Friday, 23 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ಕಾಂಗ್ರೆಸ್ ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..!
ಶಿವಮೊಗ್ಗ

ಸಾರ್ಥಕ ಸೇವೆ ಸಲ್ಲಿಸಿದ ನಮ್ಮ ರಂಜನಾ ಸುರೇಶ..!

ಹಿರಿಯರಿಗೆ ಗೌರವ ಕೊಡುವ ಪರಂಪರೆ ಎಲ್ಲಾ ಕಡೆಯಿದೆ. ಗೌರವದೊಂದಿಗೆ ಅವರ ಅಗತ್ಯಗಳನ್ನು ಪೂರೈಸುವುದೂ ಅಷ್ಟೇ ಮುಖ್ಯ. ಈ ದೃಷ್ಟಿಯಲ್ಲಿ ನಮ್ಮ ಪ್ರಧಾನಮಂತ್ರಿ ಮೋದಿಯವರ ಹೊಸ ಕೊಡುಗೆ” ಆಯುಷ್ಮಾನ್ ವಯೋವಂದನ ಕಾರ್ಡ್”. ಅಂದರೆ ಎಪ್ಪತ್ತು ವರ್ಷ ತುಂಬಿದ ಎಲ್ಲಾ ಹಿರಿಯನಾಗರಿಕರಿಗೆ, ಜಾತಿ, ಮತ,…

ಹಿರಿಯರಿಗೆ ಗೌರವ ಕೊಡುವ ಪರಂಪರೆ ಎಲ್ಲಾ ಕಡೆಯಿದೆ. ಗೌರವದೊಂದಿಗೆ ಅವರ ಅಗತ್ಯಗಳನ್ನು ಪೂರೈಸುವುದೂ ಅಷ್ಟೇ ಮುಖ್ಯ. ಈ ದೃಷ್ಟಿಯಲ್ಲಿ ನಮ್ಮ ಪ್ರಧಾನಮಂತ್ರಿ ಮೋದಿಯವರ ಹೊಸ ಕೊಡುಗೆ” ಆಯುಷ್ಮಾನ್ ವಯೋವಂದನ ಕಾರ್ಡ್”. ಅಂದರೆ ಎಪ್ಪತ್ತು ವರ್ಷ ತುಂಬಿದ ಎಲ್ಲಾ ಹಿರಿಯನಾಗರಿಕರಿಗೆ, ಜಾತಿ, ಮತ, ಲಿಂಗ ವರಮಾನದ ಭೇದ ಮಾಡದೆ ಐದುಲಕ್ಷ ರೂಪಾಯಿಗಳ ಆರೋಗ್ಯ ವಿಮೆ. ನಿನ್ನೆ ಅಂದರೆ ನವೆಂಬರ್ ಹದಿನೈದು, ಶುಕ್ರವಾರ ಸಂಜೆ ಸಾಗರದ ವಿಜಯನಗರ ಬಡಾವಣೆಯ ” ಶ್ರೀ ರಾಮ ನವಮಿ” ಮನೆಯ ಮಾಲಿಕರಾದ ರಂಜನಾ ಸುರೇಶ ಇವರು ಈ ಕಾರ್ಡ್ ಗಳನ್ನು ಅಗತ್ಯ ಇರುವ ಹಿರಿಯರಿಗೆ ತಲುಪಿಸಲು ಅನುಕೂಲ ಮಾಡಿರುತ್ತಾರೆ. ನಮ್ಮ ಬಡಾವಣೆಯ ಈ ರಂಜನಾ ಮೇಡಂ ಸದಾ ಕ್ರಿಯಾಶೀಲರಾಗಿರುವ ಪರಿಸರ ಪ್ರೇಮಿ ಗೃಹಿಣಿ. ಮನೆಯ ಸುತ್ತಮುತ್ತ ಹಸಿರು ಗಿಡ- ಮರಗಳಿರುವ ಇವರ ಮನೆಯೇ ಒಂದು ಚೆಂದದ ಹಸಿರುಮನೆ. ನಿನ್ನೆ ಸುಮಾರು ಐವತ್ತು ಹಿರಿಯರು ಈ ಕಾರ್ಡ್ ಪಡೆದೆವು. ಹತ್ತಿರ, ದೂರದ ಬಡಾವಣೆ ಮತ್ತು ಹಳ್ಳಿಗಳಿಂದಲೂ ಕೆಲವು ಹಿರಿಯರು ಬಂದಿದ್ದರು.

ರಂಜನಾರ ಮನೆಯಲ್ಲಿ ಹಬ್ಬದ ಸಡಗರ- ಸಂಭ್ರಮ. ನಮ್ಮೆಲ್ಲರನ್ನು ಸ್ವಾಗತಿಸಿ ನೋಂದಣಿ ಮಾಡಿಕೊಳ್ಳಲು ನಮ್ಮ ಬೀದಿಯ ಯಕ್ಷಗಾನ ಕಲಾವಿದೆ ವೀಣಕ್ಕ ಕೂಡ ಸಹಕರಿಸಿದ್ದು ಗಮನಾರ್ಹ. ಪ್ರತಿ ಬಡಾವಣೆಯಲ್ಲಿಯೂ ಇಂಥ ಸೇವೆ ಸಿಕ್ಕರೆ ಮಾನ್ಯ ಮೋದಿಯವರಿಗೆ ಸಹಕಾರ ಕೊಟ್ಟಂತೆ. ನಮ್ಮೆಲ್ಲರಿಗೂ ಈ ಆಯುಷ್ಮಾನ್ ವಯೋವಂದನ ಕಾರ್ಡ್ ಕೊಡಿಸಿದ ರಂಜನಾ ಮತ್ತು ಅವರ ಬಾಳ ಸಂಗಾತಿ ಬೇದೂರು ಸುರೇಶ ಅವರಿಗೂ ಎಲ್ಲ ಹಿರಿಯರ ಪರವಾಗಿ ಧನ್ಯವಾದಗಳು. ನಮ್ಮ ರಾಜ್ಯದ ಪ್ರತಿ ಪೇಟೆ- ಹಳ್ಳಿಗಳಲ್ಲಿ ಇಂಥ ಸೇವಾ ಮನೆಗಳು ಸಾವಿರ ಸಾವಿರವಾಗಲಿ.

EDITOR NEWS WARRIORS