Home ರಾಜ್ಯತಹಶೀಲ್ದಾರ್ ನಾಗರಾಜ್ ಚಿತ್ತ ಹೈಕೋರ್ಟ್ ನತ್ತ…!

ತಹಶೀಲ್ದಾರ್ ನಾಗರಾಜ್ ಚಿತ್ತ ಹೈಕೋರ್ಟ್ ನತ್ತ…!

by Reporter Smg
0 comments

ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನ ತಹಶೀಲ್ದಾರ್ ಎನ್.ಜೆ ನಾಗರಾಜ್  ವಿರುದ್ಧ ನಡೆದ  ಲೋಕಾಯುಕ್ತ ರೇಡ್ ನಲ್ಲಿ ಅಕ್ರಮ ಆಸ್ತಿ ಸಂಪಾದನೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಲೋಕಾಯುಕ್ತ ವರದಿ ಆಧಾರದ ಶಿವಮೊಗ್ಗ ತಾಲೂಕಿನ ತಹಶಿಲ್ದಾರ್ ಎನ್.ಜೆ ನಾಗರಾಜ್ ರವರನ್ನು ಅಮಾನತ್ತು ಪಡಿಸಿದೆ.


ಪ್ರಕರಣದ ಹಿನ್ನಲೆ


ಎನ್ ಜೆ ನಾಗರಾಜ್ ಈಹಿಂದೆ ತಹಶೀಲ್ದಾರ್ ಗ್ರೇಡ್- 1ಆಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಆ ಸಮಯದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆಯಾಗಿದೆ ಎಂಬ ಮಾಹಿತಿ ಆಧಾರ ಮೇರೆಗೆ ಇವರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ದಿನಾಂಕ 23-4-2023 ಘನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ದಾವಣಗೆರೆ ಇವರಿಂದ ಅಗತ್ಯವಾದ ಶೋಧನಾ ವಾರೆಂಟ್ ಪಡೆದು ದಿನಾಂಕ 24-4-2023ರಂದು ಶಿಕಾರಿಪುರದ ಚನ್ನಕೇಶವ ನಗರದಲ್ಲಿರುವ  ನಾಗರಾಜ್ ರವರು ವಾಸವಿರುವ ಮನೆ ಆಗ ಕಾರ್ಯನಿರ್ವಹಿಸುತ್ತಿದ್ದ ಚಿತ್ರದುರ್ಗದ ಕಛೇರಿ ಹಾಗು ಅವರಿಗೆ ವಾಸ ಮಾಡಲು ನೀಡಿದ್ದ ವಸತಿ ಗೃಹದ ಮೇಲೆ ದಾಳಿ ನಡೆಸಿ ಚರ ಸ್ಥಿರಾಸ್ಥಿ ಸ್ವತ್ತು ಗಳು ಅಗತ್ಯಕ್ಕಿಂತ ಅಧಿಕ ಆಸ್ತಿಗಳಿಕೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು  ಮೇಲ್ನೋಟಕ್ಕೆ ಸಾಭೀತು ಆಗಿರುವುದರಿಂದ ಆಪಾಧಿತರನ್ನು ಹಸ್ತಕ್ಷೇಪ ಸಾಕ್ಷಿ ನಾಶ ಮಾಡಬಹುದು ಎನ್ನುವ ಕಾರಣಕ್ಕಾಗಿ ಇವರನ್ನು ಸದರಿ ಸೇವೆಯಿಂದ ಅಮಾನತ್ತು ಗೊಳಿಸಿ ಆದೇಶ ನೀಡಲಾಗಿದೆ.


ಸದ್ಯ ಈಗ ಎನ್.ಜೆ ನಾಗರಾಜ್ ರವರು ಸರ್ಕಾರದ ಆದೇಶವನ್ನು ತಡೆಹಿಡಿಯಲು ಹೈಕೋರ್ಟ್ ಮೆಟ್ಟಿಲು ಏರಲಿದ್ದಾರೆ‌. ಹೈಕೋರ್ಟ್ ನಿಂದ  ಯಾವ ಆದೇಶ ಬರಲಿದೆ ಎಂದು ಕಾದು ನೋಡಬೇಕಿದೆ.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...