Home ದಾವಣಗೆರೆಜನಸ್ನೇಹಿ ಪೊಲೀಸ್ ಹರಿಹರ ಗ್ರಾಮಾಂತರ ಠಾಣೆಯ ದ್ವಾರಕೀಶ್ ಗೆ ಪ್ರಸಾಂಶನ ಪತ್ರ..! ಕಾರಣವೇನು..?!

ಜನಸ್ನೇಹಿ ಪೊಲೀಸ್ ಹರಿಹರ ಗ್ರಾಮಾಂತರ ಠಾಣೆಯ ದ್ವಾರಕೀಶ್ ಗೆ ಪ್ರಸಾಂಶನ ಪತ್ರ..! ಕಾರಣವೇನು..?!

by EDITOR NEWS WARRIORS
0 comments
ಶಿವಮೊಗ್ಗ: ಪೊಲೀಸ್ ಇಲಾಖೆಯ ಘನತೆಯನ್ನು ಎತ್ತಿ ಹಿಡಿದು ಪೊಲೀಸ್ ಇಲಾಖೆಯ ಗೌರವ  ಘನತೆಯನ್ನು ಕಾಪಾಡಿದಂತಹ ಸಾರ್ವಜನಿಕ ವಲಯದಲ್ಲಿ ಜನಮನ್ನಣೆಗೆ ಪಾತ್ರರಾದಂತಹ ಜನಸ್ನೇಹಿ ಪೊಲೀಸ್ ಆಗಿ ಸಾರ್ವಜನಿಕ ವಲಯದಲ್ಲಿ ಪಾತ್ರರಾಗಿರುವ ದ್ವಾರಕೀಶ್ ಎನ್.ಎಂ.ಸಿಪಿಸಿ 161.ದಾವಣಗೆರೆ ಜಿಲ್ಲೆ, ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತಮ ಬೀಟ್ ಕರ್ತವ್ಯವನ್ನು ನಿರ್ವಹಣೆ ಮಾಡಿ ಈ ಪ್ರಶಂಸೆ ಗೆ ಪಾತ್ರರಾಗಿದ್ದಾರೆ.
ದ್ವಾರಕೀಶ್ ಜನಸ್ನೇಹಿ ಪೊಲೀಸ್ ಆಗಿ ಗುರುತಿಸಿಕೊಂಡಿದ್ದು ಹೇಗೆ ‌…!

ದ್ವಾರಕೀಶ್ ತಮ್ಮ  ಬೀಟ್ ವ್ಯಾಪ್ತಿಯಲ್ಲಿ ಬರುವಂತಹ ಬನ್ನಿಕೋಡ ಗ್ರಾಮದ ಎಚ್ ಶಿವಪ್ಪ ಬಡಾವಣೆಯ ವಾಸಿಗಳಾದ ವಯೋ ವೃದ್ಧ ದಂಪತಿಗಳಾದ ಶ್ರೀಮತಿ ಶಶಿಕಲಾ ಗಂಡ ಚಂದ್ರಪ್ಪ ರವರ ಕುಂದು ಕೊರತೆಗಳನ್ನಾಗಿಸಿ ಅವರುಗಳ ರಕ್ಷಣೆಯ ಉದ್ದೇಶದಿಂದ ಅವರ ಮನೆಯ ಬಾಗಿಲು ಇಲ್ಲದಿರುವುದನ್ನ ಗುರುತಿಸಿ ರಾತ್ರಿಯ ವೇಳೆ ಯಾವುದೇ ಪ್ರಾಣಿಗಳು ಮನೆ ಒಳಗಡೆ ನುಗ್ಗುವ ಸಂಭವ ಇರುವುದನ್ನು ಗುರುತಿಸಿ ಯಾವುದಾದರೂ ಪ್ರಾಣಿಗಳಿಂದ  ಹಾನಿ ತೊಂದರೆಗಳು ಆಗಬಹುದೆಂದು ಆಲೋಚಿಸಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಆ ವಯೋ ವೃದ್ಧ ದಂಪತಿಗಳಿಗೆ ಧನಸಹಾಯದ ಮೂಲಕ ಅವರ ಮನೆಗೆ ಬಾಗಿಲುಗಳನ್ನು ಹಾಕಿಸಿ ಕೊಟ್ಟಿರುವುದು ಜನ ಮನ್ನಣೆಗೆ ಪಾತ್ರವಾಗಿದೆ .
ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು  ಸುದ್ದಿ ಮಾಡಿದ್ದು ಇಲಾಖೆಯ ಘನತೆಯ ಗೌರವ ತರುವಂತಹ ಕರ್ತವ್ಯ ಆಗಿದ್ದು  ಇಂತಹ ಕರ್ತವ್ಯ ನಿರ್ವಹಿಸಿದಂತಹ ದಾವಣಗೇರಿ ಜಿಲ್ಲೆ ಹರಿಹರ ತಾಲೂಕು ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಜನಸ್ನೇಹಿ ಗುರುತಿಸಲ್ಪಟ್ಟ ದ್ವಾರಕೇಶ್ ಏನ್ಎಂ ಸಿಪಿಸಿ 161 ಕರ್ತವ್ಯ ಜನ ಮನ್ನಣೆಗೆ ಪಾತ್ರವಾಗಿದೆ.
ಇಂತಹ ಅತ್ಯುತ್ತಮ ಕೆಲಸ ಗಳನ್ನು ಗುರುತಿಸಿ ಹಾಗೂ ಜನಸ್ನೇಹಿ ಪೊಲೀಸ್ ಆಗಿ  ಅಧಿಕಾರಿ ಸಿಬ್ಬಂದಿಗಳನ್ನು ಗುರುತಿಸಿ ಅವರ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆ ದಕ್ಷತೆ. ಶ್ರದ್ಧೆ. ನಿಷ್ಠೆ.ನಿಷ್ಪಕ್ಷಪಾತವಾದ ಸೇವೆ ಮತ್ತು ಸಮಯ ಪ್ರಜ್ಞೆಯನ್ನು ಗುರುತಿಸಿ . ಗೌರವ ಅಭಿನಂದನೆಗಳನ್ನು . ಪ್ರಶಂಷನಾ ಪತ್ರಗಳನ್ನು ನೀಡುವಂತಹ ಸರಳತೆಯ ಹೃದಯ ವೈಶಾಲ್ಯತೆ ಇರುವ  ಐಜಿಪಿ ರವಿಕಾಂತಗೌಡರಿಗೆ  ಹಾಗೂ ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ  ಉಮಾ ಪ್ರಶಾಂತ್ ಅವರ  ಹೃದಯ ವೈಶಾಲ್ಯತೆ ಹಾಗೂ ಸರಳತೆಯ ಸ್ವಭಾವ ಗುಣಕ್ಕೆ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿ  ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...