Saturday, 14 November 2026 — News Warriors

News Warriors

Kannada News Portal Shimoga : Local News

BREAKING NEWS
ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..! ರಾಜ್ಯ Shivamogga :ಪ್ರಭಾವಿಗಳಿಂದಲೇ ಕೆರೆ ಒತ್ತುವರಿ ತೆರವು ಆರಂಭಿಸಿ ಅಧಿಕಾರಿಗಳಿಗೆ ಖಂಡ್ರೆ ಖಡಕ್ ಆದೇಶ..!ಕುಡಿಯುವ ನೀರಿಗೆ ₹67 ಸಾವಿರ ಕೋಟಿ | ರಾಜ್ಯದಲ್ಲಿ 1,000 ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ..! 24 ಗಂಟೆಯಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..! ರಾಜ್ಯ Shivamogga :ಪ್ರಭಾವಿಗಳಿಂದಲೇ ಕೆರೆ ಒತ್ತುವರಿ ತೆರವು ಆರಂಭಿಸಿ ಅಧಿಕಾರಿಗಳಿಗೆ ಖಂಡ್ರೆ ಖಡಕ್ ಆದೇಶ..!ಕುಡಿಯುವ ನೀರಿಗೆ ₹67 ಸಾವಿರ ಕೋಟಿ | ರಾಜ್ಯದಲ್ಲಿ 1,000 ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ..! 24 ಗಂಟೆಯಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..?
ಶಿವಮೊಗ್ಗ

ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..!

EDITOR NEWS WARRIORS
ವರದಿ: EDITOR NEWS WARRIORS ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 107 ವೀಕ್ಷಣೆಗಳು

 

ಪತ್ರಿಕೆಯ ವರದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದ ಬೆನ್ನಲ್ಲೇ ಮಹತ್ವದ ಕ್ರಮ – ಕ್ರೀಡಾಂಗಣದ ಮುಂಭಾಗ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ನಿಷೇಧ..!

ಶಿವಮೊಗ್ಗ: ನಗರದ ಹೃದಯಭಾಗದಲ್ಲಿರುವ ಶಿವಮೂರ್ತಿ ಸರ್ಕಲ್ ಸಮೀಪದ ಐತಿಹಾಸಿಕ ನೆಹರು ಕ್ರೀಡಾಂಗಣದ ಮುಂಭಾಗವನ್ನು ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಹೆಜ್ಜೆಯಿಟ್ಟಿದೆ. ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರು ತಮ್ಮ ಹುಟ್ಟುಹಬ್ಬ, ಶುಭಾಶಯ, ಅಭಿನಂದನಾ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಕ್ರೀಡಾಂಗಣದ ಮುಖ್ಯದ್ವಾರದ ಮುಂಭಾಗದಲ್ಲಿ ಮನಬಂದಂತೆ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದುದಕ್ಕೆ ಇದೀಗ ಜಿಲ್ಲಾಧಿಕಾರಿಗಳ ಆದೇಶದ ಮೂಲಕ ಕಡಿವಾಣ ಬಿದ್ದಿದೆ.

ನಗರದ ಪ್ರಮುಖ ಕ್ರೀಡಾಂಗಣಗಳಲ್ಲಿ ಒಂದಾಗಿರುವ ನೆಹರು ಕ್ರೀಡಾಂಗಣವು ಪ್ರತಿನಿತ್ಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಭೇಟಿ ನೀಡುವ ಪ್ರಮುಖ ತಾಣವಾಗಿದೆ. ಆದರೆ ಕಳೆದ ಸಾಕಷ್ಟು ಸಮಯದಿಂದ ಕ್ರೀಡಾಂಗಣದ ಮುಖ್ಯ ಪ್ರವೇಶದ್ವಾರದ ಸುತ್ತಮುತ್ತ ರಾಜಕೀಯ ಮುಖಂಡರ ಹುಟ್ಟುಹಬ್ಬದ ಶುಭಾಶಯಗಳು, ವಿವಿಧ ಸಂಘಟನೆಗಳ ಕಾರ್ಯಕ್ರಮಗಳು, ಅಭಿನಂದನಾ ಸಮಾರಂಭಗಳು ಸೇರಿದಂತೆ ನಾನಾ ಕಾರಣಗಳಿಗಾಗಿ ಬೃಹತ್ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿತ್ತು.

ಇದರಿಂದ ಕ್ರೀಡಾಂಗಣದ ಮುಖ್ಯದ್ವಾರದ ಸೌಂದರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ ಸಾರ್ವಜನಿಕ ಕ್ರೀಡಾ ಆಸ್ತಿಯ ಮುಂಭಾಗವೇ ಪ್ರಚಾರದ ಕೇಂದ್ರವಾಗಿ ಮಾರ್ಪಟ್ಟಿತ್ತು. ಕ್ರೀಡಾಪಟುಗಳ ಸಾಧನೆಗೆ ಸಾಕ್ಷಿಯಾಗಬೇಕಿದ್ದ ಕ್ರೀಡಾಂಗಣದ ಪ್ರವೇಶದ್ವಾರವು ವ್ಯಕ್ತಿಗಳ ಪ್ರಚಾರದ ಫ್ಲೆಕ್ಸ್‌ಗಳಿಂದ ಆವೃತವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಅಸಮಾಧಾನ ವ್ಯಕ್ತವಾಗಿತ್ತು.

 ಪತ್ರಿಕೆಯ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ..!

