293
ತೀರ್ಥಹಳ್ಳಿ : ತಾಲ್ಲೂಕಿನ ಮಂಡಗದ್ದೆ ಯಲ್ಲಿ ಇಬ್ಬರು ಮಿನಿ ವೀರಪ್ಪನ್ ಗಳ ಬಂಧನವಾಗಿದ್ದು ಮಂಡಗದ್ದೆ ವಲಯ ಮಂಡಗದ್ದೆ ಶಾಖೆಯ ಕನಗಳಕೊಪ್ಪ ಗಸ್ತಿನ ವೇಳೆ ಮೇಲಿನ ಪತ್ರುವಳ್ಳಿ ಗ್ರಾಮದ ಸರ್ವೇ ನಂಬರ್ 06 ರಲ್ಲಿ 33.250 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡು, ಸತೀಶ್ ಬಿನ್ ನಂದಿ ಬಸವ ಕನಗಳಕೊಪ್ಪ ವಾಸಿ ಮತ್ತು ಪ್ರಕಾಶ್ ಬಿನ್ ಶೇಖರ್ ಕನಗಳಕೊಪ್ಪ ವಾಸಿ ಇಬ್ಬರನ್ನು ಬಂಧಿಸಿ ಅರಣ್ಯ ಕಾಯ್ದೆ ಪ್ರಕಾರ 35/2025-26 ದೂರು ದಾಖಲಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಯುವ ಉತ್ಸಾಹಿ ವಲಯ ಅರಣ್ಯ ಅಧಿಕಾರಿ ವಿನಯ ಕುಮಾರ್, ಅಮಿತ್ ಉಪ ವಲಯ ಅರಣ್ಯಾಧಿಕಾರಿ, ಸಂತೋಷ್, ಕಿರಣ್ ಕುಮಾರ್ ಮತ್ತು ಮಹದೇವ್ ಗಸ್ತು ಅರಣ್ಯ ಪಾಲಕರು ಮತ್ತು ಅರುಣ್ ವಾಹನ ಚಾಲಕರ ಪಾತ್ರ ಪ್ರಮುಖವಾಗಿದ್ದು ಈ ಪ್ರಕರಣದಲ್ಲಿ ಸತೀಶ್ ಎನ್ನುವ ವ್ಯಕ್ತಿ ಈಗಾಗಲೇ ಹಿಂದೆ ಒಂದು ಪ್ರಕರಣದಲ್ಲೂ ಕೂಡ ಇದ್ದು .
ಅರಣ್ಯ ಇಲಾಖೆಯ ಅಧಿಕಾರಿಗಳ ಸಮಗ್ರ ತನಿಖೆಯಿಂದ ಗಂಧಕಳ್ಳರ ಇತಿಹಾಸ ತಿಳಿಯಬೇಕಿದೆ ಇವರು ಗಂಧ ಕದ್ದು ಯಾರಿಗೆ ಸಾಗಾಟ ಮಾಡುತ್ತಿದ್ದರು ಇವರ ಹಿಂದೆ ಯಾರಿದ್ದಾರೆ..?! ಎನ್ನುವ ಎಲ್ಲಾ ಮಾಹಿತಿಯನ್ನು ಇಲಾಖೆ ತನಿಖೆಯಿಂದ ಹೊರಬರಬೇಕಾಗಿದೆ.
ರಘುರಾಜ್ ಹೆಚ್ ಕೆ..9449553305…

