Home ರಾಜ್ಯBig news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?!

Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?!

by EDITOR NEWS WARRIORS
0 comments

 

ರಾಜ್ಯ ಕಾಂಗ್ರೆಸ್ ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಡಿಕೆ ಶಿವಕುಮಾರ್ ಅಧಿಕಾರ ತೆಗೆದುಕೊಂಡು ಒಂದಷ್ಟು ಯೋಚನೆ ಹಾಗೂ ಯೋಜನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.

ಆದರೆ ಅಧಿಕಾರ ತೆಗೆದುಕೊಂಡು ಒಂದುವರೆ ತಿಂಗಳು ಕಳೆದಿದ್ದರು ಇನ್ನು ಸಚಿವ ಸಂಪುಟದ ವಿಸ್ತರಣೆ ಆಗಿಲ್ಲ ಜೊತೆಗೆ ಮತ್ತೊಂದು ಕಡೆ ನಿಗಮ ಮಂಡಳಿ ಹಾಗೂ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರುಗಳ ಬದಲಾವಣೆ ಕೂಡ ಆಗಿಲ್ಲ ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ ಎನ್ನಬಹುದು ಏಕೆಂದರೆ ಅವರ ಟಾರ್ಗೆಟ್ 2028ರ ಚುನಾವಣೆ ಹಾಗಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೈಕಮಾಂಡ್ ಸೂಚನೆ ಮೇರೆಗೆ 2028ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಒಂದಷ್ಟು ಮಹತ್ವದ ಬದಲಾವಣೆ ತರುವ ದಿಕ್ಕಿನಲ್ಲಿ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

 ಅದರ ಹಂತವಾಗಿ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರುಗಳ ಬದಲಾವಣೆ ಜೊತೆಗೆ ನಿಗಮ ಮಂಡಳಿಗಳಲ್ಲೂ ಕೂಡ ಮಹತ್ತರ ಬದಲಾವಣೆ ತರುವ ಸಾಧ್ಯತೆ ಇದೆ.

 ಕೆಪಿಸಿಸಿ ಅಧ್ಯಕ್ಷರ ಖಡಕ್ ಸೂಚನೆ..!

 ನೂತನವಾಗಿ ಆಯ್ಕೆಯಾಗಿರುವ ಕೆಪಿಸಿಸಿ ಅಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅಧಿಕಾರ ಎಲ್ಲರಲ್ಲೂ ಹಂಚಿಕೆ ಆಗಬೇಕು ಒಬ್ಬರಲ್ಲಿ ಇರಬಾರದು ಹಾಗಾಗಿ ನಿಗಮ ಮಂಡಳಿ ಸ್ಥಾನಗಳಿಗೆ ಈಗಾಗಲೇ ಇರುವವರು ರಾಜೀನಾಮೆ ನೀಡಿ ಬೇರೆಯವರಿಗೂ ಅವಕಾಶ ಮಾಡಿಕೊಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಈ ಸೂಚನೆಯ ಮೇರೆಗೆ ಹಲವರು ರಾಜೀನಾಮೆ ನೀಡಿದ್ದಾರೆ ಕೂಡ ಆದರೆ ಇನ್ನೂ ಕೆಲವರು ನಮ್ಮನ್ನೇ ಮುಂದುವರಿಸಬಹುದು ಎನ್ನುವ ಆಚಲ ನಂಬಿಕೆಯಲ್ಲಿ ಇದ್ದಾರೆ.

 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಬದಲಾವಣೆ..!

 2028ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರುಗಳ ಬದಲಾವಣೆ ಮಾಡುವ ಸಾಧ್ಯತೆ ಇದ್ದು ಈಗಾಗಲೇ ವೀಕ್ಷಕರನ್ನು ನೇಮಕ ಮಾಡಲಾಗಿದ್ದು ಆ ವೀಕ್ಷಕರು ಸೂಚಿಸಿದ ಹೆಸರುಗಳು ಹಾಗೂ ಪಕ್ಷದ ಆಂತರಿಕ ಮಾಹಿತಿ ಜಿಲ್ಲಾ ಪ್ರಮುಖ ಮುಖಂಡರುಗಳ ಸೂಚನೆ ಎಲ್ಲವನ್ನು ಸಂಗ್ರಹಿಸಿ ಸೂಕ್ತವಾದ ಅಧ್ಯಕ್ಷರನ್ನು ಪಕ್ಷ ಕಟ್ಟಿ ಬೆಳೆಸುವ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆ ಇದೆ.

 ಶಿವಮೊಗ್ಗಕ್ಕೆ ಯಾರಾಗುತ್ತಾರೆ ಅಧ್ಯಕ್ಷರು..?

 ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗುವ ಪಟ್ಟಿಯಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿದ್ದು ಅದರಲ್ಲೂ ಪ್ರಮುಖವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯೋಗೀಶ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು, ಹಿರಿಯ ಮುಖಂಡ ಆಯನೂರ್ ಮಂಜುನಾಥ್, ಮಾಜಿ ಸೂಡಾ ಅಧ್ಯಕ್ಷ ರಮೇಶ್ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ ಹಿಂದೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ತೆಗೆದುಕೊಳ್ಳುವಾಗ ಇದ್ದ ಅಧ್ಯಕ್ಷ ಈಗಿನ ಸೂಡ ಅಧ್ಯಕ್ಷರು ಆಗಿರುವ ಹೆಚ್,ಎಸ್ ಸುಂದರೇಶ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಬಹುತೇಕ ಸುಂದರೇಶ್ ಅವರಿಗೆ ಮತ್ತೊಮ್ಮೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಏಕೆಂದರೆ ಪಕ್ಷ ಸಂಘಟನೆಯಲ್ಲಿ ಸುಂದರೇಶ್ ಪಾತ್ರ ಪ್ರಮುಖವಾಗಿದ್ದು ಅಧಿಕಾರ ಇಲ್ಲದ ಸಂದರ್ಭದಲ್ಲಿ ಕೂಡ ಪಕ್ಷವನ್ನು ಆಕ್ಟಿವ್ ಆಗಿ ಇಟ್ಟುಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಾ ಒಂದಿಲ್ಲೊಂದು ಹೋರಾಟ ಮಾಡಿಕೊಂಡು ಬೆಳಿಗ್ಗೆಯಿಂದ ರಾತ್ರಿವರೆಗೂ ಪಕ್ಷದ ಕಚೇರಿಯಲ್ಲಿ ಇದ್ದು ಕಾರ್ಯಕರ್ತರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದ ಸುಂದರೇಶ್ ಅಜಾತ ಶತ್ರುವಾಗಿದ್ದರು ಎಲ್ಲಾ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಸುಂದರೇಶ್ ಅವರಿಗೆ 2028ರ ಚುನಾವಣೆಯ ದೃಷ್ಟಿಯಿಂದ ಮತ್ತೊಮ್ಮೆ ಪಕ್ಷ ಸಂಘಟನೆಗಾಗಿ ಜವಾಬ್ದಾರಿ ನೀಡಿದ್ದರೂ ಆಶ್ಚರ್ಯವಿಲ್ಲ . ಆಯನೂರ್ ಮಂಜುನಾಥ್ ಅವರ ಹೆಸರು ಕೇಳಿ ಬರುತ್ತಿದೆ ಆದರೆ ಅವರು ಎಷ್ಟರಮಟ್ಟಿಗೆ ಇದನ್ನು ಒಪ್ಪುತ್ತಾರೋ ಗೊತ್ತಿಲ್ಲ ಹೇಳಿಕೇಳಿ ಆಯನೂರ್ ಮಂಜುನಾಥ್ ಉತ್ತಮ ವಾಗ್ಮಿ ರಾಜಕೀಯದ ಎಲ್ಲಾ ಮನೆಗಳನ್ನು ನೋಡಿಕೊಂಡು ಬಂದವರು ಅವರು ಮತ್ತೆ ಕೆಳಗೆ ಇಳಿದು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬರುವುದು ಡೌಟ್ ಪಕ್ಷ ಮನಸ್ಸು ಮಾಡಿ ಎಂಎಲ್ಸಿ ಮಾಡಿದರೆ ರಾಜಕೀಯ ಜೀವನಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಕ್ಕೂ ಸ್ವಾರ್ಥಕವಾಗುತ್ತದೆ.

 ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಬದಲಾವಣೆ..!

 ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಬದಲಾವಣೆ ಕೂಡ ನಡೆಯುವ ಸಾಧ್ಯತೆ ಇದ್ದು ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಶಿವಮೊಗ್ಗ ಭದ್ರಾವತಿ ಪ್ರಾಧಿಕಾರಕ್ಕೂ ಕೂಡ ಇದ್ದಾರೆ ಹಲವು ಆಕಾಂಕ್ಷಿಗಳು ..!

 ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿದ್ದು ಅದರಲ್ಲಿ ಪ್ರಮುಖವಾಗಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಮರಿಯಪ್ಪ, ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಅಲ್ಪಸಂಖ್ಯಾತರ ಕೋಟಾದಡಿ ಕಲೀಂಪಾಶ, ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ ಆದರೆ ಶ್ರೀಕಾಂತ್ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.

ಅಧಿಕಾರ ವಂಚಿತ ಶ್ರೀಕಾಂತ್ ಗೆ ಅಧಿಕಾರ ಸಿಗಲಿ ಎನ್ನುವುದು ಹಲವರ ಬಯಕೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಕಾಂತ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿಯವರಿಗೆ ಆಪ್ತರಾಗಿದ್ದ ಶ್ರೀಕಾಂತ್ ಕಳೆದ ವರ್ಷ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಿದ್ದರು ನೇರವಾಗಿ ಡಿಕೆ ಶಿವಕುಮಾರ್ ಪಕ್ಷಕ್ಕೆ ಬರಮಾಡಿಕೊಂಡಿದ್ದರು ಅವರಿಗೂ ಸೂಕ್ತವಾದ ಸ್ಥಾನ ನೀಡಬೇಕು ಎನ್ನುವುದು ಹಲವು ಹಿರಿಯ ಮುಖಂಡರ ಆಸೆಯಾಗಿದೆ. ಜೊತೆಗೆ ಶ್ರೀಕಾಂತ್ ಅವರು ಕೂಡ ಇಲ್ಲಿವರೆಗೂ ಯಾವುದೇ ಹುದ್ದೆಗಳನ್ನು ಅಲಂಕರಿಸಿಲ್ಲ ತಮ್ಮನ್ನು ನಂಬಿ ಬಂದವರನ್ನು ತಮ್ಮ ಜೊತೆಗೆ ಇದ್ದವರನ್ನು ಅವರು ಕೈಬಿಟ್ಟಿಲ್ಲ ಎಲ್ಲರಿಗೂ ಸೂಕ್ತ ಸ್ಥಾನಮಾನಗಳು ಸಿಕ್ಕಿವೆ ಆದರೆ ಶ್ರೀಕಾಂತ್ ಮಾತ್ರ ನತದೃಷ್ಟರು ಎಂದರೆ ತಪ್ಪಾಗುವುದಿಲ್ಲ ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ಸಹಕಾರಿ ಭೀಷ್ಮ ಎಂದೇ ಕರೆಸಿಕೊಳ್ಳುವ ಆರ್ ಎಂ ಮಂಜುನಾಥ್ ಗೌಡರ ಸಂಪರ್ಕಕ್ಕೆ ಬಂದ ಶ್ರೀಕಾಂತ್ ಅವರಿಗೆ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನ ಒಲಿದು ಬಂತು ನಂತರ ಇದೀಗ ಶಿವಮೊಗ್ಗ ಭದ್ರಾವತಿ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗುವ ಅವಕಾಶ ಸಿಗುವ ಸಾಧ್ಯತೆ ಇದ್ದು ಪರೋಪಕಾರಿ ಶ್ರೀಕಾಂತ್ ಬಂದರೆ ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದಲ್ಲಿ ಮತ್ತಷ್ಟು ಬದಲಾವಣೆ ಕಾಣಬಹುದು ಎನ್ನುವ ನಂಬಿಕೆ ಹಲವರದ್ದು.

ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಎರಡು ಸ್ಥಾನಗಳಿಗೂ ಸಾಕಷ್ಟು ಲಾಬಿಗಳು ನಡೆಯುತ್ತಿದ್ದು ಅಂತಿಮವಾಗಿ ಶ್ರೀಕಾಂತ್ ಹಾಗೂ ಸುಂದರೇಶ್ ಆಗುವ ಸಾಧ್ಯತೆ ಇದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಏನಾದರೂ ಆಶ್ಚರ್ಯವಿಲ್ಲ…

ರಘುರಾಜ್ ಹೆಚ್. ಕೆ.. 9449553305…

Related Articles

Latest news
Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ... ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!