
ಟಿವಿ9 ವರದಿಗಾರರು ಸಚಿವ ಈಶ್ವರಪ್ಪನವರಿಗೆ ಕನ್ನಡಪರ ಸಂಘಟನೆಗಳ ಬಂದ್ ಗೆ ನಿಮ್ಮ ಬೆಂಬಲ ಇರುತ್ತದೆಯಾ? ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದರು.
ಈ ಸಮಯದಲ್ಲಿ ಮದ್ಯ ನುಗ್ಗಿದ ಸಚಿವ ಉಮೇಶ್ ಕತ್ತಿ ವಾಹಿನಿಯ ಕ್ಯಾಮೆರಾಮೆನ್ ಮೇಲೆ ಮುಗಿಬಿದ್ದು ಹೊಡೆಯಲು ಮುಂದಾದರು ಈ ಸಮಯದಲ್ಲಿ ಸಚಿವ ಈಶ್ವರಪ್ಪನವರು ಉಮೇಶ್ ಕತ್ತಿಯನ್ನು ಸಮಾಧಾನಪಡಿಸಿ ವಾಹಿನಿ ಕ್ಯಾಮೆರಾಮೆನ್ ಗೆ ಕ್ಷಮಾಪಣೆ ಕೇಳಿದರು.
ಕನ್ನಡ ವಿರೋಧಿ ನ ಸಚಿವ ಕತ್ತಿ?
ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಪರ ಸಚಿವ ಕತ್ತಿ ನಿಂತಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಏಕೆಂದರೆ ಕನ್ನಡ ಎಂದಾಕ್ಷಣ ಇವರ ಮೈ ಉರಿಯುವುದು ಏಕೆ?
ಹಿಂದೆ ಕರ್ನಾಟಕವನ್ನು ಇಬ್ಭಾಗ ಮಾಡಬೇಕೆಂದು ಪ್ರಬಲವಾಗಿ ಧ್ವನಿಯೆತ್ತಿದ್ದು ಇದೇ ಕತ್ತಿ. ಈಗ ಇದೆ ಎಂಇಎಸ್ ಪುಂಡರು ಮಾಡಿದ ಪುಂಡಾಟಿಕೆ ಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರ ಎನ್ನುವ ಅನುಮಾನ ಮೂಡುತ್ತಿದೆ. ಕರ್ತವ್ಯದಲ್ಲಿರುವ ಮಾಧ್ಯಮದ ಕ್ಯಾಮರಾಮೆನ್ ಮೇಲೆ ಕೈ ಮಾಡಲು ಮುಂದಾಗಿರುವುದು ಎಷ್ಟು ಸರಿ? ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಉಮೇಶ್ ಕತ್ತಿಗೆ ಏನು ಕೆಲಸ? ಮುಖ್ಯಮಂತ್ರಿಗಳೇ ಉತ್ತರಿಸಬೇಕು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305