
ಮಲೇಬೆನ್ನೂರು ಹರಿಹರ ತಾಲೂಕಿನಾದ್ಯಂತ ರಾತ್ರಿಪೂರ್ತಿ ಸುರಿದ ಬಾರಿ ಮಳೆಗೆ ಜನರು ತತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಇಂತಹ ಸಂಧರ್ಭದಲ್ಲಿ ಹರಿಹರ ತಾಲ್ಲೂಕು ದಂಡಧಿಕಾರಿಗಳು ರಾತ್ರಿವಿಡಿ ಪ್ರತಿ ಹಳ್ಳಿ-ಹಳ್ಳಿಗಳಿಗೂ ತಿರುಗಾಡಿ ಜನಸಾಮಾನ್ಯರ ಸಂಕಷ್ಟಗಳ್ಳನ್ನು ಅಲಿಸಿ ಅದಕ್ಕೆ ಪರಿಹಾರ ಕಂಡುಕೋಡುವಲ್ಲಿ ಯಶಸ್ವಿಯಾದರು.

ಹರಿಹರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಸುಮಾರು 1 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರುನುಗ್ಗಿ, 20ಕ್ಕೂ ಅಧಿಕ ಮನೆಗಳು ಬಿದ್ದಿವೆ,
ಅಪಾರ ಪ್ರಮಾಣದ ಬೆಳೆ ನಾಶವಾಗಿದೆ, ಸರಿಸುಮಾರು ರಾತ್ರಿ 7ಘಂಟೆಗೆ ಆರಂಭವಾದ ಮಳೆ ರಾತ್ರಿ 11ಗಂಟೆ ವರೆಗೂ ಎಡೆಬಿಡದೇ ಸುರಿಯಿತು.
ಈ ಮಹಾಮಳೆಗೆ ಯಲವಟ್ಟಿ ತಾಂಡ ಸಂಪೂರ್ಣ ಜಲಮಯವಾಗಿದ್ದು, ಒಂದು ಹಸು ಸಾವನ್ನಪ್ಪಿದೆ,300ಕ್ಕೂ ಅಧಿಕ ಜನರನ್ನು ಯಲವಟ್ಟಿಯ ಸಮುದಾಯ ಭವನ, ದೇವಸ್ಥಾನಗಳಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ರಾತ್ರೋರಾತ್ರಿ ತಹಸೀಲ್ದಾರ್ ರಾಮಚಂದ್ರಪ್ಪ, ಆರ್. ಐ. ಆನಂದ್ ರವರು ಕಲ್ಪಿಸಿಕೊಟ್ಟರು.
ಕಮಲಾಪುರ ಹಾಗೂ ಲಕ್ಕಶೆಟ್ಟಿ ಹಳ್ಳಿ ಗ್ರಾಮದಲ್ಲಿ ನೂರಕ್ಕೂ ಅಧಿಕಮನೆಗಳಿಗೆ ನೀರು ನುಗ್ಗಿ 5 ಮನೆಗಳ ಗೋಡೆ ಬಿದ್ದಿವೆ,ಗ್ರಾಮಸ್ಥರು ರಾತ್ರಿ ಪೂರ್ತಿ ಮನೆಗಳಿಗೆ ನುಗ್ಗಿರುವ ನೀರನ್ನು ಹೊರಹಾಕುವಂತಾಯಿತು.
ಆದರೆ ಪರಿಸ್ಥಿತಿ ಕೈ ಮೀರಿ ಹೋಗಿದ ಮೇಲೆ ಹೆಚ್ಚಿನ ಅನಾಹುತ ಸಂಭವಿಸುವ ಹಿನ್ನಲೆಯಲ್ಲಿ ಕಮಲಾಪುರ ಗ್ರಾಮದ ಶಾಲೆಯಲ್ಲಿ ಗಂಜಿಕೇಂದ್ರ ಆರಂಭಿಸಲಾಯಿತು.

“ಮಳೆಯನ್ನು ಲೆಕ್ಕಿಸದೇ ಸುತ್ತಿದ ತಹಸೀಲ್ದಾರ್ ರಾಮಚಂದ್ರಪ್ಪ,ಆರ್. ಐ.ಆನಂದ್ ರವರು ನೀರುನುಗ್ಗಿದ ಮನೆಗಳಿಗೆಭೇಟಿ ಕೊಟ್ಟು ಪರಿಶೀಲಿಸಿ,ಮನೆ ಮಾಲೀಕರಿಗೆ ಸಾಂತ್ವನ ಹೇಳಿ, ಸುರಕ್ಷಿತ ಸ್ಥಳಕ್ಕೆ ತೆರಳಿಸಿ, ಯಲವಟ್ಟಿ, ಲಕ್ಕಶೆಟ್ಟಿ, ಕಮಲಾಪುರ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ಈ ಸಂದರ್ಭ ಯಲವಟ್ಟಿ ಗ್ರಾಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಸದಸ್ಯರಾದ ರಮೇಶ್, ನಾಗರಾಜ್ ಎನ್. ಎಮ್, ಹಾನಗವಾಡಿ ಕರಿಬಸಮ್ಮ ಮಲ್ಲಿಕಾರ್ಜುನಪ್ಪ ಅಕ್ಕ-ಪಕ್ಕದ ಗ್ರಾಮಸ್ಥರು ಇದ್ದರು.
ವರದಿ: ಲೋಕಿಕೆರೆ ಅಣ್ಣಪ್ಪ. ಹರಿಹರ.