
ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ ದಾಳಿ ನಡೆಸುವ ಮೂಲಕ ಸಂಚಲನ ಉಂಟು ಮಾಡಿದ್ದಾರೆ.
ಶಿವಮೊಗ್ಗದ ಅಧಿಕಾರಿಯ ಮನೆ ಮೇಲು ದಾಳಿ ನಡೆದಿದ್ದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಭಾಗವಾದ ಸಾವಯವ ಕೃಷಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್ ಪ್ರದೀಪ್ ಮನೆ ಮೇಲೆ ದಾಳಿಯಾಗಿದೆ.

ಶಿವಮೊಗ್ಗದ ವಿನೋಬ ನಗರದಲ್ಲಿ ಇರುವ ಪ್ರದೀಪ್ ನಿವಾಸ, ಶಿವಮೊಗ್ಗದಲ್ಲಿರುವ ಫಾರಂ ಹೌಸ್ ಮೇಲೂ ದಾಳಿ ನಡೆದಿದ್ದು ಇದಲ್ಲದೆ ಶಿವಮೊಗ್ಗದ ಎರಡು ಕಚೇರಿಗಳ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ವಿನೋಬ ನಗರದ ಎಪಿಎಂಸಿ ಹಿಂಭಾಗವಿರುವ ಪ್ರದೀಪ್ ನಿವಾಸದ ಮೇಲೆ ದಾಳಿ ನಡೆದಾಗ ಪ್ರದೀಪ್ ಮನೆಯಲ್ಲಿ ಇದ್ದರೂ ಎನ್ನುವ ಮಾಹಿತಿ ಲಭ್ಯವಾಗಿದೆ.
- ನಿರಂತರವಾಗಿ ದೂರು ಬಂದ ಹಿನ್ನೆಲೆ ದಾಳಿ ನಡೆದಿದ್ದು ಚರ ಹಾಗೂ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಅಕ್ರಮ ಆಸ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್ ಒಂದನೇ ಮುಖ್ಯ ರಸ್ತೆಯಲ್ಲಿರುವ ನಿವಾಸ, ಶಿಕಾರಿಪುರ ತಾಲ್ಲೂಕಿನ ಭದ್ರಾಪುರದಲ್ಲಿ ನಾಲ್ಕು ಎಕರೆ ತೋಟದಲ್ಲಿರುವ ಮನೆ ಹಾಗೂ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಕಾಳಶೆಟ್ಟಿ ಕೊಪ್ಪದ 10.5 ಎಕರೆ ತೋಟದಲ್ಲಿರುವ ಮನೆ ಹಾಗೂ ಅವರ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.