
ಸಾಗರ :ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿ ರಚನೆಯಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಸಂವಿಧಾನ ದತ್ತ ಅಧಿಕಾರವನ್ನು ಬಳಸಲು ಶಾಶಕರಾದ ಹರತಾಳು ಹಾಲಪ್ಪನವರು ತಮ್ಮ ಪ್ರಭಾವ ಬಳಸಿ ಹಸ್ತಕ್ಷೇಪ ನಡೆಸುತ್ತಾ ಇರುವುದರಿಂದ ನನಗೆ ನೋವಾಗಿದೆ ಎಂದು ತುಮರಿ ಗ್ರಾ ಪಂ ಅಧ್ಯಕ್ಷೆ ಲಲಿತಾ ದೇವೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮಿತಿ ರಚಿಸುವುದು ಪಂಚಾಯಿತಿ ಅಧ್ಯಕ್ಷರ ಅಧಿಕಾರವಾಗಿದ್ದು ನಿಯಮ 60 ರ ಅಡಿಯಲ್ಲಿ ಪಂಚಾಯಿತ ರಾಜ್ ಖಾಯಿದೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಸಾಮಾನ್ಯ ಸಭೆ ಅಂಗೀಕಾರ ಮಾಡಿದ ನೂತನ ಸಮಿತಿಯು ಸಭೆ ನಡೆಸದ ಹಾಗೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ಸಮಿತಿ ಕಾರ್ಯದರ್ಶಿ ವೈದ್ಯರ ಮೇಲೆ ಒತ್ತಡ ಹಾಕುತ್ತಾ ಇರುವುದು ಗಮನಕ್ಕೆ ಬಂದಿದ್ದು ಶಾಸಕರು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಆರೋಗ್ಯ ರಕ್ಷಾ ಸಮಿತಿಗೆ ಶಾಶಕರು ನಾಮ ನಿರ್ದೇಶನ ಮಾಡಿ ಜಾರಿಗೆ ಬರುವಂತೆ ಇಲಾಖೆಗೆ ಪತ್ರ ಬರೆದಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೊರತಾಗಿ ಯಾವ ಸದಸ್ಯರಿಗೂ ಅವಕಾಶ ನೀಡಿಲ್ಲ. ಈ ಮೂಲಕ ಆಡಳಿತ ಹಸ್ತಕ್ಷೇಪಕ್ಕೆ ಮುಂದಾಗಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಬಡತನ ಕುಟುಂಬದಿಂದ ಬಂದು ಮೀಸಲಾತಿ ಅವಕಾಸದಿಂದ ಅಧಿಕಾರ ಪಡೆದು ಅಧ್ಯಕ್ಷರಾಗಿರುವ ಪಂಚಾಯಿತಿ ಮೊದಲ ದಲಿತ ಮಹಿಳೆಗೆ ಮಾರ್ಗದರ್ಶನ ನೀಡಬೇಕಾದ ಶಾಸಕರಿಂದ ಈ ನಡೆ ನಿರೀಕ್ಷೆ ಮಾಡಿರಲಿಲ್ಲ ಇನ್ನಾದರೂ ಅವರು ಆಡಳಿತ ಹಸ್ತಕ್ಷೇಪ ಮಾಡುವುದನ್ನ ನಿಲ್ಲಿಸಿ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಲಲಿತಾ ದೇವೇಂದ್ರ ಅವರು ಕೋರಿದ್ದಾರೆ.

ಪತ್ರಿಕಾ ಹೇಳಿಕೆ ಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀದೇವಿ ರಾಮಚಂದ್ರ, ಸದಸ್ಯರಾದ ಶ್ರೀಧರ ಮೂರ್ತಿ, ನಾಗರಾಜ್, ಶೇಕರನಾಯ್ಕ, ಪ್ರೇಮ ಸಂತೋಷ, ರತ್ನಮ್ಮ ಚೌಡಪ್ಪ, ರಾಧಾ ರಘುಪತಿ ಸಹಿಯೊಂದಿಗೆ ಅಧ್ಯಕ್ಷರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305