


ತೀರ್ಥಹಳ್ಳಿ: ಪ್ರತಿ ತಿಂಗಳ ಕೊನೆಯ ಭಾನುವಾರದಂದು ತೀರ್ಥಹಳ್ಳಿ ಪಟ್ಟಣ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮ ನಡೆಸಿ ಮಾದರಿಯಾಗುತ್ತಿದ್ದಾರೆ.
ಇಂದು ಜನವರಿ 23 ರ ಭಾನುವಾರ ಬೆಳಿಗ್ಗೆ ತೀರ್ಥಹಳ್ಳಿ ಕುವೆಂಪು ವೃತ್ತದ ಸಮೀಪದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಆವರಣ ಸ್ವಚ್ಛತೆ ನಡೆಯಿತು.
ಸಮಾಜಕ್ಕೆ ಮಾದರಿಯಾಗಿ ನಿಲ್ಲುವ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಆವರಣದಲ್ಲಿ ಕುಡಿದು ಎಸೆದ ಮದ್ಯದ ಬಾಟಲಿಗಳು ಹಾಗೂ ಇನ್ನಿತರ ಕಸಗಳು ತುಂಬಿತುಳುಕುತ್ತಿತ್ತು. ಶಾಲೆಗಳನ್ನು ದೇಗುಲಗಳೆಂದು ಕೈಮುಗಿದು ಒಳಹೋಗುತ್ತಿದ್ದ ಕಾಲವೊಂದಿತ್ತು, ಆದರೆ ಈಗ ಶಾಲಾ ಆವರಣಗಳು ಶಿಕ್ಷಣ ಇಲಾಖೆಯ ಕಛೇರಿಯ ಆವರಣಗಳು ಕೊಳಚೆ ಪ್ರದೇಶಗಳಂತಾಗಿವೆ. ಇದಕ್ಕೆ ಕಾರಣ ಕಛೇರಿಯ ಸಮಯದ ನಂತರ ಕಟ್ಟಡಗಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು.
ಕಛೇರಿ ಬಾಗಿಲು ಹಾಕಿದ ನಂತರ ಕಂಪೌಂಡ್ ಒಳಬಂದು ಪಾರ್ಟಿ ಮಾಡಿ ಕುಡಿದು ಗಲೀಜು ಮಾಡಿಹೋಗುತ್ತಿರುವ ಕೆಲ ಕಿಡಿಗೇಡಿಗಳಿಂದಾಗಿ ಇಂತಹ ಅಪಸವ್ಯಗಳು ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದಿದ್ದರೆ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ಬಂದೀತು.
ಬಿಜೆಪಿ ಯುವಮೋರ್ಚಾ ಪಟ್ಟಣ ಘಟಕದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣ ಸ್ವಚ್ಛ ಮಾಡುವ ಉತ್ತಮ ನಿರ್ಧಾರ ತೆಗೆದುಕೊಂಡಿದ್ದು ಇಂದಿನ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸ್ವಚ್ಛತಾ ಕಾರ್ಯಕ್ರಮದ ಜತೆಗೆ ಸಮಾಜದಲ್ಲಿ ಜವಾಬ್ದಾರಿ ಹೊಂದಿದ ವ್ಯಕ್ತಿಗಳು ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದರೆ ಸುಂದರಗೊಳಿಸಿದ ಸ್ಥಳಗಳ ನೈರ್ಮಲ್ಯವನ್ನು ಕಾಪಾಡಿಕೊಂಡು ಹೋಗಬಹುದು.
ಇಂದಿನ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಟ್ಟಣ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಭಿಯಾನಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ರಕ್ಷಿತ್ ಮೇಗರವಳ್ಳಿ, ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಅವ್ಯವಸ್ಥೆಯನ್ನು ನೋಡಿ ತೀವ್ರವಾಗಿ ಖಂಡಿಸಿ ಬೇಸರ ವ್ಯಕ್ತಪಡಿಸಿದರು.
ಮಾದರಿಯಾಗಿ ಇರಬೇಕಾದ ಶಿಕ್ಷಣ ಸಂಸ್ಥೆಯು , ಅಧಿಕಾರಿಗಳು ಗಮನ ಹರಿಸದೇ ಇರುವುದು ಈ ರೀತಿಯ ಸ್ಥಿತಿಗೆ ಮುಖ್ಯ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ಕೆಲ ಪುಂಡರು, ಯುವಕರುಗಳಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ, ಎಲ್ಲೆಂದರಲ್ಲಿ ಕುಡಿದ ಬಾಟಲಿಗಳನ್ನು ಎಸೆದು, ಪಾನಮತ್ತರಾಗಿ ಕೆಟ್ಟ ಘಟನೆಗಳು ಜರುಗುವ ಸಾಧ್ಯತೆ ಇದೆ, ಅದಕ್ಕೂ ಮುನ್ನವೇ ಪೊಲೀಸ್ ಇಲಾಖೆಯು ಈ ಬಗ್ಗೆ ಗಮನಹರಿಸಬೇಕಿದೆ ಹಾಗೂ ನೂರಾರು ಜನರು ಓಡಾಡುವ ಜಾಗದಲ್ಲಿ ಇನ್ನೂ ಮುಂದಾದರೂ ಅಧಿಕಾರಿಗಳು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಸ್ವಚ್ಛತೆ, ಸುರಕ್ಷತೆ ಹಾಗೂ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಅಭಿಯಾನದಲ್ಲಿ
ಪಟ್ಟಣ ಘಟಕದ
ಪ್ರ. ಕಾ. ಪವನ್ ಗವಾಸ್ಕರ್, ಯುವ ಮುಖಂಡರಾದ ಪ್ರಮೋದ್ ಪೂಜಾರಿ,ಪೂರ್ಣೇಶ್ ಪೂಜಾರಿ, ಗಣೇಶ್ ಕಾಮತ್, ಭರತ್ ಬಾಳೆಬೈಲು, ಅಭಿ , ನವೀನ್ ಛತ್ರಕೇರಿ, ಸಂದೇಶ್, ಅಭಿಷೇಕ್ ಹೈಸ್ಕೂಲ್ ರಸ್ತೆ, ಅಭಿಷೇಕ್ ಕೆಸಿ ರಸ್ತೆ, ಮಹೇಂದ್ರ ಕುರುವಳ್ಳಿ, ನವೀನ್ ಯುವ ಬ್ರಿಗೇಡ್, ಯುವ ಮೋರ್ಚಾ ಮಹಿಳಾ ಪ್ರಮುಖ್ ಪೂರ್ಣ ದೀಕ್ಷಿತ್
ಇನ್ನಿತರ ಮುಖಂಡರು ಕಾರ್ಯಕರ್ತರು ಹಾಜರಿದ್ದು, ಶ್ರಮಿಸಿದರು. ಪಟ್ಟಣ ಯುವ ಮೋರ್ಚಾದ ಈ ಸತ್ಕಾರ್ಯಕ್ಕೆ ಸ್ಥಳೀಯರು ಪ್ರಶಂಸಿದರು.

ಬಿಜೆಪಿ ಸೋಶಿಯಲ್ ಮೀಡಿಯಾ ತೀರ್ಥಹಳ್ಳಿ….
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305