Home ಅರಣ್ಯ ಇಲಾಖೆBig news: ನೀರಾನೆ ದಾಳಿ ಡಾ/ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣ ಅಮರ್ ಅಕ್ಷರ್..?!

Big news: ನೀರಾನೆ ದಾಳಿ ಡಾ/ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣ ಅಮರ್ ಅಕ್ಷರ್..?!

by EDITOR NEWS WARRIORS
0 comments
‎ಶಿವಮೊಗ್ಗ : ತ್ಯಾವರೆ ಕೊಪ್ಪದ ಸಿಂಹಧಾಮದಲ್ಲಿ ಒಂದು ಅವಘಡ ಸಂಭವಿಸಿದ್ದು ಸಿಂಹದಾಮದಲ್ಲಿ ಒಟ್ಟು ಎರಡು ನೀರಾನೆಗಳಿದ್ದು ಅದರಲ್ಲಿ ಒಂದು ನೀರಾನೆ  ಎಂಟು ತಿಂಗಳ ಗರ್ಭಿಣಿ ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕುವ ಸಾಧ್ಯತೆ ಇತ್ತು ಆದರೆ  ನಿನ್ನೆ ತಡರಾತ್ರಿ 11:45ರ ಸುಮಾರಿಗೆ ಯುವ ಪಶುವೈದ್ಯೆ  ಡಾಕ್ಟರ್ ಸಮೀಕ್ಷಾ ರೆಡ್ಡಿ  ಚಿಕಿತ್ಸೆಗೆಂದು ತೆರಳಿದ್ದಾಗ ನೀರಾನೆ ದಿಡೀರನೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಮೇಲೆ ದಾಳಿ ಮಾಡಿದೆ ಡಾಕ್ಟರ್ ಸಮೀಕ್ಷಾ ರೆಡ್ಡಿ ತೀವ್ರ ಸ್ವರೂಪದ ದಾಳಿಯಿಂದ ಚೇತರಿಸಿಕೊಳ್ಳಲು ಆಗದೆ  ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆದರೆ ಸಾವಿಗೆ ಅಸಲಿ ಕಾರಣ ಯಾರು..?!
ಸಾಮಾನ್ಯವಾಗಿ ವನ್ಯ ಜೀವಿಗಳಿಗೆ ಚಿಕಿತ್ಸೆ ನೀಡುವಾಗ ಅವು ಗರ್ಭದ ವ್ಯವಸ್ಥೆಯಲ್ಲಿ ಇರುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಸ್ಓಪಿ  ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಆದರೆ ಇದ್ಯಾವುದು ಇಲ್ಲಿ ನಡೆದಿಲ್ಲ .
ಎಸ್ ಓ ಪಿ ನಿಯಮಗಳೆಂದರೆ ಏನು..?! 
1)ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು.
2)ಒಂದು ವೇಳೆ ನೀಡಿದರು ಕೂಡ ಅರವಳಿಕೆ ಚುಚ್ಚುಮದ್ದನ್ನು ನೀಡಿ ನೀಡಬೇಕು.
3)ಜೊತೆಗೆ ಒಂದಷ್ಟು ಜನ ಸಿಬ್ಬಂದಿಗಳು ಇರಬೇಕು.
4)ಪಟಾಕಿ ಇರಬೇಕು.
5)ಏರ್ ಫೈರ್ ಗನ್ ಇರಬೇಕು.
ಇದ್ಯಾವುದೂ ಇಲ್ಲದೆ ಇಲ್ಲಿ ಚಿಕಿತ್ಸೆ ನೀಡಲು ನೀರಾನೆ ಬಳಿ ಇಳಿದಿರುವುದು ಎಷ್ಟು ಸರಿ.
ಉಪ ಸಂರಕ್ಷಣಾ ಅಧಿಕಾರಿ ಅನುಮತಿ ತೆಗೆದುಕೊಂಡೆ ವೈದ್ಯರು ಈ ಕಾರ್ಯಾಚರಣೆಗೆ ಇಳಿಯಬೇಕು ಉಪ ಸಂರಕ್ಷಣಾ ಅಧಿಕಾರಿಗಳು ಈ ಯುವ ವೈದ್ಯೆ ಗೆ ಅನುಮತಿ ನೀಡಿದ್ದು ಏಕೆ..?!
ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ನಾಲ್ಕು ತಿಂಗಳುಗಳು ಕಳೆದಿದೆ ಆದರೂ ಅವರನ್ನೇ ಇಟ್ಟುಕೊಂಡಿದ್ದಾರೆ ಜೊತೆಗೆ ನೀರಾನೆ ದಾಳಿಯಿಂದ ಮೃತಪಟ್ಟ ಯುವ ವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ನೇಮಕವಾಗಿ ಕೇವಲ ಒಂದುವರೆ ತಿಂಗಳು ಕಳೆದಿದೆ ಈಕೆಗೆ ಯಾವ ಆದರದ ಮೇಲೆ ಚಿಕಿತ್ಸೆ ನೀಡಲು ಅನುಮತಿ ನೀಡಿದರು ಉಪ ಸಂರಕ್ಷಣಾಧಿಕಾರಿ ಸಾಮಾನ್ಯವಾಗಿ ವನ್ಯ ಪ್ರಾಣಿಗಳನ್ನು ಚಿಕಿತ್ಸೆ ನೀಡುವ ಪೂರ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ವೈದ್ಯರು ಒಂದಷ್ಟು ಕಡೆ ಟ್ರೈನಿಂಗ್ ಕೂಡ ಪಡೆದುಕೊಂಡಿರಬೇಕು  ಡೆರಡೋನಲ್ಲಿ ಟ್ರೈನಿಂಗ್ ಪಡೆದಿರಬೇಕು ಆದರೆ ಈ ಯುವ ವೈದ್ಯೆ ಟ್ರೈನಿಂಗ್ ಪಡೆದಿದ್ದರಾ..?! ಪಡೆದಿಲ್ಲ ವೆಂದಾದರೆ ಈಕೆಗೆ ಅನುಮತಿ ನೀಡಿದ್ದು ಉಪ ಸಂರಕ್ಷಣಾ ಅಧಿಕಾರಿಯ ಕರ್ತವ್ಯ ಲೋಪವಲ್ಲವೇ..?! ಒಬ್ಬ ಹಿರಿಯ ವೈದ್ಯರ ಅನುಪಸ್ಥಿತಿಯಲ್ಲಿ ಯುವ ವೈದ್ಯೆ ಈ ಜವಾಬ್ದಾರಿ ನೀಡಿರುವುದು ಉಪ ಸಂರಕ್ಷಣಾ ಅಧಿಕಾರಿಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.
ಉಪ ಸಂರಕ್ಷಣಾ ಅಧಿಕಾರಿ ಅಮರ್ ಅಕ್ಷರ್ ವಿರುದ್ಧ ಇದೆ ಸಾಕಷ್ಟು ಆರೋಪಗಳು..!
