
ರಾಣೇಬೆನ್ನೂರು: ನಗರದ ವೀರ ಮದಕರಿ
ನಾಯಕ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಾದ
ಬಡ ಕರಿಯಪ್ಪನವರು ಪುಸ್ತಕ ಕುರಿತು ಇವತ್ತಿನ ಯುಗದಲ್ಲಿ ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಳವಾಗುದು ರಾಣೇಬೆನ್ನೂರಿನ ಶೃಂಗಾರ
ಕಾವ್ಯ ಪ್ರಕಾಶನ ಸಂಸ್ಥೆಯ ಅಧ್ಯಕ್ಷರಾದ
ಡಾll ಬಸವರಾಜ ಎಸ್. ಬಾಗೇವಾಡಿಮಠರವರು
ಕವಿ ಸಾಹಿತಿ ಇವರು ಒಂದು ಕೂಲಿ ಕೆಲಸದ
ಜೊತೆಗೆ ಸಮಾಜ ಸೇವಕರು, ಪುಸ್ತಕ ಪ್ರೇಮಿ,
ನಾಡಿನಾದ್ಯಂತ ಸಂಚರಿಸಿ ಹಳೆಯ ಪುಸ್ತಕಗಳನ್ನು ಸಂಗ್ರಹ ಮಾಡಿ ಪುಸ್ತಕ ಜೋಳಿಗೆ ಬಂದ
ಪುಸ್ತಕಗಳನ್ನು ಬಡ ಮಕ್ಕಳಿಗೆ ಓದಲು
ಕೊಟ್ಟಿರುತ್ತಾರೆ.
ಇವರ ಮಾಡಿದ ಸಾಧನೆ ಗುರ್ತಿಸಿ ಅನೇಕ ಸಂಘಟನೆಗಳು ಪ್ರಶಸ್ತಿ
ಕೊಟ್ಟು ಗೌರವಿಸಿದ್ದಾರೆ. ಮೂರ್ತಿ ಚಿಕ್ಕದಾದರೂ ಮಾಡುವ ಸೇವೆ ನಾಡಿಗೆ ಆಪ್ಪಾರ ವಾದ್ದದೇಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
.
ಮಾ. 16 ರಂದು ವೀರ ಮದಕರಿ ನಾಯಕ
ಶಾಲೆಗೆ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ
ಅಧ್ಯಕ್ಷರಾದ ಬಸವರಾಜ ಬಾಗೇವಾಡಿಮಠರವರು
51 ಪುಸ್ತಕಗಳನ್ನು ದಾನವಾಗಿ ಕೊಟ್ಟಿರುತ್ತಾರೆಂದು ರಮೇಶ ಬಡ ಕರಿಯಪ್ಪನವರು ಹೇಳಿದ್ದಾರೆ.
ಆನಂತರ ನಾವು ಯಾವುದೇ ಕೆಲಸವನ್ನು
ಮಾಡಲಿ ಸಾಧಾನೆ ಮಾಡಬೇಕಾದರೆ
ಛಲವೊಂದಿದ್ದರೆ ಸಾಕು ನಾವು ಯಾವುದೇ
ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ ಇನ್ನೂ ಬಾಗೇವಾಡಿಮಠರವರು ನಾಡಿನಾದ್ಯಂತ
ಸಂಚರಿಸಿ ಪುಸ್ತಕ ಜೋಳಿಗೆ ಪುಸ್ತಕಗಳನ್ನು
ಸಂಗ್ರಹ ಮಾಡಿ ಬಡ ಮಕ್ಕಳಿಗೆ ಓದಲು
ಅನುಕೂಲ ಮಾಡಿ ಕೊಟ್ಟಿರುತ್ತಾರೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ರಮೇಶ ಬಡ
ಕರಿಯಪ್ಪನವರು, ಕೆ. ಎಸ್. ನಾಗರಾಜ,
ನಗರ ವಾಣಿ ಪತ್ರಿಕೆ ಕುಸಗೂರ,
ಇನ್ನೂ ಮುಂತಾದವರು ಉಪಸ್ಥಿತರಿದ್ದರು..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ;9449553305…