
ಶಿವಮೊಗ್ಗ: ಉಡುಪಿಯಲ್ಲಿ ಶುರುವಾದ ಹಿಜಾಬ್ ಕೇಸರಿ ಸಂಘರ್ಷ ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹಬ್ಬಿದೆ ಅದು ಈಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದ್ದು. ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಹಾಗೂ ದಶಕಗಳ ಇತಿಹಾಸವಿರುವ ಸಹ್ಯಾದ್ರಿ ಕಾಲೇಜಿನಲ್ಲಿ ಇಂದು ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಆರಂಭವಾಗಿದ್ದು. ಅದು ಯಾವ ಮಟ್ಟ ತಲುಪುತ್ತದೆ ಎಂಬುದನ್ನು ಕಾದು ನಡಬೇಕು.
ಕಾಲೇಜ್ ಎದುರುಗಡೆ ವಿದ್ಯಾರ್ಥಿಗಳ ಧರಣಿ:
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಖಾ ತೆಗೆದಿರಿಸಿ ತರಗತಿಗೆ ಪ್ರವೇಶಿಸಬೇಕು. ಇಲ್ಲವೇ ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಲು ನಮಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿ ಪದವಿ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಅತ್ತ ವಿದ್ಯಾರ್ಥಿನಿಯ ಪಾಲಕರೊಬ್ಬರು ಕಾಲೇಜಿಗೆ ಬಂದು ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೂ ಪರವಾಗಿಲ್ಲ. ಕರೊನಾದಿಂದ ಈಗಾಗಲೇ ಎರಡು ವರ್ಷ ನಷ್ಟವಾಗಿದೆ. ಹೀಗಾಗಿ ನನ್ನ ಮಗಳು ಹಿಜಾಬ್ ತೆಗೆದಿರಿಸಿ ಕಾಲೇಜಿಗೆ ಹಾಜರಾಗುತ್ತಾಳೆ ಎಂದು ಹೇಳಿದರು. ಇನ್ನೊಂದೆಡೆ ಕೆಲವು ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡದೇ ಇದ್ದರೆ ನಾವು ತರಗತಿಗೆ ಬರುವುದಿಲ್ಲ ಎಂದು ಕಾಲೇಜಿನಿಂದ ಹೊರ ನಡೆದರು.
ಸಮವಸ್ತ್ರ ಪಾಲನೆ ಆಗಬೇಕು:
ಕರೊನಾ ಹಾಗೂ ಆರ್ಥಿಕ ಸಮಸ್ಯೆಯ ನೆಪವೊಡ್ಡಿ ಅನೇಕ ವಿದ್ಯಾರ್ಥಿನಿಯರು ಸಮವಸ್ತ್ರ ಪಡೆದುಕೊಂಡಿರಲಿಲ್ಲ. ಈಗ ಎಲ್ಲರಿಗೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಪ್ರವೇಶಿಸಬೇಕು ಎಂದು ಪ್ರಾಚಾರ್ಯೆ ಪ್ರೊ.ವೀಣಾ ತಿಳಿಸಿದರು.
ವಿದ್ಯಾರ್ಥಿಗಳ ಮನವೊಲಿಸಲು ಹರಸಾಹಸ ಪಡುತ್ತಿರುವ ಕಾಲೇಜಿನ ಪ್ರಾಂಶುಪಾಲರು ಹಾಗೂ ಪೊಲೀಸರು:
ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ತೆಗೆದಿರಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿ ಅವುಗಳನ್ನು ತೆಗೆದಿರಿಸಿ ತರಗತಿಯೊಳಕ್ಕೆ ಬರಬೇಕು. ಇಷ್ಟರ ನಡುವೆ ನಮಗೆ ಕುವೆಂಪು ವಿವಿಯಿಂದ ಹಿಜಾಬ್ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಡುವೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮನವೊಲಿಕೆಯಲ್ಲಿ ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರು ನಿರತರಾಗಿದ್ದು.
ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು:
ಈಗಾಗಲೇ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು ಕೂಡಲೇ ನ್ಯಾಯಾಲಯ ಈ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಮಾಡಬೇಕು.ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಕರ್ನಾಟಕದಾದ್ಯಂತ ಹರಡಿರುವ ವಿವಾದಕ್ಕೆ ಅಂತ್ಯ ಹಾಡಬೇಕು.
ಈಗಾಗಲೇ ಕೊರೊನಾದಿಂದ ಎರಡು ವರ್ಷಗಳ ಪಾಠಪ್ರವಚನಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಮತ್ತೆ ಈ ವಿವಾದದಿಂದ ತೊಂದರೆಯಾಗಬಾರದು.
ಶಾಲಾ-ಕಾಲೇಜುಗಳು ಎಂದಿನಂತೆ ಯಾವುದೇ ವಿವಾದಗಳು ಇಲ್ಲದೆ ನಡೆಯಬೇಕು. ಶಾಲಾ ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಒಂದೇ ಇಲ್ಲಿ ಯಾವುದೇ ಜಾತಿ ಸಮುದಾಯದ ಭೇದ ಭಾವನೆಗಳು ಇಲ್ಲ ಒಬ್ಬ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಾಗ ಯಾವ ಜಾತಿ ಎಂದು ಕೇಳಿ ಪಾಠ ಮಾಡುವುದಿಲ್ಲ. ಹಾಗೆ ಒಬ್ಬ ವಿದ್ಯಾರ್ಥಿ ಪಾಠ ಕೇಳುವಾಗ ಶಿಕ್ಷಕರು ಯಾವ ಜಾತಿಯವರು ಎಂದು ಕೇಳಿ ಪಾಠ ಕೇಳುವುದಿಲ್ಲ.
ಹೀಗಿರುವಾಗ ಅನಗತ್ಯ ವಿವಾದ ಏಕೆ? ಕೂಡಲೇ ಇದು ಇಲ್ಲಿಗೆ ನಿಲ್ಲಬೇಕು ಒಂದು ವೇಳೆ ಇದರ ಹಿಂದೆ ಯಾರಾದರೂ ಪ್ರಚೋದನೆ ಮಾಡುವವರು ಇದ್ದರೆ ಅಂತವರು ಕೂಡ ಅರಿತುಕೊಂಡು ನಡೆಯಬೇಕು. ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಲು ಹೋಗಬಾರದು .
ಸುದ್ದಿ ಮತ್ತು ಜಾಹೀರಾತು ಸಂಪರ್ಕಿಸಿ:9449553305…