ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ ಭ್ರಷ್ಟಾಚಾರದ ಕೋಪವಾಗಿದೆ ಸಾಕಷ್ಟು ಬಾರಿ ಇದರ ಬಗ್ಗೆ ಪತ್ರಿಕೆ ಬರೆದಿದೆ ಆದರೂ ಕೂಡ ಇಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಭ್ರಷ್ಟ ಕುಲಪತಿಗಳು ಬದಲಾದರೂ ಭ್ರಷ್ಟತೆ ಕಡಿಮೆಯಾಗಿಲ್ಲ ಇನ್ನೂ ಒಂದು ಹಂತಕ್ಕೆ ಮುಂದೆ ಹೋಗಿದೆ ಈಗಿರುವ ಕುಲಪತಿಗಳು ಭ್ರಷ್ಟರನ್ನು ತಮ್ಮ ಜೊತೆ ಇಟ್ಟುಕೊಂಡು ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಆಯೋಜನೆ ಆಗಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಆದ್ವಾನ ಈ ಸುದ್ದಿಯಲ್ಲಿ ಇದೆ ಇದೇ ತಿಂಗಳು 18 /11 /2025 ರಂದು ನಡೆಯಲಿರುವ ಎಲ್ಲೂ ಬಹಿರಂಗವಾಗದ ಆಹ್ವಾನ ಪತ್ರಿಕೆಯನ್ನು ಹಾಕಲಾಗಿದೆ ಅದನ್ನು ಗಮನಿಸಿ ಈ ಕಾರ್ಯಕ್ರಮಕ್ಕೆ ಬರುವ ವ್ಯಕ್ತಿಗಳು ಒಂದು ನಿರ್ದಿಷ್ಟವಾದ ರಾಜಕೀಯ ಅಜೆಂಡಾ ಇಟ್ಟುಕೊಂಡು ಬಂದಿರುವವರು ಕಾರ್ಯಕ್ರಮ ಆಯೋಜನೆ ಮಾಡಿರುವುದು ಎಷ್ಟು ಸರಿ..?! ಬಸವ, ಅಂಬೇಡ್ಕರ್ ,ಗಾಂಧಿ ವಿಚಾರಧಾರೆಗಳನ್ನು ಒಪ್ಪದ ಜನರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸರಿನಾ.. ? ವಿಶ್ವವಿದ್ಯಾನಿಲಯ ಜಾತಿ ಧರ್ಮ ಆಧಾರದ ಮೇಲೆ ವಿಷಬೀಜ ಬಿತ್ತುವ ಕೋಮುಗಲಭೆ ಸಾರುವ ಜನರು ಚರ್ಚಿಸುವ ವ್ಯಕ್ತಿಗಳು ಬರುವುದು ಎಷ್ಟು ಸರಿ..?! ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬೀರುವ ಪರಿಣಾಮಕ್ಕೆ ಹೊಣೆ ಯಾರು..?! ಹಾಗೆ ವಿಶ್ವವಿದ್ಯಾನಿಲಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡಿ ಕಳೆದ 18 ವರ್ಷಗಳಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಷಣ್ಮುಖ ಎನ್ನುವ ಭ್ರಷ್ಟ ಪ್ರೊಫೆಸರ್ ನ ರಕ್ಷಣೆಗೆ ವಿಶ್ವವಿದ್ಯಾನಿಲಯದ ಕುಲಪತಿಗಳು ನಿಂತರಾ..?! ಎನ್ನುವ ಅನುಮಾನ ಕಾಡುತ್ತಿದೆ ಏಕೆಂದರೆ ತಮಿಳುನಾಡಿನ ಒಬಿಸಿ ಹಿಂದುಳಿದ ವರ್ಗಕ್ಕೆ ಕರ್ನಾಟಕದಲ್ಲಿ ನಾಯಕ ST ಎಂದು ಜಾತಿ ಪ್ರಮಾಣ ಪತ್ರ ಮಾಡಿಕೊಂಡು ನೌಕರಿ ಗಿಟ್ಟಿಸಿಕೊಂಡು ಬಂದಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಆದೇಶ ಹೊರಡಿಸಿದ್ದು ಆ ಆದೇಶದಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಷಣ್ಮುಗಂ ಎನ್ನುವ ಪ್ರಾಧ್ಯಾಪಕ ನಕಲಿ ಜಾತಿ ಪ್ರಮಾಣ ಪತ್ರವನ್ನು ಗಿಟ್ಟಿಸಿಕೊಂಡು ಕೆಲಸ ತೆಗೆದುಕೊಂಡಿದ್ದಾನೆ ಎಂದು ಈತನ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿಸಿದ್ದರು ಆದರೆ ಈ ಆದೇಶದ ವಿರುದ್ಧ ಷಣ್ಮುಖ ತಡೆಯಾಜ್ಞೆ ತಂದಿದ್ದರು .

