Home ಶಿವಮೊಗ್ಗBig news: ಜಿ ಪಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕ ಜಿ ಜಿ ಹಿರೇಮಠ್ ಗೆ ನ್ಯಾಯಾಲಯದಲ್ಲಿ ಹಿನ್ನಡೆ..!

Big news: ಜಿ ಪಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕ ಜಿ ಜಿ ಹಿರೇಮಠ್ ಗೆ ನ್ಯಾಯಾಲಯದಲ್ಲಿ ಹಿನ್ನಡೆ..!

by EDITOR NEWS WARRIORS
0 comments
ಶಿವಮೊಗ್ಗ: ಗಾಡಿಕೊಪ್ಪ ಸರ್ವೆ ನಂಬರ್ 15 ವಿವಾದಿತ ಪ್ರದೇಶದಲ್ಲಿ ಲಗನ್ ಸ್ಕೈಲೈನ್ ಎನ್ನುವ ಸುಮಾರು ಹದಿಮೂರು ಅಂತಸ್ತಿನ 238 ಅಪಾರ್ಟ್ಮೆಂಟ್ ಗಳನ್ನು ನಿರ್ಮಿಸುತ್ತಿರುವ ಜಿಪಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕ ಜಿ ಜಿ ಹಿರೇಮಠ್ ಗೆ ನ್ಯಾಯಾಲಯದಲ್ಲಿ ಹಿನ್ನಡೆ ಉಂಟಾಗಿದೆ.
ಏನಿದು ಪ್ರಕರಣ : 
ನಗರದ ಗಾಡಿ ಕೊಪ್ಪ ಸರ್ವೆ ನಂಬರ್ 15ರಲ್ಲಿ ಕೆರೆ ಒತ್ತುವರಿ ಮಾಡಿ ಲಗಾನ್ ಸ್ಕೈಲೈನ್ ಎನ್ನುವ ಹೆಸರಿನ ಬೋರ್ಡ್ ಹಾಕಿಕೊಂಡು ಸುಮಾರು 238 ಅಪಾರ್ಟ್ಮೆಂಟ್ ಗಳನ್ನು ನಿರ್ಮಿಸುತ್ತಿರುವ ಬಗ್ಗೆ ಪತ್ರಿಕೆ ವಿಸ್ತಾರವಾಗಿ ಸುದ್ದಿ ಪ್ರಕಟಿಸಿದ್ದು ಈ ಸುದ್ದಿ ಬೆನ್ನಲ್ಲೇ ಮಾನ್ಯ ಉಪ ಲೋಕಾಯುಕ್ತರಾದ ಪಣಿಂದ್ರ ಅವರು ಸುಮೋಟೋ ಪ್ರಕರಣವನ್ನು ದಾಖಲಿಸಿದ್ದರು ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ADLR ಸರ್ವೆ ಮಾಡಿಸಿದ್ದರು ಸರ್ವೆಯಲ್ಲಿ ಇವರ ಒಂದಷ್ಟು ಒತ್ತುವರಿ ತೆರವುಗೊಳಿಸಲಾಗಿತ್ತು. ನಂತರ ಗಡಿಯನ್ನು ಗುರುತಿಸಿದ್ದರು ಆದರೆ ಅದಕ್ಕೆ ಸೂಕ್ತ ಬಪರ್ ಅನ್ನು ಇನ್ನು ನಿಗದಿಪಡಿಸಿಲ್ಲ ಈಗಾಗಲೇ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆಯ ಆಯುಕ್ತರಿಗೆ ಕೆರೆಗೆ ಸಂಬಂಧಿಸಿದಂತೆ ಸೂಕ್ತ ಬಪರ್ ಅನ್ನು ಗುರುತಿಸುವಂತೆ ಆದೇಶಿಸಿದ್ದಾರೆ. ಆದರೆ ಇಲ್ಲಿವರೆಗೂ ಸದರಿ ಕೆರೆಗೆ ಗಡಿ ಗುರುತಿಸಿ ಆದಮೇಲೆ ಬಫರ್ ಗುರುತಿಸಿಲ್ಲ ಇದಕ್ಕೆ ಹೊಂದಿಕೊಂಡಂತೆ ಇರುವ ಸರ್ವೆ ನಂಬರ್ 22 /2B ಹಾಗೂ 22/2C ಅಲ್ಲಿ ಜೆಪಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಮಾಲೀಕ ಜಿ ಜಿ ಹಿರೇಮಠ್ ಎನ್ನುವ ವ್ಯಕ್ತಿ 13 ಅಂತಸ್ತುಳ್ಳ 238 ಅಪಾರ್ಟ್ಮೆಂಟ್ ಗಳ ಬೃಹತ್ ಬಹುಮಹಡಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಈ ಕಟ್ಟಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪ ದೋಷಗಳಿದ್ದು ಇದರ ಬಗ್ಗೆ ಪತ್ರಿಕೆ ನಿರಂತರವಾಗಿ ಸುದ್ದಿ ಪ್ರಕಟಿಸಿದ್ದು ಈ ಸುದ್ದಿಗಳ ಬೆನ್ನಲ್ಲೇ ಪತ್ರಿಕೆಯಲ್ಲಿ ನಮ್ಮ ವಿರುದ್ಧ ಸುದ್ದಿ ಪ್ರಕಟಿಸಬಾರದು ಇದಕ್ಕೆ ತಡೆ ಆಜ್ಞೆ ನೀಡಬೇಕು ಎಂದು ಮಾನ್ಯ ಎರಡನೇ ಹೆಚ್ಚುವರಿ ನ್ಯಾಯಾಲಯ ಶಿವಮೊಗ್ಗ ಇವರಲ್ಲಿ ಪತ್ರಿಕೆ ವಿರುದ್ಧವಾಗಿ ದೂರು ದಾಖಲಿಸಿದ್ದರು ಈ ದೂರಿನ ಬೆನ್ನಲ್ಲೇ ಪತ್ರಿಕೆ ಸಾಕಷ್ಟು ಮಾಹಿತಿಯನ್ನು ನ್ಯಾಯಲಯಕ್ಕೆ ನೀಡಿದ್ದು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಇಂದು ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಪತ್ರಿಕೆ ಪರವಾಗಿ ಸಮಗ್ರವಾಗಿ ವಾದ ಮಂಡಿಸಿದ ವಕೀಲ ಎಸ್‌ ಡಿ ವಿನಯ್ ಕುಮಾರ್ ಅವರು ಏಕೆ ತಡೆಯಾಜ್ಞೆ ನೀಡಬಾರದು ಎನ್ನುವುದನ್ನು ಮಾನ್ಯ ನ್ಯಾಯಾಲಯಕ್ಕೆ ವಿವರಿಸಿದ್ದರು ಇದನ್ನು ಮನಗಂಡ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಶಾರದಾ ಕೊಪ್ಪದ್ ಅವರು ಪತ್ರಿಕಾ ಸ್ವಾತಂತ್ರವನ್ನು ಎತ್ತಿ ಹಿಡಿದಿದ್ದು ತಡೆಯಾಜ್ಞೆ ನೀಡಲು ನಿರಾಕರಿಸಿದ್ದಾರೆ.
ಯಾರು ಈ ಹಿರೇಮಠ್..?!
ಈತನ ಬಗ್ಗೆ ಬರೆಯಲು ಹೋದರೆ ಸಾಕಷ್ಟು ವಿಷಯಗಳು ಹೊರಬರುತ್ತವೆ ಒಂದು ಕಾಲದಲ್ಲಿ ಸೈಕಲ್ ನಲ್ಲಿ ಕಲಘಟಗಿಗೆ ಬರುತ್ತಿದ್ದ ಈತ ಇಂದು ಕೋಟಿ ಕೋಟಿಯ ವ್ಯವಹಾರ ಮಾಡುತ್ತಿರುವುದರ ಹಿಂದೆ ಸಾಕಷ್ಟು ಕಥೆಗಳಿವೆ ಧಾರವಾಡ ಹುಬ್ಬಳ್ಳಿಯ ನೊಂದ ಜನರು ಈತನ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಅದನ್ನು ಪತ್ರಿಕೆ ದಾಖಲೆ ಸಮೇತ ತೆರೆದಿಡಲಿದೆ.
ಈಗ ಶಿವಮೊಗ್ಗ ವಿಷಯಕ್ಕೆ ಬರುವುದಾದರೆ ಇಲ್ಲಿ ಕೂಡ ಈತನ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬರುತ್ತಿವೆ. ಈತ ಈಗ ನಿರ್ಮಿಸುತ್ತಿರುವ ಅಪಾರ್ಟ್ಮೆಂಟ್ ಗೊಂದಲದ ಗೂಡಾಗಿದೆ ಸರಿಯಾದ ದಾಖಲೆಗಳು ಇಲ್ಲ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಗಳನ್ನು ತೆಗೆದುಕೊಳ್ಳದೆ ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದು ನಿರ್ಮಾಣದಲ್ಲೂ ಕೂಡ ಲೋಪದೋಷಗಳು ಕಂಡುಬರುತ್ತಿದ್ದು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ತೆಗೆದುಕೊಂಡ ಅನುಮತಿಗೆ ತಕ್ಕಹಾಗೆ ಅಪಾರ್ಟ್ಮೆಂಟ್ ಕಾಮಗಾರಿ ನಿರ್ಮಾಣವಾಗುತ್ತಿಲ್ಲ ಹಾಗೆ ನಿಯಮಗಳನ್ನು ಗಾಳಿಗೆ ತೂರಿ ಈತ ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದು ಹಲವು ಇಲಾಖೆಗಳು ಈಗಾಗಲೇ ನೋಟಿಸ್ ಕೂಡ ನೀಡಿದ್ದು ಬಾರಿ ಮೊತ್ತದ ದಂಡ ಹಾಕುವ ಸಾಧ್ಯತೆ ಇದೆ ಇದರ ಜೊತೆಗೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲ ಕಾರ್ಮಿಕ ಇಲಾಖೆಯಿಂದ ಅನುಮತಿ ಇಲ್ಲ ಎನ್ನುವ ಮಾಹಿತಿ ಇದೆ ಇದರ ಬಗ್ಗೆ ಪತ್ರಿಕೆ ಕಾರ್ಮಿಕ ಇಲಾಖೆಯ ಅಧಿಕಾರಿ ವೇಣುಗೋಪಾಲ್ ಅವರಿಗೆ ದೂರು ನೀಡಿದಾಗ ಅವರು ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ವಿವರ ನೀಡುವಂತೆ ನೋಟಿಸ್ ನೀಡಿದ್ದರೂ ಕೂಡ ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ ಎನ್ನುತ್ತಾರೆ ವೇಣುಗೋಪಾಲ್ ಜೊತೆಗೆ ಇಲ್ಲಿ ಅಕ್ರಮವಾಗಿ ತೆಗೆದಿರುವ ಮಣ್ಣು ,ಕಲ್ಲನ್ನು ಬೇರೆ ಕಡೆಗೆ ಸಾಗಾಟ ಮಾಡಿ ಸರ್ಕಾರಕ್ಕೆ ಕೋಟಿಗೊ ಮೀರಿ ರಾಜಧನ ಕಟ್ಟದೆ ನಷ್ಟ ಉಂಟು ಮಾಡಿದ್ದು ಆ ದಂಡವನ್ನು ಕೂಡ ‌ ಕಟ್ಟಬೇಕಾಗುತ್ತದೆ.
ಪ್ಲಾನಿಂಗ್ ಪ್ರಕಾರ ಅಪಾರ್ಟ್ಮೆಂಟ್ ಕಾಮಗಾರಿ ನಿರ್ಮಾಣವಾಗುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ ಇನ್ನೊಂದೆಡೆ ಇದಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ವಸ್ತುಗಳನ್ನು ಬಳಸುತ್ತಿಲ್ಲ ಎನ್ನುವುದು ಇನ್ನೊಂದು ಕಡೆ ಈತ ಮಾಡಿರುವ ಬೇರೆ ಅಪಾರ್ಟ್ಮೆಂಟ್ ಕಥೆ ಕೂಡ ಇದೇ ಆಗಿದೆ ಅಲ್ಲೂ ಕೂಡ ಒತ್ತುವರಿ ಮಾಡಿಕೊಂಡಿದ್ದು ಇಲ್ಲಿಯವರೆಗೂ ಖರೀದಿ ಮಾಡಿದ ಮಾಲೀಕರಿಗೆ ಅಪಾರ್ಟ್ಮೆಂಟ್ ನ ಕೀ ಹಸ್ತಾಂತರವಾಗಿಲ್ಲ ರೇರಾ ನಿಯಮದ ಪ್ರಕಾರ 18 ರಿಂದ 20 ತಿಂಗಳ ಒಳಗೆ ಖರೀದಿ ಮಾಡಿದ ಮಾಲೀಕರಿಗೆ ತಮ್ಮ ಅಪಾರ್ಟ್ಮೆಂಟ್ ನ್ ಕೀ ಹಸ್ತಾಂತರವಾಗಬೇಕು ಆದರೆ ಇಲ್ಲಿ ಮೂರು ವರ್ಷವಾದರೂ ಇನ್ನೂ ಈ ಹಸ್ತಾಂತರವಾಗಿಲ್ಲ ಜೊತೆಗೆ ಪಾರ್ಕ್ ಒತ್ತುವರಿ, ಕಳಪೆ ಗುಣಮಟ್ಟದ ವಸ್ತುಗಳನ್ನು ಅಪಾರ್ಟ್ಮೆಂಟ್ ಗೆ ಬಳಸಿರುವುದು ಮೂರನೇ ಪಾರ್ಟಿ ಥರ್ಡ್ ಪಾರ್ಟಿ ರಿಪೋರ್ಟ್ ಇಲ್ಲದೆ ಇರುವುದು ಜೊತೆಗೆ ಜಿಪಿಎಸ್ ಫೋಟೋಗಳು ಲಭ್ಯವಿಲ್ಲದೆ ಇರುವುದು ಹಾಗೆ ಅಪಾರ್ಟ್ಮೆಂಟ್ ಗೆ ಬಳಸಿರುವ ಮರ, ಸಿಮೆಂಟ್, ಕಬ್ಬಿಣ, ಕಳಪೆ ಗುಣಮಟ್ಟದ್ದಾಗಿದ್ದು ಅಪಾರ್ಟ್ಮೆಂಟ್ ಅಪಾಯಕಾರಿ ಹಂತದಲ್ಲಿ ಇದೆ ಎನ್ನಲಾಗುತ್ತಿದೆ ಆಸೆ ಇಟ್ಟುಕೊಂಡು ಅಪಾರ್ಟ್ಮೆಂಟ್ ಕೊಳ್ಳುವವರಿಗೆ ಇಂಥವರು ಹೇಗೆ ಯಾಮಾರಿಸುತ್ತಾರೆ ನೋಡಿ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಹಣ ಹಾಕಿದವರಿಗೆ ಮೋಸವಾಗಬಾರದು ಪತ್ರಿಕೆಗೆ ಬಂದ ಮಾಹಿತಿಯ ಪ್ರಕಾರ ಈತ ಶಿವಮೊಗ್ಗದಲ್ಲಿ ಸಾಕಷ್ಟು ಕಡೆ ಲಗನ್ ಸ್ಕೈಲೈನ್ ಅಪಾರ್ಟ್ಮೆಂಟ್ ಹೆಸರಿನಲ್ಲಿ ಹಣ ಎತ್ತುತ್ತಿದ್ದಾನೆ ಎನ್ನುವ ದೂರುಗಳಿವೆ ಒಂದು ವೇಳೆ ಈತನನ್ನು ನಂಬಿ ಸರಿಯಾದ ದಾಖಲೆಗಳನ್ನು ನೋಡದೆ ಮೂಲ ಮಾಲೀಕರನ್ನು ಮಾತನಾಡಿಸದೆ ಅಪಾರ್ಟ್ಮೆಂಟ್ ಕೊಂಡರೆ ಅವರಿಗೆ ರಕ್ಷಕರು ಯಾರು..?! ರೇರಾ ನಿಯಮದ ಪ್ರಕಾರ ಅಪಾರ್ಟ್ಮೆಂಟ್ ನಲ್ಲಿ ಹಣ ತೊಡಗಿಸುವವರು ನೇರವಾಗಿ ಅಪಾರ್ಟ್ಮೆಂಟ್ ಮಾಲೀಕರಿಗೆ ಹಣವನ್ನು ಹಾಕುವಂತಿಲ್ಲ ರೇರಾ ಅಕೌಂಟಿಗೆ ಹಣ ಹೋಗಬೇಕು ಆದರೆ ಇಲ್ಲಿ ಹಿರೇಮಠ್ ಎನ್ನುವ ವ್ಯಕ್ತಿ ನೇರವಾಗಿ ತನ್ನ ಖಾತೆಗೆ ಹಣವನ್ನು ಜಮಾ ಮಾಡಿಕೊಂಡಿದ್ದಾನೆ ಎನ್ನುವ ಆರೋಪಗಳಿವೆ ಇದು ಕೂಡ ತನಿಖೆ ಆಗಬೇಕು.
ಆತ್ಮೀಯರೇ, ಅಪಾರ್ಟ್ಮೆಂಟ್ ಕೊಳ್ಳುವಾಗ ಎಚ್ಚರವಿರಲಿ ಹಣ ಹಾಕುವ ಮುಂಚೆ ಸಾಕಷ್ಟು ಯೋಚನೆ ಮಾಡಿ ಮೋಸ ಹೋಗಬೇಡಿ ಮೂಲ ಮಾಲೀಕರೊಂದಿಗೆ ಚರ್ಚೆ ನಡೆಸಿ ನಂತರ ಹಣ ಹಾಕಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಇಲ್ಲವಾದಲ್ಲಿ ಮುಂದೆ ಆಗುವ ವಂಚನೆಗೆ ಯಾರು ಹೊಣೆಗಾರರಾಗುವುದಿಲ್ಲ ತಪ್ಪಿತಸ್ಥರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅದು ಎಂದಿಗೂ ತಪ್ಪುವುದಿಲ್ಲ ಅದು ಬೇರೆ ಮಾತು …
ಒಟ್ಟಿನಲ್ಲಿ ಪತ್ರಿಕೆಗೆ ಇದು ಹತ್ತನೇ ಜಯ ಸಾಕಷ್ಟು ಜನ ಇದೇ ರೀತಿ ಪತ್ರಿಕೆ ವಿರುದ್ಧ ಸುಳ್ಳು ದೂರುಗಳನ್ನು ನೀಡಿ ನಂತರ ಸರಿಯಾದ ದಾಖಲೆಗಳನ್ನು ನ್ಯಾಯಲಯಕ್ಕೆ ಒದಗಿಸಿದೆ ತೀರ್ಪು ಪತ್ರಿಕೆ ಪರವಾಗಿದೆ ಅದರಲ್ಲಿ ಇದು ಕೂಡ ಒಂದು ಪತ್ರಿಕೆ ಯಾವತ್ತೂ ಕೂಡ ಯಾರದ್ದು ತೇಜುವದೇ ಮಾಡುವುದಾಗಲಿ, ತೊಂದರೆ ಮಾಡುವುದಾಗಲಿ, ಬ್ಲಾಕ್ ಮೇಲ್ ಮಾಡುವುದಾಗಲಿ ಮಾಡುವುದಿಲ್ಲ ಪತ್ರಿಕೆಗೆ ಹೆದರಿಸಲು ಬಂದರೆ ಖಂಡಿತಾ ಕಾನೂನಿನ ಮೂಲಕ ಪತ್ರಿಕೆ ಉತ್ತರ ನೀಡಲಿದೆ…
ಲಗನ್ ಸ್ಕೈಲೈನ್ ಹಾಗೂ ಹಿರೇಮಠ್ ನ ಬೇರೆ ಅಪಾರ್ಟ್ಮೆಂಟ್ ಗಳ ಬಗ್ಗೆ ಪತ್ರಿಕೆ ವಿಸ್ತಾರವಾಗಿ ಸುದ್ದಿ ಪ್ರಕಟಿಸಲಿದೆ ನಿರೀಕ್ಷಿಸಿ…

ರಘುರಾಜ್ ಹೆಚ್‌ ಕೆ…9449553305….

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...