ನೆಹರು ಕ್ರೀಡಾಂಗಣದ ಮುಂಭಾಗದಲ್ಲಿ ನಿರಂತರವಾಗಿ ಅಳವಡಿಸಲಾಗುತ್ತಿದ್ದ ಫ್ಲೆಕ್ಸ್‌, ಬ್ಯಾನರ್‌ಗಳಿಂದ ಉಂಟಾಗುತ್ತಿದ್ದ ಅವ್ಯವಸ್ಥೆಯ ಕುರಿತು ಪತ್ರಿಕೆಯು ಈ ಹಿಂದೆಯೇ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

ಅಷ್ಟೇ ಅಲ್ಲದೆ, ಕ್ರೀಡಾಂಗಣದ ಯುವಜನ ಕ್ರೀಡಾ  ಅಧಿಕಾರಿಯಾಗಿರುವ ರೇಖಾ ನಾಯ್ಕ್ ಅವರ ಗಮನಕ್ಕೂ ಈ ಸಮಸ್ಯೆಯನ್ನು ತರಲಾಗಿತ್ತು. ಕ್ರೀಡಾಂಗಣದ ಮುಖ್ಯದ್ವಾರದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಅಗತ್ಯವನ್ನು ಅಧಿಕಾರಿಗಳ ಮುಂದಿಡಲಾಗಿತ್ತು.

ಇದೀಗ ಜಿಲ್ಲಾಧಿಕಾರಿಗಳು ನೆಹರು ಕ್ರೀಡಾಂಗಣದ ಮುಂಭಾಗದಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಮುಖಂಡರು, ಸಂಘಟನೆಗಳು ಅಥವಾ ಸಾರ್ವಜನಿಕರು ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಅಳವಡಿಸಬಾರದೆಂಬ ಆದೇಶ ಹೊರಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

ರಾಜಕೀಯ ಪ್ರಚಾರಕ್ಕಲ್ಲ, ಕ್ರೀಡಾಪಟುಗಳ ಸಾಧನೆಗೆ ಆದ್ಯತೆ ಸಿಗಲಿ..!

ಕ್ರೀಡಾಂಗಣಗಳು ಕ್ರೀಡಾಪಟುಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ, ಯುವಜನರಲ್ಲಿ ಕ್ರೀಡಾಸ್ಫೂರ್ತಿ ಬೆಳೆಸುವ ಸಾರ್ವಜನಿಕ ಆಸ್ತಿಗಳಾಗಿವೆ. ಇಂತಹ ಸ್ಥಳಗಳ ಪ್ರವೇಶದ್ವಾರಗಳು ಸ್ವಚ್ಛವಾಗಿ, ಸುಂದರವಾಗಿ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಿರುವುದು ಅತ್ಯಂತ ಅಗತ್ಯವಾಗಿದೆ.

ಆದರೆ ಹುಟ್ಟುಹಬ್ಬ ಹಾಗೂ ಇನ್ನಿತರ ಕಾರ್ಯಕ್ರಮಗಳ ನೆಪದಲ್ಲಿ ಕ್ರೀಡಾಂಗಣದ ಮುಂಭಾಗವನ್ನು ಪ್ರಚಾರದ ತಾಣವನ್ನಾಗಿ ಮಾಡಿಕೊಳ್ಳುತ್ತಿರುವ ಪ್ರವೃತ್ತಿಗೆ ಜಿಲ್ಲಾಡಳಿತ ಕಡಿವಾಣ ಹಾಕಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಆದೇಶ ಕೇವಲ ಕಾಗದಕ್ಕೆ ಸೀಮಿತವಾಗದಿರಲಿ..!

ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಬೇಕಿದೆ. ಪ್ರಭಾವಿ ರಾಜಕೀಯ ಮುಖಂಡರಾಗಲಿ, ಸಂಘಟನೆಗಳ ಪದಾಧಿಕಾರಿಗಳಾಗಲಿ ಅಥವಾ ಸಾಮಾನ್ಯ ಸಾರ್ವಜನಿಕರಾಗಲಿ, ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು.

ಮುಂದಿನ ದಿನಗಳಲ್ಲಿ ಯಾರೇ ಕ್ರೀಡಾಂಗಣದ ಮುಂಭಾಗದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತೆರವುಗೊಳಿಸುವುದರ ಜೊತೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಿದೆ.

ವಿಶೇಷವಾಗಿ ಕ್ರೀಡಾಂಗಣದ ನಿರ್ವಹಣಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಈ ಆದೇಶದ ಅನುಷ್ಠಾನದ ಬಗ್ಗೆ ನಿರಂತರ ನಿಗಾ ವಹಿಸಬೇಕಾಗಿದೆ.

ಒಟ್ಟಿನಲ್ಲಿ, ನೆಹರು ಕ್ರೀಡಾಂಗಣದ ಮುಂಭಾಗವನ್ನು ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳ ಹಾವಳಿಯಿಂದ ಮುಕ್ತಗೊಳಿಸಲು ಜಿಲ್ಲಾಡಳಿತ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಪತ್ರಿಕೆಯು ಗಮನ ಸೆಳೆದಿದ್ದ ಸಾರ್ವಜನಿಕ ಸಮಸ್ಯೆಗೆ ಇದೀಗ ಆಡಳಿತಾತ್ಮಕ ಸ್ಪಂದನೆ ದೊರೆತಿದ್ದು, ಆದೇಶ ಪರಿಣಾಮಕಾರಿಯಾಗಿ ಜಾರಿಯಾದರೆ ನೆಹರು ಕ್ರೀಡಾಂಗಣದ ಮುಖ್ಯದ್ವಾರ ತನ್ನ ಸಹಜ ಸೌಂದರ್ಯವನ್ನು ಮರಳಿ ಪಡೆಯಲಿದೆ.

ರಘುರಾಜ್ ಹೆಚ್. ಕೆ… 9449553305…

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 2009 ಲೇಖನಗಳು

EDITOR NEWS WARRIORS

EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.