Thursday, 22 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..!
ರಾಜ್ಯ

ಅವರ ಟೀಮ್ ನಲ್ಲಿ ಸಾಹಿತಿಗಳ ಹೆಸರಲ್ಲಿ ಎಡ ಪಂಕ್ತೀಯರಿದ್ದಾರೆ – ಡಿ.ಎಸ್ ಅರುಣ್.

ಶಿವಮೊಗ್ಗ : ರಾಜ್ಯ ಸರ್ಕಾರ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಪರಿಷತ್ ಸದಸ್ಯ ಡಿ.ಎಸ್ ಅರುಣ್ ತಿಳಿಸಿದ್ದಾರೆ. ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಎಸ್ ಅರುಣ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಲಾ…

ಶಿವಮೊಗ್ಗ : ರಾಜ್ಯ ಸರ್ಕಾರ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಪರಿಷತ್ ಸದಸ್ಯ ಡಿ.ಎಸ್ ಅರುಣ್ ತಿಳಿಸಿದ್ದಾರೆ.

ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಎಸ್ ಅರುಣ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಲಾ ಮಕ್ಕಳ ಪಠ್ಯದಲ್ಲಿ ಇದ್ದಂತಹ ಚಕ್ರವರ್ತಿ ಸೂಲಿಬೆಲೆ, ಡಾ.ಹೆಡಗೆವಾರ್ ಮತ್ತು ಶತಾವಧಾನಿ ಗಣೇಶ್ ರವರು ಬರೆದಿರುವಂತ ಪಠ್ಯಗಳನ್ನು ತೆಗೆದು ಹಾಕಿ ಸಂಭ್ರಮಿಸಿದ್ದಾರೆ ಈ ಮೂಲಕ ಸಿದ್ಧರಾಮಯ್ಯ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ.


ತೆಗೆದು ಹಾಕಲಾದ ಪಠ್ಯವನ್ನು ಬರೆದವರು ತಮ್ಮ ಬದುಕಿನ ಬಗ್ಗೆ ಬರೆದುಕೊಂಡಿಲ್ಲ ಬದಲಾಗಿ ದೇಶ ಭಕ್ತರ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿಸಿದ್ದರು. ಇಂದಿನ ಮಕ್ಕಳಿಗೆ ಭಗತ್ ಸಿಂಗ್, ಸುಖದೇವ್,ರಾಜಗುರು, ಸಾವಿತ್ರಿ ಬಾಯಿ ಪುಲೆಯವರ ಬಗ್ಗೆ ಹೇಳಬಾರದ ಎಂದು ಕೇಳಿದ್ದಾರೆ.


ಭೂ ಕೈಲಾಸ ತೆಗೆದು ನೆಹರು ಮಗನಿಗೆ ಬರೆದ ಪತ್ರ ಎಂಬ ಪಾಠ ಸೇರಿದ್ದಾರೆ, ಡಾ.ಹೆಡಗೆವಾರ್  ಬರೆದಿರುವ  ಆದರ್ಶ ಪುರುಷರು ಪಾಠ ತೆಗದು ಉರುಸ್ ಗಳಲ್ಲಿ ಭಾವೈಕ್ಯತೆ ಎಂಬ ಪಾಠ ಸೇರಿಸಿದ್ದಾರೆ ಈ ಮೂಲಕ ಒಂದು ಧರ್ಮದ ಓಲೈಕೆ ಮಾಡಿದ್ದಾರೆ.


ಪಠ್ಯ ಪರಿಷ್ಕರಣೆ ಮಾಡುವ ಮುನ್ನ ಶಿಕ್ಷಣ ತಜ್ಙರ ಸಲಹೆ ಪಡೆದುಕೊಳ್ಳ ಬೇಕು ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ನಲ್ಲಿ ಕೂತವರೇ ಶಿಕ್ಷಣ ತಜ್ಙರಂತೆ ವರ್ತಿಸಿದ್ದಾರೆ.
ಸಿದ್ಧರಾಮಯ್ಯ ಟೀಮ್ ನಲ್ಲಿ ಶಿಕ್ಷಣ ತಜ್ಙರ ಬದಲಾಗಿ ಸಾಹಿತಿಗಳ ಹೆಸರಲ್ಲಿ ಎಡ ಪಂಕ್ತಿಯ ಸಿದ್ದಾಂತ ಒಪ್ಪರುವ ಎಡ ಪಂಕ್ತೀಯರು ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸರ್ಕಾರಿ ಶಾಲೆ ಮಕ್ಕಳು ಏನು ಕೊಟ್ಟರೂ ಓದುತ್ತಾರೆ ಎಂಬ ಮನೋಭಾವನೆ ಯಿಂದ ಹಾಗು ರಾಜ್ಯದ ಜನರ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸರ್ಕಾರದ ಕೆಲಸವನ್ನು ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದರು.

ವರದಿ – ವಿನಯ್ ಕುಮಾರ್ವಹೆಚ್.ಎಮ್

Reporter Smg