Home ಬೆಂಗಳೂರುGovernment employee’s union state president : ಸಿ ಎಸ್ ಷಡಾಕ್ಷರಿ ಗೆ ಸಂಕಷ್ಟ ವಸತಿ ಗೃಹ ತೆರುವು ಸೂಚನೆ ಬೆನ್ನಲ್ಲೇ ದಂಡ ವಸೂಲಿ ಮಾಡುತ್ತಾ ಲೋಕೋಪಯೋಗಿ ಇಲಾಖೆ..?!

Government employee’s union state president : ಸಿ ಎಸ್ ಷಡಾಕ್ಷರಿ ಗೆ ಸಂಕಷ್ಟ ವಸತಿ ಗೃಹ ತೆರುವು ಸೂಚನೆ ಬೆನ್ನಲ್ಲೇ ದಂಡ ವಸೂಲಿ ಮಾಡುತ್ತಾ ಲೋಕೋಪಯೋಗಿ ಇಲಾಖೆ..?!

by EDITOR NEWS WARRIORS
0 comments

ಶಿವಮೊಗ್ಗದಲ್ಲಿ ಲೆಕ್ಕಾಧಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು ಆನಂತರ ಆ ವರ್ಗಾವಣೆಯನ್ನು ಪ್ರಶ್ನಿಸಿ ಷಡಾಕ್ಷರಿಯವರು ನ್ಯಾಯಾಲಯದ ಮರೆಹೋಗಿದ್ದರು ನಂತರ ಅವರ ವರ್ಗಾವಣೆಯನ್ನು ಬೆಂಗಳೂರಿಗೆ ಮಾಡಲಾಯಿತು .

ವರ್ಗಾವಣೆಯಾಗಿ 12 ತಿಂಗಳು ಕಳೆದರೂ ವಸತಿ ಗೃಹ ಖಾಲಿ ಮಾಡದ ಷಡಾಕ್ಷರಿ :

ವರ್ಗಾವಣೆಯಾಗಿ ಸುಮಾರು 12 ತಿಂಗಳು ಕಳೆದರೂ ರಾಜ್ಯಾಧ್ಯಕ್ಷ ಷಡಾಕ್ಷರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯೊಳಗೆ ಬರುವ ವಸತಿಗೃಹವನ್ನು ತೆರುವುಗೋಳಿಸಿರಲಿಲ್ಲ ಇದನ್ನು ಪ್ರಶ್ನಿಸಿ ಸಾಕಷ್ಟು ಜನ ಇಲಾಖೆಯ ಗಮನಕ್ಕೆ ದೂರು ನೀಡಿದ್ದರು ಅದರಲ್ಲೂ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷರಾದ ರುದ್ರಪ್ಪನವರು ಒತ್ತಡ ತಂದಿದ್ದರು ಇದರ ಬೆನ್ನಲ್ಲೇ ದಿನಾಂಕ 18-10.2024 ರಂದು ಲೋಕೋಪಯೋಗಿ ಇಲಾಖೆಯ ಕಿರಿಯ ಸಹಾಯಕರು ಷಡಾಕ್ಷರಿ ಅವರಿಗೆ ವಸತಿಗೃಹವನ್ನು ತೆರವುಗೊಳಿಸಿ ತಮ್ಮ ಇಲಾಖೆಯ ಸುರ್ಪದಿಗೆ ವಹಿಸುವಂತೆ ಸೂಚನೆ ನೀಡಿದ್ದರು.

ಅವಧಿ ಮುಗಿದಿದ್ದರೂ ವಸತಿಗೃಹದಲ್ಲಿ ಇದ್ದರಿಂದ ಷಡಾಕ್ಷರಿ ಗೆ ದಂಡ ಬೀಳುತ್ತಾ..?!

ವರ್ಗಾವಣೆಯಾಗಿ 12 ತಿಂಗಳು ಕಳೆದರೂ ಷಡಾಕ್ಷರಿ ಅವರು ತಮಗೆ ನೀಡಿದ್ದ ವಸತಿಗೃಹವನ್ನು ತೆರವುಗೊಳಿಸಿದೆ ಇದ್ದರಿಂದ ಅವರ ಮೇಲೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆ ಇದೆ ..?! ಏಕೆಂದರೆ ಸಾಮಾನ್ಯವಾಗಿ ಸರ್ಕಾರದ ವಸತಿ ಗೃಹವನ್ನು ವರ್ಗಾವಣೆಯಾದ ನಂತರ ಖಾಲಿ ಮಾಡಬೇಕು ಒಂದು ವೇಳೆ ಹಾಗೆ ಮುಂದುವರೆದರೆ ಮೊದಲ 3 ತಿಂಗಳಿಗೆ 4 ಪಟ್ಟು ದಂಡ ಹಾಗೂ ಬಾಡಿಗೆ ಅದಕ್ಕೂ ಹೆಚ್ಚಿನ ಸಮಯಕ್ಕೆ 8 ಪಟ್ಟು ದಂಡ ವಸೂಲಿ ಮಾಡಬಹುದಾಗಿದ್ದು ದಂಡ ವಸೂಲಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಜನ ಒತ್ತಡ ತರುತ್ತಿದ್ದಾರೆ.

ವಸತಿ ಗೃಹ ತೆರವುಗೊಳಿಸಿ ದಂಡ ವಿಧಿಸುತ್ತಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು..?

ವಸತಿ ಗೃಹ ತೆರುವು ಗೊಳಿಸಲು ಸೂಚನೆ ನೀಡಿದ್ದು ವಸತಿಗೃಹ ತೆರವು ಬೆನ್ನಲ್ಲೇ ಸಾಕಷ್ಟು ಸಮಯ ಹಿಡಿದಿದ್ದರಿಂದ ಅದಕ್ಕೆ ದಂಡ ವಿಧಿಸುತ್ತಾರಾ..? ಬೇರೆಯವರಿಗೆ ಅನ್ವಯಿಸಿದ ನಿಯಮಗಳು ಷಡಾಕ್ಷರಿಯವರಿಗೂ ಅನ್ವಯಿಸುತ್ತವೆ.. ಅದನ್ನು ಅಧಿಕಾರಿಗಳು ಪಾಲಿಸುತ್ತಾರಾ..?! ಅಥವಾ ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯ ಮಾತಿಗೆ ಬೆಂಡಾಗಿ ಸುಮ್ಮನಿರುತ್ತಾರ..?! ಕಾದುನೋಡಬೇಕು…..

ರಘುರಾಜ್ ಹೆಚ್.ಕೆ..9449553305…..

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...