Home ಪೊಲೀಸ್ ಇಲಾಖೆShivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿವಮೊಗ್ಗದ ಮುಖ್ಯ ಪೇದೆ ಹಾಗೂ ಆ ಪ್ರತಿಷ್ಠಿತ ಕುಟುಂಬದ ಮಹಿಳೆಯ ಪಾತ್ರವೇನು..? ಅಷ್ಟಕ್ಕೂ ಚಿನ್ನ ಎಲ್ಲಿ ಅಡವಿಟ್ಟಿದ್ದಾರೆ..?! ಉಳಿದವರು ಯಾರು..?!

Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿವಮೊಗ್ಗದ ಮುಖ್ಯ ಪೇದೆ ಹಾಗೂ ಆ ಪ್ರತಿಷ್ಠಿತ ಕುಟುಂಬದ ಮಹಿಳೆಯ ಪಾತ್ರವೇನು..? ಅಷ್ಟಕ್ಕೂ ಚಿನ್ನ ಎಲ್ಲಿ ಅಡವಿಟ್ಟಿದ್ದಾರೆ..?! ಉಳಿದವರು ಯಾರು..?!

by EDITOR NEWS WARRIORS
0 comments
Shivamogga breaking :
ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿವಮೊಗ್ಗದ ಮುಖ್ಯ ಪೇದೆ ಹಾಗೂ ಆ ಪ್ರತಿಷ್ಠಿತ ಕುಟುಂಬದ ಮಹಿಳೆಯ ಪಾತ್ರವೇನು..? ಅಷ್ಟಕ್ಕೂ ಚಿನ್ನ ಎಲ್ಲಿ ಅಡವಿಟ್ಟಿದ್ದಾರೆ..?! ಉಳಿದವರು ಯಾರು..?!
 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಬಾ ಈಗ ನಕಲಿ ಬಂಗಾರದ ಜಾಲದ ಬಗ್ಗೆಯೇ ಮಾತು ಈ ನಕಲಿ ಬಂಗಾರದ ಜಾಲದ ಬೆನ್ನತ್ತಿದ ಶಿವಮೊಗ್ಗ ಪೊಲೀಸರಿಗೆ ತೀರ್ಥಹಳ್ಳಿ ಮೂಲದ ಒಬ್ಬ ಸಿಕ್ಕಿಬಿದ್ದಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ ಇದರಲ್ಲಿ ಮುಖ್ಯ ಪೊಲೀಸ್ ಪೇದೆಯೊಬ್ಬನ ಪಾತ್ರ ಪ್ರಮುಖವಾಗಿ ಕೇಳಿ ಬರುತ್ತಿದೆ ಜೊತೆಗೆ ಮಹಿಳೆ ಒಬ್ಬಳ ಹೆಸರು ಕೂಡ ಕೇಳಿ ಬರುತ್ತಿದೆ.
 ಏನಿದು ನಕಲಿ ಬಂಗಾರದ ಜಾಲ..?
 ಮೂಲತಃ ತಮಿಳುನಾಡಿನಿಂದ ಬರುವ ಈ ಬಂಗಾರ ಒಂದು ಗ್ರಾಂ ಗೋಲ್ಡ್ ನ ಬಂಗಾರದ ರೀತಿಯ ತರಹ ಇದ್ದು ಇದಕ್ಕೆ ಮೇಲಿನಿಂದ ಕೋಟೆಡ್ ಮಾಡಿ ಬಂಗಾರವನ್ನು ಲೇಪಿಸಿ ಮಹಿಳೆಯರು ಬಳಸುವ ಬಂಗಾರದ ಸಾಮಗ್ರಿಗಳನ್ನು ತಯಾರಿಸುವುದು ನಂತರ ಅದನ್ನು ಲಾಕಿಂಗ್ ಸಿಸ್ಟಮ್ ಇರುವ ಬ್ಯಾಂಕ್ ಸೊಸೈಟಿಗಳಲ್ಲಿ ಹಾಗೂ ಬಂಗಾರ ಅಡವಿಟ್ಟುಕೊಳ್ಳುವ ಫೈನಾನ್ಸ್ ಗಳಲ್ಲಿ ಈ ನಕಲಿ ಬಂಗಾರವನ್ನು ಅಡವಿಟ್ಟು ಹಣ ತೆಗೆದುಕೊಳ್ಳುತ್ತಾರೆ ಆದರೆ ನಂತರ ಆ ಹಣವನ್ನು ಕಟ್ಟದೆ ಬಂಗಾರವನ್ನು ಬಿಡಿಸಿಕೊಳ್ಳುವುದೇ ಇಲ್ಲ ಇದು ಹರಾಜಿಗೆ ಬಂದಾಗ ಯಾರ ಹೆಸರಿಗೆ ಬಂಗಾರ ಇಟ್ಟಿರುತ್ತಾರೋ ಅವರ ಹೆಸರಿಗೆ ನೋಟಿಸ್ ಬರುತ್ತದೆ ಆಗ ಬಯಲಾಗುತ್ತದೆ ಇವರ ಅಸಲಿ ಬಣ್ಣ.
