ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..!
ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಸಾಗವಾನಿ ಮರಗಳ ಅಕ್ರಮ ಕಡಿತ ಮತ್ತು ಸಾಗಾಟ ಪ್ರಕರಣ ಬಯಲಿಗೆ ಬಂದಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಶಿವಮೊಗ್ಗ ತಾಲೂಕು ಮಲೇಶಂಕರ ಸಮೀಪದ ಕರಕುಚ್ಚಿ ಗ್ರಾಮದ ಅರಣ್ಯ ಸರ್ವೆ ನಂಬರ್ ಒಂದರಲ್ಲಿ ಈ ಕೃತ್ಯ ನಡೆದಿದೆ. ಆರೋಪಿಗಳಾದ ಕೃಷ್ಣಮೂರ್ತಿ ಬಿನ್ ಗಿಡ್ಡ ನಾಯ್ಕ್ , ರಾಘವೇಂದ್ರ, ಶಿವಪ್ಪ, ಸ್ವಾಮಿ ಬಿನ್ ಕೃಷ್ಣಪ್ಪ, ಶೇಖರಪ್ಪ, ಬೊಮ್ಮ ಮತ್ತು ಅರುಣ್ ಕುಮಾರ್ ಬಿನ್ ರಾಜಪ್ಪ ಎಂಬುವವರು ಸೇರಿ ಸುಮಾರು 5 ಸಾಗವಾನಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದರು.
ಮನೆ ನಿರ್ಮಾಣದ ಹಂತದಲ್ಲಿದ್ದ ಆರೋಪಿ ಕೃಷ್ಣಮೂರ್ತಿ, ಮರಗಳನ್ನು ಕಡಿದು ತಂದು ತನ್ನ ಕರಕುಚ್ಚಿ ನಿವಾಸದ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆ ಸಂಜೆ 5:00 ಗಂಟೆಗೆ ದಾಳಿ ನಡೆಸಿ ಅಂದಾಜು 1.5 ರಿಂದ 2 ಲಕ್ಷ ರೂಪಾಯಿ ಮೌಲ್ಯದ ಸುಮಾರು 16-17 ಸಾಗವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಮರ ಸಾಗಿಸಲು ಬಳಸಲಾಗಿದ್ದ ಟ್ರ್ಯಾಕ್ಟರ್ ಅನ್ನು ಸಹ ಜಪ್ತಿ ಮಾಡಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಕೃಷ್ಣಮೂರ್ತಿಯನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳಾದ ರಾಘವೇಂದ್ರ, ಶಿವಪ್ಪ, ಸ್ವಾಮಿ, ಶೇಖರಪ್ಪ, ಬೊಮ್ಮ ಮತ್ತು ಅರುಣ್ ಕುಮಾರ್ ಪ್ರಸ್ತುತ ತಲೆಮರೆಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಭಾಗದಲ್ಲಿ ಸಿರಿಗೆರೆ ಚೆಕ್ ಪೋಸ್ಟ್ ಇದ್ದರೂ ಕೂಡ ಏನು ಉಪಯೋಗ ಇಲ್ಲ ಇಲ್ಲಿ ವಾಹನಗಳ ತಪಾಸಣೆ ನಡೆಯುವುದಿಲ್ಲ ಸಿ ಸಿ ಕ್ಯಾಮೆರಾ ನೋಡಿದರೆ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ಬರುತ್ತದೆ ಈ ಭಾಗದಲ್ಲಿ ಎಥೇಚ್ಛವಾಗಿ ಅಕ್ರಮ ಮರ ಕಡಿತಲೆ ನಡೆಯುತ್ತಿದ್ದು ಕಾಡುಪ್ರಾಣಿಗಳನ್ನು ಕೂಡ ಶಿಕಾರಿ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅರಣ್ಯ ಅಧಿಕಾರಿಗಳ ಸಮಗ್ರ ತನಿಖೆಯಿಂದ ಎಲ್ಲವೂ ಹೊರಬರಬೇಕಾಗಿದೆ. ಲಕ್ಷಾಂತರ ಬೆಳೆ ಬಾಳುವ ಮರಗಳು ಹೋಗಿದ್ದಾದರೂ ಎಲ್ಲಿಗೆ ವ್ಯವಸ್ಥಿತವಾಗಿ ಒಂದು ತಂಡ ಅಕ್ರಮ ಪರಿಕಡಿತಲೇ ಹಾಗೂ ಶಿಕಾರಿಯಲ್ಲಿ ಪಾಲ್ಗೊಂಡಿದ್ದು ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ ಇಲ್ಲವಾದಲ್ಲಿ ಇಲ್ಲಿನ ಬೆಲೆಬಾಳುವ ಮರಗಳು ಉಳಿಯುದಿಲ್ಲ.
ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಅರವಿಂದ್, ಉಪ ಅರಣ್ಯ ವಲಯ ಅಧಿಕಾರಿ ಕಿರಣ್, ಗಸ್ತು ಅರಣ್ಯ ಪಾಲಕರಾದ ಪ್ರವೀಣ್ ಕುಮಾರ್, ಮಂಜುನಾಥ್, ಭರತ್, ಪಾಲ್ಗೊಂಡಿದ್ದರು.