ಸಿದ್ದರಾಮಯ್ಯ ಎಂಬ ದುರಂಹಕಾರಿ ವ್ಯಕ್ತಿ
ಗೃಹ ಸಚಿವ ಜ್ಞಾನೇಂದ್ರ ಅವರನ್ನು ಉದ್ದೇಶಿಸಿ ಬೆಳಗಾವಿ ಅಧಿವೇಶನದಲ್ಲಿ ಏಕ ವಚನ ಪ್ರಯೋಗಿಸಿ ಮಾತನಾಡಿರುವ ಬಗ್ಗೆ ನಮ್ಮ ಆಕ್ಷೇಪವಿದೆ.
ನಿಮ್ಮಿಂದ ಈ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ:
ಸಿದ್ದರಾಮಯ್ಯನವರೇ ನೀವು ರಾಜ್ಯದ ಸಂಪುಟ ಸದಸ್ಯರಾಗಿ ಉಪ ಮುಖ್ಯಮಂತ್ರಿ ಆಗಿ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ ನಿಮ್ಮಿಂದ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ರಾಜ್ಯದ ಜನತೆ ನಿರೀಕ್ಷೆ ಮಾಡಿರಲಿಲ್ಲ.
ಜ್ಞಾನೇಂದ್ರ ಕೂಡ ನಿಮ್ಮಷ್ಟೇ ಹಿರಿಯರು ನೆನಪಿರಲಿ:
ಸಾತ್ವಿಕ ರಾಜಕಾರಣಿ ಆರಗ ಜ್ಞಾನೇಂದ್ರ ಕೊಡ ರಾಜಕಾರಣದಲ್ಲಿ ನಿಮ್ಮಷ್ಟೇ ಸಮಕಾಲೀನ ಚುನಾವಣಾ ರಾಜಕಾರಣವನ್ನು 1983ರಿಂದ ಆರಂಭಿಸಿದ ಆರಗ ಓರ್ವ ಹೋರಾಟಗಾರ,ನೆಲ,ಜಲ,ಭಾಷೆಯ ಬಗ್ಗೆ ಅವರಿಗೆ ಸಾಕಷ್ಟು ಜ್ಞಾನವಿದೆ
ಇಂತಹ ವ್ಯಕ್ತಿಯನ್ನು ಸದನದಲ್ಲಿ
ಏಕ ವಚನದಲ್ಲಿ ನಿಂದಿಸುವುದು ಎಷ್ಟು ಸರಿ ? ಎಂಬುದು ನಮ್ಮ ಪ್ರಶ್ನೆ ಆಗಿದೆ.
ಓಲೈಕೆ ರಾಜಕಾರಣ ಸಾಕು ಬಿಟ್ಟುಬಿಡಿ ನಿಮ್ಮನ್ನು ಜನ ನಂಬುವುದಿಲ್ಲ:
ಸಿದ್ದರಾಮಯ್ಯ ನವರೇ ನಿಮಗೆ ಏನಾಗಿದೇ ನಿಮ್ಮ ಓಲೈಕೆ ರಾಜಕಾರಣ ಸಾಕು ಮಾಡಿ
ನಿಮ್ಮ ಟಿಪ್ಪು ಜಯಂತಿಯ ಫಲವಾಗಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿದಿರಿ ಸಾಲು ಸಾಲು ರಾಜಕೀಯ ಪ್ರೇರಿತ ಕೊಲೆಗಳಾದ ಪೆಚ್ಚು ಮೊರೆ ಹಾಕಿ ಕಣ್ಣು ಮುಚ್ಚಿ ಕುಳಿತಿದ್ದ ನಿಮಗೆ ಈಗ ಓರ್ವ ಸಮರ್ಥ ಗೃಹ ಸಚಿವರಾದ ಜ್ಞಾನೇಂದ್ರ ಅವರ ಕುರಿತು ಸಣ್ಣ ಮಟ್ಟದ ಹೇಳಿಕೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.