 ನೋಟಿಸ್ ನಿಂದ ಬೈಯಲಾಯ್ತಾ ನಕಲಿ ಬಂಗಾರದ ಜಾಲ..?!
  ನಕಲಿ ಚಿನ್ನವನ್ನು ಅಡವಿಟ್ಟು ಅದನ್ನು ಬಿಡಿಸಿಕೊಳ್ಳದೆ ಇದ್ದಾಗ ಚಿನ್ನವನ್ನು ಅಡವಿಟ್ಟಿಸಿಕೊಂಡವರು ನೋಟಿಸ್ ಕಳುಹಿಸುತ್ತಾರೆ ಆಗ ಆ ನೋಟಿಸ್ ಗೆ ಹೆದರಿ ಯಾರ ಹೆಸರಿಗೆ ಚಿನ್ನವನ್ನು ಇಟ್ಟಿರುತ್ತಾರೋ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡುತ್ತಾನೆ ಆ ದೂರಿನ ಆಧಾರದ ಮೇಲೆ ಪೊಲೀಸರು ಈ ನಕಲಿ ಜಾಲದ ಬೆನ್ನು ಹತ್ತುತ್ತಾರೆ ಇದು ಹಲವು ನಕಲಿ ಬಂಗಾರದ ಜಾಲಗಳಲ್ಲಿ ಸಿಕ್ಕಿಬೀಳುವ ಕ್ರಮ ಇಲ್ಲಿ ಯಾವ ರೀತಿ ಆಗಿದೆ ಎನ್ನುವುದನ್ನು ಪೊಲೀಸರ ತನಿಖೆಯಿಂದ ಕಾದುನೋಡಬೇಕು.
 ಸೊಸೈಟಿಗಳೇ ಇವರ ಟಾರ್ಗೆಟ್..!
 ತೀರ್ಥಹಳ್ಳಿಯಲ್ಲಿರುವ ಸಣ್ಣಪುಟ್ಟ ಹಾಗೂ ದೊಡ್ಡ ಸೊಸೈಟಿಗಳಲ್ಲೂ ಕೂಡ ಈ ನಕಲಿ ಬಂಗಾರವನ್ನು ಅಡವಿಟ್ಟು ಹಣವನ್ನು ತೆಗೆದುಕೊಂಡಿದ್ದು ಅದು ಯಾವ ಮಟ್ಟದ ಪಾರದರ್ಶಕತೆಯನ್ನು ಈ ಸೊಸೈಟಿ ಅವರು ಉಳಿಸಿಕೊಂಡಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ ಒಂದು ಮೂಲಗಳ ಪ್ರಕಾರ ಸೊಸೈಟಿಗಳ ನಿರ್ದೇಶಕರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
 ಕೆಲವು ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಶಾಮೀಲ್..!
 ಕೆಲವೊಂದು ಪ್ರಭಾವಿ ವ್ಯಕ್ತಿಗಳು ಕೂಡ ಈ ನಕಲಿ ಬಂಗಾರದ ಜಾಲದಲ್ಲಿ ಶಾಮೀಲಾಗಿದ್ದು ಸೊಸೈಟಿಗಳ ನಿರ್ದೇಶಕರು ಕೂಡ ಇದರಲ್ಲಿ ಇರುವ ಶಂಕೆ ವ್ಯಕ್ತವಾಗುತ್ತಿದೆ ಸೊಸೈಟಿಗಳನ್ನೇ ನಂಬಿ ಹಣ ಇಟ್ಟವರ ಕಥೆ ಏನು..?
 ಒಬ್ಬ ಮಹಿಳೆ ಹಾಗೂ ಒಬ್ಬ ಮುಖ್ಯ ಪೊಲೀಸ್ ಪೇದೆ ಇದರ ರೂವಾರಿಗಳಾಗಿದ್ದಾರೆ..?!
 ತೀರ್ಥಹಳ್ಳಿ ಮೂಲದ ಪ್ರತಿಷ್ಠಿತ ಕುಟುಂಬದ ಒಬ್ಬ ಮಹಿಳೆ ಹಾಗೂ ಒಬ್ಬ ಮುಖ್ಯ ಪೊಲೀಸ್ ಪೇದೆ ಈ ನಕಲಿ ಬಂಗಾರದ ಜಾಲದಲ್ಲಿ ಸೇರಿಕೊಂಡಿದ್ದು ದೊಡ್ಡ ಮಟ್ಟದ ವ್ಯವಹಾರ ನಡೆದಿದೆ ಒಂದು ಮಾಹಿತಿಯ ಪ್ರಕಾರ ಸುಮಾರು ಕೋಟಿ ಕೋಟಿ ಮೊತ್ತದ ಬೃಹತ್ ಹಗರಣ ಇದಾಗಿದ್ದು ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
 ಮುಖ್ಯ ಪೊಲೀಸ್ ಪೇದೆ ಹಾಗೂ ಆ ಮಹಿಳೆಯ ಬಂಧನವಾಗಬೇಕು ಸಮಗ್ರ ತನಿಖೆಯಾಗಬೇಕು..?!