ಉಪ ಸಂರಕ್ಷಣಾಧಿಕಾರಿ ಅಮರ್ ಅಕ್ಸರ್  ತ್ಯಾವರೆಕೊಪ್ಪದಲ್ಲಿರುವ ಸಿಂಹಧಾಮಕ್ಕೆ ಬಂದಮೇಲೆ ಸಾಕಷ್ಟು ಅವಘಡಗಳು ಸಂಭವಿಸಿವೆ ‌ಅದರಲ್ಲಿ ಪ್ರಮುಖವಾಗಿ ಒಬ್ಬ ಸಿಬ್ಬಂದಿ ಕ್ವಾಟ್ರಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಆ ಪ್ರಕರಣ ಇಲ್ಲಿಯವರೆಗೂ ಏಕೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ಹಾಗೆ ಎಸ್ಟಿಮೇಶನ್ ವಿಚಾರಗಳಲ್ಲಿ ‌ ಟೆಂಡರ್ ವಿಚಾರಗಳಲ್ಲಿ ಹಾಗೂ ಪ್ರಾಣಿಗಳಿಗೆ ನೀಡುವ ಆಹಾರಗಳಲ್ಲಿ ಸಾಕಷ್ಟು ಲೋಪಗಳಿವೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ ಜೊತೆಗೆ ಆಂತರಿಕ ಕಲಹಗಳು ಎಲ್ಲಿ ಹೆಚ್ಚಾಗಿದ್ದು ಸಿಬ್ಬಂದಿಗಳ ಜೊತೆಗೆ  ಸರಿಯಾದ ಸೌಹಾರ್ದತೆಯ ಕೊರತೆಯಿಂದ ಅನೇಕ ಅವಘಡಗಳು ಸಂಭವಿಸಿದ್ದು ಕೆಲವು ಪ್ರಕರಣಗಳು ಹೊರಗೆ ಬಂದಿಲ್ಲ ಅಮರ್ ಅಕ್ಷರ್ ಕರ್ತವ್ಯ ಲೋಪ ಇಲ್ಲಿ ಎದ್ದು ಕಾಣಿಸುತ್ತಿದೆ ಈ ಯುವ ವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ  ಸಾವಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅಮರ್ ಅಕ್ಷರ್ ಕಾರಣ ಎಂದರೆ ತಪ್ಪಾಗುವುದಿಲ್ಲ .
ಅರಣ್ಯ ಸಚಿವರೆ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು..! 
ಅರಣ್ಯ ಸಚಿವ ಈಶ್ವರ್ ಖಂಡ್ರೆಯವರೇ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಈಗಷ್ಟೇ ಪದವಿ ಮುಗಿಸಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ರೆಡಿಯಾಗಿದ್ದ ಯವ ವೈದ್ಯೆ ಸಮೀಕ್ಷಾ ರೆಡ್ಡಿ ಸಾವು ಎಲ್ಲಾ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳಿಗೆ ಪಾಠವಾಗಬೇಕು ಆ ದಿಕ್ಕಿನಲ್ಲಿ ಈಶ್ವರ ಖಂಡ್ರೆ ಅವರು ದಿಟ್ಟ ಕ್ರಮ ತೆಗೆದುಕೊಳ್ಳಬೇಕು ‌.
ಗಾಜನೂರು ಸಕ್ರೆ ಬೈಲ್  ನಲ್ಲಿ ಇಲ್ಲ ವೈದ್ಯರು..!
ಗಾಜನೂರು ಸಕ್ರೆ ಬೈಲ್ ಆನೆ ಬಿಡಾರದಲ್ಲಿ  ಸುಮಾರು 28 ಆನೆಗಳು ಇದ್ದರೂ ಕೂಡ ಕಳೆದ ಎರಡು ವರ್ಷಗಳಿಂದ ಒಬ್ಬ ವೈದ್ಯರು ಇಲ್ಲದಿರುವುದು ದುರಂತ ಆನೆಗಳನ್ನು ನೋಡಿಕೊಳ್ಳುವುದು ಯಾರು..?! ದಸರಾ ಅಂಬಾರಿ ಹೊತ್ತ ಆನೆ ಸೇರಿದಂತೆ ಸಾಕಷ್ಟು ಆನೆಗಳಿಗೆ ಸಮಸ್ಯೆ ಉಂಟಾಗಿ ಅದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು ಇದೀಗ ಎಲ್ಲಾ ಆನೆಗಳಿಗೂ ಚಿಕಿತ್ಸೆ ನೀಡಿ ಎಲ್ಲಾ ಆನೆಗಳು ಕ್ಷೇಮವಾಗಿವೆ ಆದರೆ ಮುಂದೆ ಯಾವುದಾದರೂ ಆನೆಗಳಿಗೆ ಸಮಸ್ಯೆ ಉಂಟಾದರೆ ಅದನ್ನು ನೋಡಿಕೊಳ್ಳುವುದು ಯಾರು ಆನೆ ಬಿಡಾರಕ್ಕೆ ಒಬ್ಬ ತಜ್ಞ ವೈದ್ಯರ ನೇಮಕವಾಗಬೇಕು.
ರಘುರಾಜ್ ಹೆಚ್‌ ಕೆ…9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...