ಜ್ಞಾನೇಂದ್ರ ಅವರಿಗೆ ಮಾಡಿದ ಅವಮಾನವಲ್ಲ ಇಡಿ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ:
ಇದು ಜ್ಞಾನೇಂದ್ರ ಅವರಿಗೆ ಮಾಡಿದ ಅಪಮಾನವಲ್ಲ ಇದು ಅವರ ಹುದ್ದೆಗೆ ಹಾಗೂ ಇಡೀ ಒಕ್ಕಲಿಗ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಅಪಮಾನ
ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಚ್ಚರ
ವಿರೋಧ ಪಕ್ಷದ ನಾಯಕರಾದ ನೀವು ಏನು ಮಾತನಾಡಿದರು ಅದನ್ನು ಒಪ್ಪಬೇಕಾ ಹೇಳಿ
5 ವರ್ಷ ವಿಫಲ ಆಡಳಿತ ನೀಡಿದ ಪರಿಣಾಮವಾಗಿಯೇ ನಿಮ್ಮನ್ನು
ನಿಮ್ಮ ತವರು ಕ್ಷೇತ್ರ ಚಾಮುಂಡೇಶ್ವರಿಯ ಜನತೆ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಅಲ್ಲದೆ ಬಾದಾಮಿ ಜನತೆ ಕೊಡ ನಿಮ್ಮ ಮೇಲೆ ಅಸಮಾಧಾನ ಹೊಂದಿರುವ ಸಂಗತಿ ರಹಸ್ಯವಾಗಿ ಉಳಿದಿಲ್ಲ,
ತಾಕತ್ತಿದ್ದರೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ಗೆಲ್ಲಿ ನೋಡೋಣ:
ಹೀಗಾಗಿ ನೀವು ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಂದು ಜ್ಞಾನೇಂದ್ರ ಅವರ ವಿರುದ್ಧ ಸ್ಪರ್ಧೆ ಮಾಡುವ ಧೈರ್ಯ ನಿಮಗಿದೆಯೇ ?
ಮತಾಂತರ ನಿಷೇಧ ಕಾಯ್ದೆ ನಿಮಗೆ ಏಕೆ ಸಹಿಸಲಾಗುತ್ತಿಲ್ಲ ಹೇಳಿ
ಅದರಲ್ಲಿರುವ ಸರಿ ತಪ್ಪು ಯಾವುದು ಅಗತ್ಯ ಅನಗತ್ಯ ಎಂಬುದನ್ನು ಚರ್ಚಿಸಿ ಅದು ಬಿಟ್ಟು ನಿಮ್ಮ ಪಕ್ಷದ ಅಧ್ಯಕ್ಷರು ನೋಡಿದ್ರೆ ಮತಾಂತರ ನಿಷೇಧ ಕಾಯಿದೆಯ ಬಿಲ್ ಹರಿದು ಹಾಕುತ್ತಾರೆ ಎಷ್ಟೇ ಆದ್ರೂ ಆವ್ರು ತಿಹಾರ್ ಜೈಲಿನ ಯಾತ್ರೆ ಮುಗಿಸಿ ಬಂದಿದ್ದಾರೆ ನೀವು ಹೇಳಿದ್ದೆ ಸರಿ ಎಂಬುವ ಹಾಗೆ ಅಧಿವೇಶನದಲ್ಲಿ ಮಾತನಾಡುತ್ತಿರಿ ಹೀಗಾಗಿ ನಿಮ್ಮ ನಾಯಕರೆಲ್ಲರು ಹೀಗೆ ಬುದ್ದಿ ಮಾಂದ್ಯರಂತೆ ವರ್ತಿಸುವ ರೀತಿ ನೋಡಿದರೆ ನಗು ಬರುತ್ತಿದೆ
ಅಲ್ಲದೆ ಈಗ ನಗೆ ಪಾಟಲಿಗೆ ಈಡಾಗಿರುವುದು ಜ್ಞಾನೇಂದ್ರ ಅವರಲ್ಲ ನೀವು ವಿಪಕ್ಷ ನಾಯಕರೇ ಮೊದಲಿಗೆ ಸುರಕ್ಷಿತವಾಗಿ ಇರುವ ಒಂದು ಕ್ಷೇತ್ರ ಹುಡುಕಿಕೊಳ್ಳಿ
ಅಂತೆಯೇ ಈ ನಿಮ್ಮ ವರ್ತನೆಗಳು ತೀರ ಕೀಳು ಮಟ್ಟಕೆ ಇಳಿಯಲು ಕಾರಣಗಳೇನು?
