
ತೀರ್ಥಹಳ್ಳಿ: 15 ದಿನಗಳ ಹಿಂದೆ ನಣಬೂರ ಗ್ರಾಮದ ಕಬ್ಬಿನ ಮಕ್ಕಿಯಲ್ಲಿ ಜಮೀನು ದಾರಿ ವಿವಾದದಲ್ಲಿ ಹಲ್ಲೆಗೊಳಗಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲೇಸರದ ಮುರುಳಿದರ ಮನೆಗೆ ಇಂದು ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರರವರು ಬೇಟಿ ನೀಡಿ ಪೋಷಕರಿಗೆ ಧೈರ್ಯ ಹೇಳಿದರು.
ಆರೋಪಿಗಳು ಯಾರೇ ಆಗಿರಲಿ ಅವರಿಗೆ ರಕ್ಷಣೆ ಇಲ್ಲ:
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳು ಯಾರೇ ಆಗಿರಲಿ ಅವರಿಗೆ ರಕ್ಷಣೆ ಇಲ್ಲ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು. ಇದರಲ್ಲಿ ಯಾವುದೇ ತರಹದ ರಾಜಕೀಯ ಇಲ್ಲ ಎಂದು ಮನೆಯವರಿಗೆ ಧೈರ್ಯ ಹೇಳುವುದರ ಮೂಲಕ ವಿರೋಧಪಕ್ಷದವರು ಹೇಳುತ್ತಿದ್ದ ಆಪಾದನೆಗೆ ಉತ್ತರ ನೀಡಿದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305