
ಇತ್ತೀಚೆಗೆ ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ.
ರಾತ್ರಿ ಜಾನುವಾರುಗಳು ಮನೆಗೆ ಬರದೆ ರೈಲ್ವೆ ಹಳಿಗಳ ಮೇಲೆ ಬಿದ್ದು ಸತ್ತು ಹೋಗುತ್ತಿದ್ದು. ಇವುಗಳನ್ನು ರಕ್ಷಣೆ ಮಾಡುವಲ್ಲಿ ಜಾನುವಾರುಗಳ ಮಾಲೀಕರು ವಿಫಲರಾಗಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವಂತೆ ಮಾಲೀಕರಲ್ಲಿ ಮನವಿ ಮಾಡಿದ್ದಾರೆ.

ಈ ದಿನ ಒಟ್ಟು 05 ಎಮ್ಮೆಗಳು ಸತ್ತಿರುವುದು ದುರದೃಷ್ಟಕರ ವಿಷಯ

ತಾಳಗುಪ್ಪ ದಿಂದ ಶಿವಮೊಗ್ಗಕ್ಕೆ ಸಂಚರಿಸುತ್ತಿರುವ ರೈಲಿಗೆ ಪ್ರತಿದಿನ ರೈಲ್ವೆ ಹಳಿಯ ಮೇಲೆ ಅಲ್ಲೊಂದು ಇಲ್ಲೊಂದು ಜಾನವಾರುಗಳು ರೈಲಿಗೆ ಸಿಕ್ಕಿ ಜೀವ ಕಳೆದುಕೊಳ್ಳುತ್ತಿದ್ದೂ, ಜಾನವಾರುಗಳ ಸಂರಕ್ಷಣೆಯತ್ತ ರೈಲ್ವೆ ಹಳಿಯಿಂದ ಕನಿಷ್ಠ ಅಂತರ ಕಾಯ್ದುಕೊಳ್ಳುವಂತೆ ಜಾನವಾರು ಮಾಲೀಕರು, ಸ್ಥಳೀಯ ಸಂಸ್ಥೆಗಳು, ಗೋ ಪ್ರೇಮಿಗಳು ಜಾಗೃತಿ ಮೂಡಿಸುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಓಂಕಾರ್ ಎಸ್ ವಿ ತಾಳಗುಪ್ಪ…
ಸುದ್ದಿ ಮತ್ತು ಜಾಹಿರಾತು ನೀಡಲು ಸಂಪರ್ಕಿಸಿ:9449553305…