ಮೊದಲು ನಿಮ್ಮಲ್ಲಿರುವ ಒಡಕುಗಳನ್ನು ಸರಿ ಮಾಡಿಕೊಳ್ಳಿ:
ಅಲ್ಪ ಸಂಖ್ಯಾತ ಮತಗಳ ಮೇಲಿನ ನಿಮ್ಮ ವೋಟ್ ಬ್ಯಾಂಕ್ ತಪ್ಪಿ ಹೋಗುವ ಭೀತಿ ನಿಮಾಗಿರಬಹುದು
ಅಥವಾ ನಿಮ್ಮ ಕೈ ಪಕ್ಷದ ಅದಿ ನಾಯಕಿಯನ್ನು ಮೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಹುದ್ದೆಗೆ ನಿಮ್ಮ ನ್ನು ಪರಿಗಣಿಸಲು ಈ ರೀತಿಯ ತುಚ್ಛ ನಡವಳಿಕೆ ತೋರುತ್ತಿರುವಿರಿ
ಆದರೆ ಒಂದು ಮರೆಯದಿರಿ ಬಂಡೆ ಖ್ಯಾತಿಯ DK ಶಿವ ಕುಮಾರ್ ಅವರು ನಿಮ್ಮ ಎದುರಾಳಿ ಹಾಗಾಗಿ ನಿಮಗೆ ಸರಿಯಾಗಿ ಸಭೆಗಳಿಗೆ ಆಹ್ವಾನ ನೀಡದೆ ನಿಮ್ಮನ್ನು ಮುಖ್ಯ ವಾಹಿನಿಯಿಂದ ದೂರ ಇಟ್ಟಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ.
ವೀರಶೈವ ಲಿಂಗಾಯತರನ್ನು ಪ್ರತ್ಯೇಕ ಮಾಡಲು ಹೋಗಿ ಕೈಸುಟ್ಟುಕೊಂಡು,ರಾಜಕೀಯವಾಗಿ ಬೆಳೆಸಿದ ಗುರುಗಳ ಮೇಲೆ ಆರೋಪ ವರಿಸಿದವರು ನೀವು:
ಅಲ್ಲದೆ ನಿಮ್ಮ ಆಡಳಿತ ಅವಧಿಯಲ್ಲಿ ವೀರ ಶೈವ ಲಿಂಗಾಯತರನ್ನು ಪ್ರತ್ಯೇಕ ಮಾಡುವ ಸಲುವಾಗಿ ಹೊಸ ಧರ್ಮದ ನೇತೃತ್ವ ವಹಿಸಲು MB ಪಾಟೀಲರನ್ನು ಮುಂದಿಟ್ಟು ರಾಜಕೀಯ ಮಾಡಿದಿರಿ
ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ ಮುತ್ಸದಿ ರಾಜಕಾರಣಿ ಮಾಜಿ ಪ್ರಧಾನಿ ದೇವೇಗೌಡರನ್ನು ಸಹ ಏಕ ವಚನ ಬಳಸುವಷ್ಟು ದೊಡ್ಡವರೇ ನೀವು ?ವಿದ್ಯೆ ಕಲಿಸಿದ ಗುರುವಿಗೆ ಬೆನ್ನು ತಟ್ಟಿದ, ಅವರೆದುರೆ ದಾರ್ಷ್ಟ್ಯ ಪ್ರದರ್ಶಿಸಿದ ಸಂಸ್ಕಾರ ಅಲ್ಲವೇ
ಇದು ನಿಮ್ಮ ಟಾರ್ಗೆಟ್ ಒಕ್ಕಲಿಗ ನಾಯಕರು ಮಾತ್ರ ಒಮ್ಮೆ ಹೇಳಿ?
