
ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಸಮೀಪದ ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತವಾಗಿ ತಮ್ಮ ಬಿಡುವಿಲ್ಲದ ಕೆಲಸದ ನಡುವಿನಲ್ಲಿಯೂ ತೀರ್ಥಹಳ್ಳಿ ಡಿವೈಎಸ್ಪಿ ಶಾಂತ್ ವೀರ್ ಭೇಟಿ ಮಾಡಿ ಶಾಲಾ ಮಕ್ಕಳೊಂದಿಗೆ ಭಾಗಿಯಾದರು.
ಈ ಸಮಯದಲ್ಲಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು…
ಹಾಗೆಯೇ ಮಕ್ಕಳೊಂದಿಗೆ ಮುಂದಿನ ಜೀವನದ ಗುರಿಯ ಬಗ್ಗೆ ಸಂವಾದ ನಡೆಸಿದರು.
ಮಕ್ಕಳಿಗೆ ತರಗತಿ ತೆಗೆದುಕೊಂಡ ಡಿವೈಎಸ್ಪಿ:
ಮಕ್ಕಳಿಗೆ ತರಗತಿ ತೆಗೆದುಕೊಂಡು ಪ್ರಸ್ತುತ ಕಲಿಕೆಯ ಬಗ್ಗೆ ಮಾಹಿತಿ ತಿಳಿಸಿದರು.
ಡಿವೈಎಸ್ಪಿ ಗೆ ಸಾಥ್ ನೀಡಿದ ಆಗುಂಬೆ ಪಿಎಸ್ಐ:
ಇವರೊಂದಿಗೆ ಆಗುಂಬೆ ಠಾಣಾ PSI ಶಿವಕುಮಾರ್ ಇವರು ಭಾಗವಹಿಸಿ ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳ ಬಗೆಗೆ ತಿಳಿಸಿ ಜೊತೆಗೆ IAS,IPS,KES,PSI ಹುದ್ದೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಉತ್ತಮ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರಾ ಹಾಗೂ ಜವಾಬ್ಧಾರಿ ಬಗ್ಗೆ ಪ್ರೇರಣೆ ನೀಡಿದರು .
ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಸವಿದ ಡಿವೈಎಸ್ಪಿ:
ಮಕ್ಕಳೊಂದಿಗೆ ಒಟ್ಟಿಗೆ ಕುಳಿತು ಮಧ್ಯಾಹ್ನ ಬಿಸಿಯೂಟ ಸವಿದು ಗ್ರಾಮೀಣ ಪ್ರದೇಶದಲ್ಲಿ ನಮ್ಮ ಶಾಲಾ ಕಲಿಕೆ ವಾತಾವರಣ ನೋಡಿ ಸರ್ಕಾರಿ ಶಾಲೆಯ ಮಾದರಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ನೀಡಿ ಪತಿನಿತ್ಯ ಶಾಲೆಯಲ್ಲಿ ಈ ಚಟುವಟಿಕೆ ನಡೆಸಲು ತಿಳಿಸಿ ಮಕ್ಕಳಿಗೆ ಸಿಹಿ ಹಂಚಿ ಶುಭ ಹಾರೈಸಿದರು.
ಗೃಹಸಚಿವರ ತವರೂರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಈ ಮಾದರಿ ನಡೆಯನ್ನು ಗ್ರಾಮಸ್ಥರು ಶ್ಲಾಘಿಸಿದರು. ಈ ಸಮಯದಲ್ಲಿ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪೊಲೀಸ್ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…