Home ಶಿವಮೊಗ್ಗಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಮರೂಪ ಸಮಾರಂಭ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ..!

ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಮರೂಪ ಸಮಾರಂಭ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ..!

by EDITOR NEWS WARRIORS
0 comments
ಶಿವಮೊಗ್ಗ  : ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಮರೂಪ ಸಮಾರಂಭ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ನಂದನ ಎಜುಕೇಶನ್ ಟ್ರಸ್ಟ್ (ರಿ) ಶಿವಮೊಗ್ಗ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ನಂದನ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಕೆ ಈ ಕಾಂತೇಶ್ ರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು   ಚಂದ್ರಪ್ಪ ಎಸ್ ಗುಂಡಪ್ಪಳ್ಳಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಶಿವಮೊಗ್ಗ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನ ವೈಯಕ್ತಿಕ ಜೀವನದ ಬಗ್ಗೆ ಶುಭ ಹಾರೈಸಿದರು.
 ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿವೇಕ್ ವಿ ಪಾಯಸ್ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ದ ಕಲ್ಪನೆ ಉದ್ದೇಶ,  ವಿದ್ಯಾರ್ಥಿ ಜೀವನ ಗುರಿ ಉದ್ದೇಶ, ದೈಹಿಕ, ಮಾನಸಿಕ, ಸಾಮಾಜಿಕ, ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪುವ ಕಾರಣಗಳು ಘಟಾನವಳಿಗಳು, ಮಾರಣಾoತಿಕಾ ಖಾಯಿಲೆಗಳು, ದುಶ್ಚಟಕ್ಕೆ ಬಲಿಯಾದಾಗ ಎದುರಾಗುವ ಪರಿಣಾಮಗಳು, ಅಪಾಯಗಳು ಅನಾಹುತಗಳು, ಮನೆಯಲ್ಲಿ ಕುಟುಂಬದಲ್ಲಿ, ಶಾಲೆಯಲ್ಲಿ ಸಮಾಜದಲ್ಲಿ ಆಗುವ ಪರಿಣಾಮಗಳ ಬಗ್ಗೆ ಅಂಕಿ ಅಂಶ ಸಹಿತ ಮಾರ್ಗದರ್ಶನ ನೀಡಿದರು. ಇದಕ್ಕೆ ಪರಿಹಾರ ಕೌಶಲ್ಯ ಗಳ ಬಗ್ಗೆ ಉದಾಹರಣೆ ಸಹಿತ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ 29 ಕಾಲೇಜ್ ನ 535 ವಿದ್ಯಾರ್ಥಿಗಳು ಪ್ರಬಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ದ್ವಿತೀಯ ತೃತೀಯ ಚತುರ್ಥ ಪಂಚಮ ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು.
ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷರು ನಟರಾಜ ಬಾದಾಮಿ, ಜಿಲ್ಲಾ ಸಂಘಟನಾ ಅಧ್ಯಕ್ಷರು ಮೋಹನ್ ಶೆಟ್ಟಿ ಹೊಸನಗರ, ಜಿಲ್ಲಾ ಕಾರ್ಯದರ್ಶಿಗಳು ನಿರ್ದೇಶಕರು ಮುರಳೀಧರ ಶೆಟ್ಟಿ, ಉಪಾಧ್ಯಕ್ಷರು ಶ್ರೀಮತಿ ಮಮತಾ ಶಿವಣ್ಣ ಶಿವಮೊಗ್ಗ, ಸದಸ್ಯರಾದ ಉದಯ ಶೆಟ್ಟಿ ಶಿವಮೊಗ್ಗ,  ಪಾಲಾಕ್ಷಪ್ಪ ಭದ್ರಾವತಿ, ಶ್ರೀಮತಿ ಶಶಿಕಲಾ ಮಲ್ಲಪ್ಪ ಹೊಸನಗರ, ಶ್ರೀಮತಿ ಹಿಮಾ ಶ್ವೇತಾ ಭದ್ರಾವತಿ, ಶ್ರೀಮತಿ ರೂಪ ಶೇಷಾಗಿರಿ ಭದ್ರಾವತಿ,  ಮಂಜುನಾಥ್ ಶಿವಮೊಗ್ಗ, ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಉಲ್ಲಾಸ್ ಮೇಸ್ತಾ ಸ್ವಾಗತಿಸಿದರು.
ನಂದನ ಪದವಿಪೂರ್ವ ಕಾಲೇಜ್ ನ ಪ್ರಾಂಶುಪಾಲರು ನಾಗೇಶ್ ವಂದಿಸಿದರು ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕಾರ್ಯಕ್ರಮ ನೀರೂಪಿಸಿದರು.
ಒಟ್ಟು 300 ಮಕ್ಕಳು  ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...