ವಿಪಕ್ಷ ನಾಯಕರಾಗಿ ನಿಮ್ಮ ಘನತೆ ಕಾಪಾಡಿಕೊಳ್ಳಿ:
ವಿಪಕ್ಷ ನಾಯಕರಾಗಿ ಸದನದಲ್ಲಿ ಆಡಳಿತ ಪಕ್ಷಕ್ಕೆ ಸಲಹೆ ಕೊಡಿ ಸರಿಯಾದ ಮಾರ್ಗದರ್ಶನ ನೀಡಿ ಅದು ಬಿಟ್ಟು ನಿಮ್ಮ ಉದ್ಧಟತನ ಪ್ರದರ್ಶಿಸದಿರಿ
ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಹೊರದಬ್ಬುವ ಮುನ್ನ ಮತ್ತೊಂದು ಕ್ಷೇತ್ರ ಹುಡುಕಿಕೊಳ್ಳಿ
ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಮೊಟ್ಟೆ ಬಾಗ್ಯ ತಂದಿರಿ ಅದೇನೋ ಸರಿ ಆದರೆ ಅಲ್ಲೂ ನಿಮ್ಮ ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸಿದ ನೀವು ಅಂಗನವಾಡಿ ಮಕ್ಕಳ ನಡುವೆ ಜಾತಿ ಹುಡುಕಿ ನಿಮ್ಮ ಜಾತೀಯತೆಯನ್ನು ತೋರಿಸಿಬಿಟ್ಟಿರಿ
ಜಾತಿ ಜಾತಿ ಎನ್ನುವ ನೀವು ಜಾತಿಯ ವಿಷ ಬೀಜವನ್ನು ಬಿತ್ತಿ ನಿಮ್ಮದೇ ಪಕ್ಷದ ಪರಮೇಶ್ವರ್ ಅವರನ್ನು ಸೋಲಿಸಿದ್ದರಿ:
ಅಲ್ಲದೆ ಮುಸ್ಲಿಂ ಮತ ಬ್ಯಾಂಕ್ ಹಿಡಿದಿಟ್ಟುಕೊಳ್ಳಲು ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡಲು ಶಾದಿ ಭಾಗ್ಯ ಯೋಜನೆ ತಂದಿರಿ ಅದೇಕೆ ಅಲ್ಲಿ ಬೇರೆ ಧರ್ಮದ ಜಾತಿಯ ಹೆಣ್ಣು ಮಕ್ಕಳಿಗೆ ನಿಮ್ಮ ಸರ್ಕಾರದ ಈ ಯೋಜನೆ ಮುಂದುವರೆಸಲಿಲ್ಲ ಅಲ್ಲಿ ನಿಮಗೆ ಸಮಾನತೆ ಸೌಹಾರ್ದತೆ ಕಾಣಲಿಲ್ಲವೇ ಅಧಿಕಾರದ ವ್ಯಮೋಹಕ್ಕೆ ಸಿಲುಕಿ ಪಕ್ಷ ಬದಲಿಸಿ ಮೊಲ ಕೈ ನಾಯಕರನ್ನು ತುಳಿದು ದಲಿತ ನಾಯಕ ಪರಮೇಶ್ವರ್ ಅವರನ್ನು ಸೋಲಿಸಿದ ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಹೇಳಿ,
ನಾಡಿನ ಜನತೆ ಪೂಜಿಸಿ ಆರಾಧಿಸುವ ಧರ್ಮಸ್ಥಳಕ್ಕೆ ಅವಮಾನ ಮಾಡಿದ್ದೀರಿ:
ನಾಡಿನ ಜನತೆ ಆರಾಧಿಸುವ ಧರ್ಮಸ್ಥಳ ಶ್ರೀ ಮಂಜುನಾಥನ ಕ್ಷೇತ್ರಕ್ಕೆ ಮೀನು ಮಾಂಸ ತಿಂದು ಪೂಜೆ ಸಲ್ಲಿಸಿ ಬಂದ ನೀವೊಬ್ಬ ಧರ್ಮ ದ್ರೋಹಿ ಅಧರ್ಮಿ ಹಿಂದೂ ವಿರೋಧಿ
ಈ ಕಾರಣಕ್ಕೆ ನಿಮ್ಮ ಸ್ವ ಕ್ಷೇತ್ರದ ಚಾಮುಂಡೇಶ್ವರಿ ಜನತೆ 36000 ಮತಗಳ ಮೂಲಕ ಸೋಲಿಸಿ ಕಳಿಸಿದ್ರು
ಅಂದಹಾಗೆ ಸಮಾಜವಾದಿಗಳ ತವರು ತೀರ್ಥಹಳ್ಳಿಯಲ್ಲಿ ಜ್ಞಾನೇಂದ್ರ ಅವರು 22000 ಮತಗಳ ಬೃಹತ್ ಜಯ ಸಾಧಿಸಿದ್ದಾರೆ.
ಇದು ನಿಮ್ಮ ಗಮನದಲ್ಲಿರಲಿ
ಮತ್ತೊಂದು ಮಾತು
ನಿಮ್ಮಂತಹ ಧೂರ್ತ ರಾಜಕಾರಣಿ ಈ ನಾಗರಿಕ ಸಮಾಜದಲ್ಲಿ ಮತ್ತೊಬ್ಬರಿಲ್ಲ
ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ನಿಮ್ಮ ಮನಸ್ಥಿತಿಗೆ ನಮ್ಮ ಧಿಕ್ಕಾರ.
ಎಲ್ಲ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಪರವಾಗಿ,
ರಕ್ಷಿತ್ ಮೇಗರವಳ್ಳಿ
ಉಪಾಧ್ಯಕ್ಷರು.
ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..