್ದರು ಇದನ್ನೇ ಆಧಾರವಾಗಿಟ್ಟುಕೊಂಡು ಕೆಇಟಿ ಮರೆ ಹೋದ ಸತ್ಯನಾರಾಯಣ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದು ಪದಾಧಿಕಾರಿಗಳಾದವರನ್ನು ಅವರ ಅವಧಿ ಮುಗಿಯುವವರೆಗೂ ನಿರ್ದಿಷ್ಟ ಕಾರಣಗಳಿಲ್ಲದೆ ವರ್ಗಾವಣೆ ಮಾಡುವಂತಿಲ್ಲ ಒಂದು ವೇಳೆ ನಿರ್ದಿಷ್ಟ ಕಾರಣ ಇದ್ದು ವರ್ಗಾವಣೆ ಮಾಡಿದರೆ ವರ್ಗಾವಣೆಯ ಸ್ಥಳ ತೋರಿಸಬೇಕು ಆದರೆ ಸತ್ಯನಾರಾಯಣ ಪ್ರಕರಣದಲ್ಲಿ ಸರ್ಕಾರ ವರ್ಗಾವಣೆ ಮಾಡಿದೆ ವಿನಃ ಅವರಿಗೆ ಬೇರೆ ಸ್ಥಳವನ್ನು ತೋರಿಸಿಲ್ಲ ಇದೇ ಮಾನದಂಡ ಇಟ್ಟುಕೊಂಡು ಸತ್ಯನಾರಾಯಣ್ ಪ್ರಶ್ನಿಸಿದ್ದಾರೆ.
ವರ್ಗಾವಣೆಗೆ ತಡೆ..?!
ಸತ್ಯ ನಾರಾಯಣ್ ವರ್ಗಾವಣೆಗೆ ತಡೆ ಬಿದ್ದಿದ್ದು ರಿಲೀವ್ ಆಗದಂತೆ ಆದೇಶ ಬಂದಿದೆ ಎನ್ನಲಾಗುತ್ತಿದೆ.
ಡಾಕ್ಟರ್ ಮೈತ್ರಿಗೆ ಅಧಿಕಾರ ಹಸ್ತಾಂತರ ಮಾಡಿರಲಿಲ್ಲ ಸತ್ಯನಾರಯಣ..!
ಶಿವಮೊಗ್ಗಕ್ಕೆ ಉಪವಿಭಾಗ ಅಧಿಕಾರಿಯಾಗಿ ವರ್ಗಾವಣೆಯಾಗಿ ಬಂದ ಡಾಕ್ಟರ್ ಮೈತ್ರಿಗೆ ಸತ್ಯನಾರಾಯಣ ಚಾರ್ಜ್ ನೀಡಿರಲಿಲ್ಲ ಡಾಕ್ಟರ್ ಮೈತ್ರಿಯವರು ಸರ್ಕಾರದ ಆದೇಶ ಪಾಲಿಸಬೇಕಾಗಿತ್ತು ಹಾಗಾಗಿ ಅವರು joining report ಮಾಡಿಕೊಂಡಿದ್ದೇನೆ ಆದರೆ ಕಚೇರಿಯ ದಾಖಲೆಗಳು, ಸ್ವತ್ತುಗಳು, ಕಡತಗಳು ಸಂಪೂರ್ಣವಾಗಿ ನನಗೆ ಹಸ್ತಾಂತರವಾಗಿಲ್ಲ ಎಂದು ವರದಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು. ಹಳೆಯ ಅಧಿಕಾರಿ ಚಾರ್ಜ್ ನೀಡಿಲ್ಲ ಎನ್ನುವ ಕಾರಣಕ್ಕೆ ತಮ್ಮ ಕೆಲಸವನ್ನು ನಿಲ್ಲಿಸುವಂತಿಲ್ಲ ಇಲ್ಲಿ ಡಾ. ಮೈತ್ರಿ ಅವರು ತಮ್ಮ ಕೆಲಸ ಮಾಡಿದ್ದಾರೆ.
ವರ್ಗಾವಣೆ ರಕ್ಷಣೆ ಕಾಯ್ದೆ ಸತ್ಯನಾರಾಯಣ್ ಗೆ ವರವಾಯಿತು..!
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳಿಗೆ ವರ್ಗಾವಣೆ ರಕ್ಷಣೆ transfer protection ಇದೆ 2025/ 26ರ ವರ್ಗಾವಣೆ ಮಾರ್ಗಸೂಚಿಯ guideline 8(5 )ಪ್ರಕಾರ ಸಂಘದ ಪದಾಧಿಕಾರಿಯನ್ನು ಅವರ ಅವಧಿ ಮುಗಿಯುವವರೆಗೂ ವರ್ಗಾವಣೆ ಮಾಡಬಾರದೆಂದು ಹೇಳಲಾಗಿದೆ. ಇತ್ತೀಚಿನ ಹೈಕೋರ್ಟ್ ತೀರ್ಪಿನ ಪ್ರಕಾರ ರಾಜ್ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳಿಗೂ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಅವಧಿ ಮುಗಿಯುವವರೆಗೂ ವರ್ಗಾವಣೆ ಮಾಡಬಾರದು ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಸರ್ಕಾರ ವರ್ಗಾವಣೆ ಮಾಡಬಹುದು 2025ರ ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ಸಾರ್ವಜನಿಕ ದೂರು ಇದ್ದರೆ ಸಂಘದ ಪದಾಧಿಕಾರಿಯನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಹೇಳಲಾಗಿದೆ.
ಆದರೆ ಕೇವಲ ಅಸ್ಪಷ್ಟ ಆಧಾರವಿಲ್ಲದ ದೂರಿನ ಮೇಲೆ ವರ್ಗಾವಣೆ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.
ಕುತೂಹಲ ಕೆರಳಿಸಿದ ವರ್ಗಾವಣೆ ಪ್ರಕರಣ ಇದಾಗಿದ್ದು ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಇತ್ತೀಚಿಗೆ ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು ಇದೆ ಆದೇಶ ಆಧಾರವಾಗಿಟ್ಟುಕೊಂಡು ವರ್ಗಾವಣೆಯನ್ನು ರದ್ದುಗೊಳಿಸಿಕೊಂಡು ಬಂದಿದ್ದರು ಇದೀಗ ಇದು ಎರಡನೇ ವರ್ಗಾವಣೆ ಪ್ರಕರಣ..
ಹಾಗಾದರೆ ಡಾಕ್ಟರ್ ಮೈತ್ರಿ ವರ್ಗಾವಣೆ ಎಲ್ಲಿಗೆ..?
 ಈ ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣದಲ್ಲಿ ಜಿಹೆಚ್ ಸತ್ಯನಾರಾಯಣ್ ಇಲ್ಲೇ ಮುಂದುವರೆದರೆ ಇಲ್ಲಿಗೆ ಬಂದಿರುವ ಡಾಕ್ಟರ್ ಮೈತ್ರಿ ಎಲ್ಲಿಗೆ ಮತ್ತೆ ವರ್ಗಾವಣೆಯಾಗಿ ಹೋಗುತ್ತಾರೆ ಎನ್ನುವ ಕುತೂಹಲ ಉಂಟಾಗಿದೆ.
ರಘುರಾಜ್ ಹೆಚ್. ಕೆ.. 9449553305…

Related Articles

Latest news
Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..!