ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಖಜಾನಾಧಿಕಾರಿಗಳಿಗೆ ಮನವಿ..!

ತಿರ್ಥಹಳ್ಳಿ: ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ತೀರ್ಥಹಳ್ಳಿ ವತಿಯಿಂದ ತಾಲ್ಲೂಕು ಉಪ ಖಜಾನಾಧಿಕಾರಿಗಳನ್ನು ಸೌಹಾರ್ಧಯುತ ಭೇಟಿ ಮಾಡಿ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಖಜಾನಾಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ 2022 ರ ಸಾಲಿನ ಸದಸ್ಯತ್ವ ಶುಲ್ಕವನ್ನು ವಿವಿಧ ಇಲಾಖೆಗಳ ರಾಜ್ಯ ಸರ್ಕಾರಿ ನೌಕರರಿಂದ ಕಟಾವಣೆಗೊಳಿಸಿ ರಾಜ್ಯ ಸಂಘದ ಖಾತೆಗೆ ಜಮಾ ಮಾಡುವ ಬಗ್ಗೆ ಸಹಕಾರ ಕೋರಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿದ ಖಜಾನಾಧಿಕಾರಿ ಎಲ್ ಎಸ್ ಗಿರಿರಾಜ್ , ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಗಳ ಬಗ್ಗೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಆಧ್ಯಕ್ಷ ಟಿ ವಿ ಸತೀಶ, ಕಾರ್ಯದರ್ಶಿ ರಾಮು ಬಿ, ಉಪಾಧ್ಯಕ್ಷರಾದ ಸುಷ್ಮ ಎಸ್ ಪಿ, ರಾಘವೇಂದ್ರ ಎಸ್, ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಕುಮಾರ್ ಮತ್ತಿತರರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305