Tuesday, 27 October 2026 — News Warriors

News Warriors

Kannada News Portal Shimoga : Local News

BREAKING NEWS
ರಾಜ್ಯ Shivamogga :ಪ್ರಭಾವಿಗಳಿಂದಲೇ ಕೆರೆ ಒತ್ತುವರಿ ತೆರವು ಆರಂಭಿಸಿ ಅಧಿಕಾರಿಗಳಿಗೆ ಖಂಡ್ರೆ ಖಡಕ್ ಆದೇಶ..!ಕುಡಿಯುವ ನೀರಿಗೆ ₹67 ಸಾವಿರ ಕೋಟಿ | ರಾಜ್ಯದಲ್ಲಿ 1,000 ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ..! 24 ಗಂಟೆಯಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…! ರಾಜ್ಯ Shivamogga :ಪ್ರಭಾವಿಗಳಿಂದಲೇ ಕೆರೆ ಒತ್ತುವರಿ ತೆರವು ಆರಂಭಿಸಿ ಅಧಿಕಾರಿಗಳಿಗೆ ಖಂಡ್ರೆ ಖಡಕ್ ಆದೇಶ..!ಕುಡಿಯುವ ನೀರಿಗೆ ₹67 ಸಾವಿರ ಕೋಟಿ | ರಾಜ್ಯದಲ್ಲಿ 1,000 ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ..! 24 ಗಂಟೆಯಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ..! ರಾಜ್ಯ Big news :ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ರಂಪಾಟ: ಅರಣ್ಯ ಇಲಾಖೆಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ..! ಶಿವಮೊಗ್ಗ ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ರಾಜ್ಯ ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್…! ರಾಜ್ಯ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗ ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! ರಾಜ್ಯ Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ…?! ಡಾ. ಮೈತ್ರಿ ಹೆಚ್ ಪಿ,.ಎಸ್ ವರ್ಗಾವಣೆ ಎಲ್ಲಿಗೆ..?! ಕುತೂಹಲ ಮೂಡಿಸಿದ ವರ್ಗಾವಣೆ ಪ್ರಕರಣ..! #ಧಾರವಾಡ # Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ಆಕ್ರೋಶ ಸಚಿವ ಮಧು ಬಂಗಾರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ…!
ಶಿವಮೊಗ್ಗ

ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..!

  ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ 10 ವರ್ಷಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೇ ಇರುವಂತಹ ಹಾಗೂ ಉತ್ತಮ ಗುಣ ನಡತೆ ಹೊಂದಿರುವ ಹಾಗೂ ಮೃತ ಪಟ್ಟಂತಹ ಹಾಗೂ ವಯಸ್ಸಿನ ಆಧಾರದ ಮೇಲೆ ಶಿವಮೊಗ್ಗ – ಎ ಉಪ ವಿಭಾಗದ – 17, ಶಿವಮೊಗ್ಗ…

 


ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ 10 ವರ್ಷಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೇ ಇರುವಂತಹ ಹಾಗೂ ಉತ್ತಮ ಗುಣ ನಡತೆ ಹೊಂದಿರುವ ಹಾಗೂ ಮೃತ ಪಟ್ಟಂತಹ ಹಾಗೂ ವಯಸ್ಸಿನ ಆಧಾರದ ಮೇಲೆ ಶಿವಮೊಗ್ಗ – ಎ ಉಪ ವಿಭಾಗದ – 17, ಶಿವಮೊಗ್ಗ – ಬಿ ಉಪ ವಿಭಾಗದ – 60, ಭದ್ರಾವತಿ ಉಪ ವಿಭಾಗದ – 72, ಸಾಗರ ಉಪ ವಿಭಾಗದ – 55, ಶಿಕಾರಿಪುರ ಉಪ ವಿಭಾಗದ – 124 ಹಾಗೂ ತೀರ್ಥಹಳ್ಳಿ ಉಪ ವಿಭಾಗದ – 25 ಜನ ರೌಡಿ ಆಸಾಮಿಗಳು ಸೇರಿ ಒಟ್ಟು 353 ಜನ ರೌಡಿಗಳಿಗೆ ರಿಲೀಫ್ ಸಿಕ್ಕಿದೆ.

ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡುವ ಸಂಬಂಧ ಇಂದು  ಮಧ್ಯಾಹ್ನ  ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ. ಕೆ,  ರವರ ನೇತೃತ್ವದಲ್ಲಿ, ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ  ಸದರಿ  ರೌಡಿಗಳ ಪರೇಡ್ ಕರೆದಿದ್ದು, ಪರೇಡ್ ನಲ್ಲಿ ಹಾಜರಿದ್ದ ರೌಡಿಶೀಟರ್ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ.

1) ಯಾವುದೋ ಕೆಟ್ಟ ಸಂದರ್ಭ ಹಾಗೂ ನಿಮ್ಮ ನಡೆತೆಯಿಂದ ನಿಮ್ಮಗಳ ವಿರುದ್ಧ ಈ ಹಿಂದೆ ರೌಡಿ ಹಾಳೆಯನ್ನು ತೆರೆದಿದ್ದು,  ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದೇ ಇರುವುದರಿಂದ  ಹಾಗೂ ಸಮಾಜದಲ್ಲಿ ನಿಮ್ಮ ನಡತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಮಾನದಂಡಗಳ ಆಧಾರದಲ್ಲಿ ನಿಮ್ಮ ವಿರುದ್ಧ ಈ ಹಿಂದೆ ತೆರೆಯಲಾಗಿದ್ದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮಾಡುತ್ತಿದ್ದೇವೆ.

2) ಸಮಾಜದಲ್ಲಿ ಎಲ್ಲ ನಾಗರೀಕರ ರೀತಿ ನೀವು ಸಹಾ ಉತ್ತಮ ಜೀವನ* ನಡೆಸಲು ಇದು ಒಂದು ಸದಾವಕಾಶವಾಗಿರುತ್ತದೆ.ಇನ್ನು ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳ ರೀತಿ ಜೀವನ ನಡೆಸಿ.

3) ನಿಮ್ಮೆಲ್ಲರ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ಷ್ಮವಾಗಿ ಗಮನ ಹರಿಸಲಿದ್ದು, ನೀವು ಯಾವುದೇ ಸಣ್ಣ ಪುಟ್ಟ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದರೂ ಸಹಾ  ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯನ್ನು ಪುನಾಃ ತೆರೆಯಲಾಗುತ್ತದೆ ಹಾಗೂ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.

4) ನಿಮ್ಮ ಕುಟುಂಬ,ಸಮಾಜ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಿಷ್ಠೆಯಿಂದಿರಿ, ಜೀವನೋಪಾಯಕ್ಕಾಗಿ ನಿರ್ವಹಿಸುವ ಕರ್ತವ್ಯಗಳನ್ನು ಶಿಸ್ತಿನಿಂದ ಮಾಡಿ, ಸಮಾಜದಲ್ಲಿ ಒಬ್ಬ ಉತ್ತಮ ನಾಗರೀಕನಾಗಿ ರೂಪುಗೊಳ್ಳಿ. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಗಳಿಸಲು ನಿಮಗೆ ಒದಗಿ ಬಂದ ಸದಾವಕಾಶ ಸಿಕ್ಕಿದ್ದು, ಇದರ ಉಪಯೋಗ ಪಡೆಯಿರಿ.

5) ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯು ಯಾವುದೇ  ಕಾರಣಕ್ಕೆ, ಪುನಾಃ ತೆರೆಯುವ  ಸಂದರ್ಭ ಬಂದರೇ ನಿಮ್ಮ ಜೀವನ ಪರ್ಯಂತ ನಿಮ್ಮ ವಿರುದ್ಧ ತೆರೆಯಲಾದ ರೌಡಿ ಹಾಳೆಯು ಪ್ರಚಲಿತದಲ್ಲಿರುತ್ತದೆ ಹಾಗೂ ನೀವು ಪೊಲೀಸ್ ಇಲಾಖೆಯ ನೇರ ಕಣ್ಗಾವಲಿನಲ್ಲಿರುತ್ತೀರಿ ಹಾಗೂ ಕಾನೂನು ರೀತ್ಯಾ ಕ್ರಮ ಎದುರಿಸಬೇಕಾಗುತ್ತದೆ.

ಎಲ್ಲರು ಸನ್ನಡತೆಯಿಂದ ಜೀವನ ನಡೆಸಿ, ನಿಮ್ಮ ಸುತ್ತ ಮುತ್ತಲು ನಡೆಯುವ ಯಾವುದೇ ಘಟನೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.

EDITOR NEWS WARRIORS