Monday, 16 November 2026 — News Warriors

News Warriors

Kannada News Portal Shimoga : Local News

BREAKING NEWS
ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..! ಶಿವಮೊಗ್ಗ Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..! ರಾಜ್ಯ Shivamogga :ನಾಲ್ಕು ಸದನಗಳ ಅನುಭವ ಹೊಂದಿರುವ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ..?! ಶಿವಮೊಗ್ಗ Shivamogga : ಸಾಗರ ಉಪವಿಭಾಗದ ಆಡಳಿತಕ್ಕೆ ಅನುಭವಿ ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ್ ನೇಮಕ..! ಶಿವಮೊಗ್ಗ ನೆಹರು ಕ್ರೀಡಾಂಗಣದ ಅಂದಗೆಡಿಸುತ್ತಿದ್ದ ಫ್ಲೆಕ್ಸ್‌ಗಳಿಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಖಡಕ್ ಆದೇಶಕ್ಕೆ ಸಾರ್ವಜನಿಕರ ಮೆಚ್ಚುಗೆ..! ಶಿವಮೊಗ್ಗ Big news: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ..! ವರ್ಗಾವಣೆಗೂ ಮುನ್ನ ಡಿಸಿ ಕವಳಿಕಟ್ಟಿ ನೀಡಿದ ಆದೇಶವೇನು..?! ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ..?!Big news: Lakhs of rupees extorted in the names of the Deputy Commissioner and the Additional Deputy Commissioner! What order did DC Kavalikatti issue just before his transfer?! Is there a connection between his transfer and this incident..?! ಶಿವಮೊಗ್ಗ Shivamogga breaking :ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ರಂಪಾಟ: ಅನಾಹುತ ನಿವಾರಣೆಗೆ ದೇವರ ಮೊರೆ ಹೋದ ಅರ್ಚಕರು..! ರಾಜ್ಯ Big news :2011ರ ಕೆಎಎಸ್ ನೇಮಕಾತಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್! 2022ರ ನೇಮಕಾತಿ ಸಿಂಧುಗೊಳಿಸುವ ಕಾಯ್ದೆ ಅಸಂವಿಧಾನಿಕ; ನೇಮಕಗೊಂಡ ಅಧಿಕಾರಿಗಳ ಸೇವೆ ಅಂತ್ಯಕ್ಕೆ ಆದೇಶ! ರಾಜ್ಯ Big news: ರಾಜ್ಯ ಆರೋಗ್ಯ ಇಲಾಖೆಗೆ ಭರ್ಜರಿ ಸರ್ಜರಿ – ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ಮಹತ್ವದ ಬದಲಾವಣೆ..!
ಶಿವಮೊಗ್ಗ

Shivamogga :10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ? ಮೂಲ ಬಾರ್‌ನಲ್ಲಿ ನಡೆದಿದ್ದೇನು? ಸಾವಿನ ಸುತ್ತ ಅನುಮಾನದ ಹುತ್ತ..!

EDITOR NEWS WARRIORS
ವರದಿ: EDITOR NEWS WARRIORS ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 14 ವೀಕ್ಷಣೆಗಳು

 

₹35 ಸಾವಿರ ಸಾಲದ ಲೆಕ್ಕದ ಹಿಂದೆ ಸಾವಿನ ರಹಸ್ಯ! ಬಾರ್‌ನಲ್ಲಿ ಹಲ್ಲೆ, ಅವಮಾನ ಆರೋಪ; ಕ್ಯಾಶಿಯರ್ ಬಂಧನ, ಮಾಲೀಕರಿಗೆ ಪೊಲೀಸರ ಬಿಸಿ..!

ಶಿವಮೊಗ್ಗ: ಕೇವಲ ಸಾಲದ ಹಣ ವಸೂಲಿಯ ವಿಚಾರವಾಗಿ ಆರಂಭವಾದ ವಿವಾದವೊಂದು ವ್ಯಕ್ತಿಯೊಬ್ಬರ ಸಾವಿನ ಪ್ರಕರಣವಾಗಿ ಮಾರ್ಪಟ್ಟಿದೆಯೇ? ಬಾರ್‌ನಲ್ಲಿ ನಡೆದಿತ್ತೆನ್ನಲಾದ ಹಲ್ಲೆ ಮತ್ತು ಸಾರ್ವಜನಿಕ ಅವಮಾನವೇ ವ್ಯಕ್ತಿಯೊಬ್ಬರನ್ನು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ದೂಡಿತೇ?

ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿರುವ ಮೂಲ ಬಾರ್ ಅಂಡ್ ರೆಸ್ಟೋರೆಂಟ್ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಹೊಸಮನೆ ನಿವಾಸಿ ಶರತ್ ಬಾಬು (41) ಆತ್ಮಹತ್ಯೆ ಪ್ರಕರಣದಲ್ಲಿ ಬಾರ್ ಕ್ಯಾಶಿಯರ್ ಲಿಂಗರಾಜು ಬಂಧನವಾಗಿದ್ದು, ಬಾರ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

₹8–10 ಸಾವಿರ ಸಾಲ ₹35 ಸಾವಿರವಾಗಿದ್ದು ಹೇಗೆ?

ಈ ಪ್ರಕರಣದಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವುದು ಸಾಲದ ಮೊತ್ತದಲ್ಲಿರುವ ಭಾರಿ ವ್ಯತ್ಯಾಸ.

