ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ ಒಬ್ಬನ ಬಂಧನ ಇನ್ನೊಬ್ಬಳು ಪರಾರಿ ಮೂವರು ಮಹಿಳೆಯರ ರಕ್ಷಣೆ..!
ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ ಒಬ್ಬನ ಬಂಧನ ಇನ್ನೊಬ್ಬಳು ಪರಾರಿ ಮೂವರು ಮಹಿಳೆಯರ ರಕ್ಷಣೆ..! ಶಿವಮೊಗ್ಗ : ನಗರದ ಹೊರವಲಯದ ವಿದ್ಯಾನಗರದಲ್ಲಿರುವ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ಕೋಟೆ ಠಾಣೆಯ…
ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ ಒಬ್ಬನ ಬಂಧನ ಇನ್ನೊಬ್ಬಳು ಪರಾರಿ ಮೂವರು ಮಹಿಳೆಯರ ರಕ್ಷಣೆ..!
ಶಿವಮೊಗ್ಗ : ನಗರದ ಹೊರವಲಯದ ವಿದ್ಯಾನಗರದಲ್ಲಿರುವ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ಕೋಟೆ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಈ ದಾಳಿಯಲ್ಲಿ ಈ ಬ್ಯೂಟಿ ಪಾರ್ಲರ್ ನ ಮಾಲೀಕ ನಂದಕುಮಾರ್ ನನ್ನು ಬಂಧಿಸಿದ್ದಾರೆ. ಇನ್ನೊಬ್ಬಳು ಮಾಲಕಿ ವಿಜಯಲಕ್ಷ್ಮಿ ಪರಾರಿಯಾಗಿದ್ದು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ನಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ ಎಂದು ಹಲವು ದಿನಗಳಿಂದ ಸುದ್ದಿ ಬಿತ್ತರವಾಗಿತ್ತು ಈ ಸುದ್ದಿಯ ಬೆನ್ನಲ್ಲೇ ಒಂದಷ್ಟು ದಿನಗಳ ಕಾಲ ಈ ಪಾರ್ಲರ್ ಬಂದ್ ಕೂಡ ಆಗಿತ್ತು. ಆದರೆ ಮತ್ತೆ ಪ್ರಾರಂಭವಾಗಿ ಇಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಆಧಾರದ ಮೇಲೆ ಕೋಟೆ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು.
ಈ ದಾಳಿಯ ಸಮಯದಲ್ಲಿ ಶಿವಮೊಗ್ಗದ ಗೋಪಾಲ, ರಾಗಿಗುಡ್ಡ,ಅಶೋಕ್ ನಗರದ ಮೂವರು ಮಹಿಳೆಯರನ್ನು ವೈಶ್ಯಾವಾಟಿಕೆಗೆ ಈ ಪಾರ್ಲರ್ ನ ಮಾಲಿಕರಾದ ನಂದಕುಮಾರ್ ಹಾಗೂ ವಿಜಯಲಕ್ಷ್ಮಿ ಸೇರಿ ಈ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದು ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈ ಮಹಿಳೆಯರನ್ನು ರಕ್ಷಣೆ ಮಾಡಿ ಅವರ ವೈದ್ಯಕೀಯ ತಪಾಸಣೆ ಮಾಡಿಸಿ ಅವರಿಂದ ಹೇಳಿಕೆ ತೆಗೆದುಕೊಂಡು ಬಂದಿತ ಆರೋಪಿ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ವಿಜಯಲಕ್ಷ್ಮಿಯ ಹುಡುಕಾಟದಲ್ಲಿದ್ದಾರೆ.