ಷಣ್ಮುಖ ತಂದಿರುವ ತಡೆಯಾಜ್ಞೆ ವಿರುದ್ಧ ಇಲ್ಲಿಯವರೆಗೂ ವಿಶ್ವವಿದ್ಯಾನಿಲಯದ ಕಡೆಯಿಂದ ತಡೆಯಾಜ್ಞೆ ವಿರುದ್ಧ ದಾವೆಯನ್ನು ಸಲ್ಲಿಸಿಲ್ಲ ಬದಲಾಗಿ ಈ ಕಾರ್ಯಕ್ರಮಕ್ಕೆ ಷಣ್ಮುಖ ಪರವಾಗಿ ವಾದಿಸುತ್ತಿರುವ ವಕೀಲರನ್ನೇ ಕರೆದಿರುವುದು ವಿಪರ್ಯಾಸವೇ ಸರಿ.
ಇಲ್ಲೂ ಕೂಡ ಪರೋಕ್ಷವಾಗಿ ಕುಲಪತಿಗಳು ಈ ಭ್ರಷ್ಟರ ರಕ್ಷಣೆಗೆ ನಿಂತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡಿ ಕೆಲಸವನ್ನು ಗಿಟ್ಟಿಸಿಕೊಂಡು ಒಬ್ಬ ನಿರುದ್ಯೋಗಿ ಯುವಕನಿಗೆ ಮೋಸ ಮಾಡಿರುವ ಇಂಥ ಪ್ರಾಧ್ಯಾಪಕನಿಗೆ ರಕ್ಷಣೆ ಮಾಡುತ್ತಿರುವುದು ಏಕೆ..?! ಗೊತ್ತಿಲ್ಲ ಹಾಗೆ ಜಾತಿ, ಧರ್ಮ ,ವಿಷ ಬೀಜ ಬಿತ್ತುವ ಕೆಲವಷ್ಟು ಜನರನ್ನೇ ಕರೆದುಕೊಂಡು ಬಂದು ಕಾರ್ಯಕ್ರಮ ಮಾಡುತ್ತಿರುವುದು ಎಷ್ಟು ಸರಿ..?! ಒಂದು ವೇಳೆ ಕಾರ್ಯಕ್ರಮ ಮಾಡುವುದೇ ಆದರೆ ಎಲ್ಲಾ ವರ್ಗದವರನ್ನು ಸಮಾನ ಮನಸ್ಥಿತಿಯುಳ್ಳ ನಾಯಕರನ್ನು ,ಹಿತ ಚಿಂತಕರನ್ನು ,ಕರೆದು ಕಾರ್ಯಕ್ರಮ ಮಾಡಿದ್ದರೆ ಆ ಕಾರ್ಯಕ್ರಮ ಒಂದು ಅರ್ಥಗರ್ಭಿತ ವಾಗಿರುತ್ತಿತ್ತು ಅದು ವಿದ್ಯಾರ್ಥಿಗಳಿಗೂ ಕೂಡ ಅನುಕೂಲವಾಗುತ್ತಿತ್ತು.
ವಿಶ್ವಮಾನವ ಸಂದೇಶ ಸಾರಿದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅರ್ಥಗರ್ಭಿತ ಕಾರ್ಯಕ್ರಮ ಮಾಡಬೇಕು ಆದರೆ ಒಂದು ಪಕ್ಷದ ಒಂದು ರಾಜಕೀಯ ಅಜೆಂಡಾ ಇಟ್ಟುಕೊಂಡಿರುವ ವ್ಯಕ್ತಿಗಳನ್ನು ಕರೆತಂದು ಅಂಬೇಡ್ಕರ್, ಬಸವ ,ಗಾಂಧಿ ಚಿಂತನೆಗಳನ್ನು ವಿರೋಧಿಸುವ ವ್ಯಕ್ತಿಗಳನ್ನು ಕರೆತಂದು ಕಾರ್ಯಕ್ರಮ ಮಾಡುತ್ತಿರುವುದು ಎಷ್ಟು ಸರಿ..?! ಭಗವದ್ಗೀತೆ ಬಗ್ಗೆ ನಮ್ಮ ವಿರೋಧವಿಲ್ಲ ಆದರೆ ಭಗವದ್ಗೀತೆ ಇಟ್ಟುಕೊಂಡು ಜಾತಿ ಧರ್ಮ ಪದ್ಧತಿ ತಂದು ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಕರೆತಂದು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸುವುದು ಎಷ್ಟು ಸರಿ ಇದಕ್ಕೆ ನಮ್ಮ ವಿರೋಧವಿದೆ.
ಕೆ ಪಿ ಶ್ರೀಪಾಲ್ ಹಿರಿಯ ವಕೀಲರು ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು…