 ಶಿವಮೊಗ್ಗ ಮೂಲದ ಮುಖ್ಯ ಪೊಲೀಸ್ ಪೇದೆ ಹಾಗೂ ತೀರ್ಥಹಳ್ಳಿ ಮೂಲದ ಆ ಮಹಿಳೆ ಇಬ್ಬರನ್ನು ಪೊಲೀಸರು ತನಿಖೆಗೆ ಒಳಪಡಿಸಬೇಕು ಇಲ್ಲವಾದಲ್ಲಿ ಈ ಪ್ರಕರಣ ಬಯಲಿಗೆ ಬರುವುದಿಲ್ಲ.
 ಶಿವಮೊಗ್ಗ ಪೊಲೀಸರಿಗೆ ಸವಾಲಾದ ಪ್ರಕರಣ..!
 ಕೋಟಿ ಕೋಟಿ ಮೊತ್ತದ ಹಣ ಈ ನಕಲಿ ಬಂಗಾರದ ಜಾಲದಲ್ಲಿ ಇರುವುದರಿಂದ ಬೃಹತ್ ನಕಲಿ ಬಂಗಾರದ ಹಗರಣ ಇದಾಗಿರುವುದರಿಂದ ಶಿವಮೊಗ್ಗ ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿದ್ದು ಇದನ್ನು ಸಮಗ್ರವಾಗಿ ತನಿಖೆ ನಡೆಸಿ ಬಹು ಮುಖ್ಯವಾಗಿ ಪ್ರಮುಖ ಪಾತ್ರ ವಹಿಸಿರುವ ಮುಖ್ಯ ಪೊಲೀಸ್ ಪೇದೆ ಹಾಗೂ ಆ ಮಹಿಳೆ ಹಾಗೂ ತಪ್ಪಿಸಿಕೊಂಡು ಓಡಾಡುತ್ತಿರುವ ಇನ್ನೊಬ್ಬನ ರಕ್ಷಣೆಗೆ ನಿಂತಿರುವ ಪೊಲೀಸನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಆಗ ದೊಡ್ಡದೊಂದು ಜಾಲ ಹೊರಗೆ ಬರುತ್ತದೆ ಆ ನಿಟ್ಟಿನಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿ ಐ ಸತ್ಯನಾರಾಯಣ ಕಾರ್ಯನಿರ್ವಹಿಸುತ್ತಾರೆ ಎನ್ನುವ ನಂಬಿಕೆ  ಪತ್ರಿಕೆಯದ್ದು.
 ಯುವ,ಉತ್ಸಾಹಿ,ದಕ್ಷ ಎಸ್‌ಪಿ ನಿಖಿಲ್ ಅವರು ಯಾವುದೇ ಮುಲಾಜು ಇಲ್ಲದೆ ಈ ದಂಧೆಯ ಹಿಂದಿರುವ ಪೊಲೀಸ್ ಕ್ರಿಮಿಯನ್ನು ಕೂಡ ಹಿಡಿದು ಒಳಗೆ ಹಾಕಲಿ ಸಮಗ್ರವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಿ.
 ಉಳಿದ ಮಾಹಿತಿ ನಿರೀಕ್ಷಿಸಿ….

Related Articles

Latest news
Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ... ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..! ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..! ಅಮೃತ ಯೋಜನೆಯಡಿ ಕೈಗೊಂಡ ರಸ್ತೆ, ಚರಂಡಿ,ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ಬಿ.ಬಿ.ಕಾವೇರಿ ..! ರಾಜ್ಯದ ರೈತರಿಗೆ, ಕೋಳಿ ಸಾಕಾಣಿಕೆದಾರರಿಗೆ ಗುಡ್ ನ್ಯೂಸ್: ಶಾಶ್ವತ ವಿದ್ಯುತ್ ಸಂಪರ್ಕದ ಅರ್ಜಿ ಅವಧಿ ಆಗಸ್ಟ್ 15 ರವರೆಗ... Shivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್... ಶಿವಮೊಗ್ಗವನ್ನು ‘ಟೂರಿಸಂ ಹಬ್’ ಆಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರಿಗೆ ಮಲೆನಾಡು ಪ್ರದೇಶ ಅಭಿ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ...