ಶಿವಮೊಗ್ಗ : ಆನೆ ಬಿಡಾರ ಸಕ್ರೆ ಬೈಲ್ ಕ್ಯಾಂಪಿನಲ್ಲಿ ಇರುವ ಆನೆಗಳಿಗೆ ಯಾಕೋ ನೆಮ್ಮದಿಗೆ ಇರಲು ಬಿಡುತ್ತಿಲ್ಲ ಇಷ್ಟು ದಿನ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ದೈತ್ಯ ಆನೆ ಬಾಲಣ್ಣನ ಸುದ್ದಿ ಇಡೀ ರಾಜ್ಯದ್ಯಂತ ಸಂಚಲನ ಉಂಟು ಮಾಡಿತ್ತು. ಇದೀಗ ಬಾಲಣ್ಣನ ಜೊತೆಗೆ ಉಳಿದ 27 ಆನೆಗಳು ಚಿಕಿತ್ಸೆಗೆ ಒಳಪಟ್ಟು ಚೇತರಿಸಿಕೊಂಡಿದ್ದು ಆರಾಮಾಗಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ.
ಆನೆ ಕೂದಲು ಮಾರಾಟದ ಜಾಲ ಪತ್ತೆ ಹಚ್ಚಿದ್ದ ಆರ್ ಎಫ್ ಓ..?
ಆನೆ ಕೂದಲು ಮಾರಾಟದ ಬೃಹತ್ ಜಾಲವೊಂದು ಆನೆ ಬಿಡಾರ ಸಕ್ರೆ ಬೈಲ್ ಕ್ಯಾಂಪಿನಲ್ಲಿ ಬಹಳಷ್ಟು ವರ್ಷಗಳಿಂದ ತಮ್ಮ ಕೈಚಳಕವನ್ನು ತೋರಿಸುತ್ತಿದ್ದು ಸಾವಿರಾರು ರೂಪಾಯಿಗಳನ್ನು ತೆಗೆದುಕೊಂಡು ಆನೆಗಳ ಕೂದಲನ್ನು ಮಾರಾಟ ಮಾಡುತ್ತಿದ್ದಾರೆ ಹಲವು ಬಾರಿ ಸಿಕ್ಕಿಬಿದ್ದಿದ್ದಾರೆ ಕೂಡ ಆದರೆ ಇಲ್ಲಿಯವರೆಗೂ ಅವರಿಗೆ ದೊಡ್ಡ ಮಟ್ಟದ ಶಿಕ್ಷೆ ಆಗಿಲ್ಲ ಆದರೆ ಇದೀಗ ಆನೆಯ ಕಾಯುವ ಕೆಲವೊಂದು ಮಾವುತರಗಳೇ ಈ ಕಾರ್ಯದಲ್ಲಿ ಪಾಲ್ಗೊಂಡಿರುವುದು ಆಘಾತಕಾರಿ ಸುದ್ದಿಯಾಗಿದೆ.
ಇವರ ಬೃಹತ್ ಜಾಲವನ್ನು ಆರ್ ಎಫ್ ಓ ವಿನಯ್ ಪತ್ತೆ ಹಚ್ಚಿದ್ದು ಎಫ್ ಐ ಆರ್ ಹಾಕಲು ಇವರನ್ನು ಬಿಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಆನೆಗಳ ಸಂರಕ್ಷಣೆ ಮಾಡಬೇಕಾದ ಕೆಲವೊಂದು ಮಾವುತರೇ ದೊಡ್ಡಮಟ್ಟದಲ್ಲಿ ವಿನಯ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಯಾವುದೇ ಒತ್ತಡಕ್ಕೆ ಮಣಿಯದೆ ಕೇಸ್ ದಾಖಲಾಗಬೇಕು ಇದರಲ್ಲಿ ಯಾರೇ ಇದ್ದರೂ ಶಿಕ್ಷೆಗೆ ಒಳಪಡಬೇಕು …. ಮತ್ತೊಮ್ಮೆ ಹೀಗಾಗದಂತೆ ಎಚ್ಚರ ವಹಿಸಬೇಕು…