ಮೃತ ಶರತ್ ಬಾಬು ಅವರ ಪತ್ನಿ ಲೀಲಾವತಿ ನೀಡಿರುವ ದೂರಿನ ಪ್ರಕಾರ, ನವೆಂಬರ್ 11ರ ರಾತ್ರಿ ಸುಮಾರು 9 ಗಂಟೆಗೆ ಮೂಲ ಬಾರ್‌ನ ಕ್ಯಾಶಿಯರ್ ಲಿಂಗರಾಜು ಕರೆ ಮಾಡಿ, ಶರತ್ ಬಾಬು ₹35 ಸಾವಿರ ಸಾಲ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಸಾಲದ ಹಣ ಪಾವತಿಸದ ಕಾರಣ ಅವರ ಬೈಕ್ ಅನ್ನು ಬಾರ್‌ನಲ್ಲಿ ಇಟ್ಟುಕೊಂಡಿರುವುದಾಗಿಯೂ, ಹಲ್ಲೆ ನಡೆಸಿ ಕಳುಹಿಸಿರುವುದಾಗಿಯೂ ತಿಳಿಸಿದ್ದಾನೆ ಎಂಬ ಆರೋಪವಿದೆ.

ಆದರೆ ಮನೆಗೆ ಮರಳಿದ ಶರತ್ ಬಾಬು ತಾವು ಕೇವಲ ₹8 ಸಾವಿರದಿಂದ ₹10 ಸಾವಿರದವರೆಗೆ ಮಾತ್ರ ಸಾಲ ಮಾಡಿರುವುದಾಗಿ ಪತ್ನಿಗೆ ತಿಳಿಸಿದ್ದರು ಎನ್ನಲಾಗಿದೆ.

ಹಾಗಾದರೆ ಉಳಿದ ಹಣದ ಲೆಕ್ಕವೇನು? ಸಾಲದ ಮೊತ್ತಕ್ಕೆ ಸಂಬಂಧಿಸಿದ ದಾಖಲೆಗಳಿವೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

ಪತಿಯ ಸ್ಥಿತಿ ತಿಳಿದ ಲೀಲಾವತಿ ಮಕ್ಕಳನ್ನು ಕಳುಹಿಸಿ ಅವರನ್ನು ಮನೆಗೆ ಕರೆಸಿಕೊಂಡಿದ್ದರು.

ಮನೆಗೆ ಬಂದಾಗ ಶರತ್ ಬಾಬು ಅವರ ಹಣೆಯ ಬಳಿ ರಕ್ತಗಾಯವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಾರ್ ಮಾಲೀಕ ಮತ್ತು ಕ್ಯಾಶಿಯರ್ ತಮ್ಮ ಮೇಲೆ ಹಲ್ಲೆ ನಡೆಸಿ, ಬೈಕ್ ಇಟ್ಟುಕೊಂಡಿದ್ದಾರೆ ಎಂದು ಶರತ್ ಬಾಬು ಪತ್ನಿಯ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಸಾಲ ತೀರಿಸಲು ಸಾಧ್ಯವಾಗದಿದ್ದರೆ ಎಲ್ಲಿಯಾದರೂ ಹೋಗಿ ಸಾಯಿ ಎಂದು ಅವಮಾನಿಸಿರುವುದಾಗಿಯೂ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಈ ಆರೋಪಗಳ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ದೃಢಪಡಬೇಕಿದೆ.

ಮರುದಿನವೇ ದುರಂತ — ಕುಟುಂಬಕ್ಕೆ ಆಘಾತ!

ನವೆಂಬರ್ 12ರಂದು ಸಂಜೆ 7.30ರಿಂದ ರಾತ್ರಿ 8.05ರ ನಡುವಿನ ಅವಧಿಯಲ್ಲಿ ಹೊಸಮನೆಯ 6ನೇ ತಿರುವಿನಲ್ಲಿರುವ ನಿವಾಸದಲ್ಲಿ ಶರತ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಸಾವಿಗೆ ಬಾರ್‌ನಲ್ಲಿ ನಡೆದಿತ್ತೆನ್ನಲಾದ ಹಲ್ಲೆ, ಬೆದರಿಕೆ ಹಾಗೂ ಅವಮಾನ ಕಾರಣವೆಂದು ಪತ್ನಿ ಲೀಲಾವತಿ ಆರೋಪಿಸಿದ್ದಾರೆ.

ಕ್ಯಾಶಿಯರ್ ಬಂಧನ, ಮಾಲೀಕರ ವಿರುದ್ಧವೂ ಎಫ್‌ಐಆರ್!

ಮೃತರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾರ್ ಮಾಲೀಕ ಹಾಗೂ ಕ್ಯಾಶಿಯರ್ ಲಿಂಗರಾಜು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 352, 351(2), 115(2), 108 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕ್ಯಾಶಿಯರ್ ಲಿಂಗರಾಜು ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಾರ್ ಮಾಲೀಕರು ತಲೆಮರೆಸಿಕೊಂಡಿದ್ದಾರೆ.

ರಘುರಾಜ್ ಹೆಚ್.ಕೆ..9449553305..

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 2011 ಲೇಖನಗಳು

EDITOR NEWS WARRIORS

EDITOR NEWS WARRIORS ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.