Thursday, May 1, 2025
Google search engine
Homeರಾಜ್ಯ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಂಶೋಧಕ ಡಾ.ಕೆಳದಿ ಗುಂಡಾಜೋಯಿಸ್..!!

೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಂಶೋಧಕ ಡಾ.ಕೆಳದಿ ಗುಂಡಾಜೋಯಿಸ್..!!

ಶಿವಮೊಗ್ಗ : ಇದೆ ಮಾರ್ಚ್ ೩೦ ಮತ್ತು ೩೧ ರಂದು ಸಾಹಿತ್ಯ ಗ್ರಾಮದಲ್ಲಿ ನಡೆಯುವ ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಇತಿಹಾಸ ಸಂಶೋಧಕರಾದ ಡಾ.ಕೆಳದಿ ಗುಂಡಾ ಜೋಯಿಸ್ ಆಯ್ಕೆ ಆಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಿ.ಮಂಜುನಾಥ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಕಿರು ಪರಿಚಯ:

೯೨ ವರ್ಷದ ಹಿರಿಯ ಸಾಹಿತಿ ಹಾಗೂ ಖ್ಯಾತ ಸಂಶೋಧಕರಾದ ಡಾ.ಕೆಳದಿ ಗುಂಡಾ ಜೋಯಿಸ್ ಅವರು ಇಳಿ ವಯಸ್ಸಿನಲ್ಲೂ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ರಾಜ್ಯ ಹಾಗೂ ರಾಷ್ಟ್ರದದ್ಯಾಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಇತಿಹಾಸ ಅಧ್ಯಯನವನ್ನು ನಡೆಸುತ್ತ ಇದ್ದಾರೆ ಎನ್ನುವುದು ಇವರಲ್ಲಿರುವ ಸಂಶೋಧನೆಯ ಆಸಕ್ತಿಯಾಗಿದೆ.

ಮೈಸೂರು ವಿವಿಯಲ್ಲಿ ಎಂ.ಎ ಇತಿಹಾಸ ಪದವಿಯನ್ನು ಪಡೆದಿರುವ ಇವರು ಶಾಸನಶಾಸ್ತ್ರ, ವಸ್ತು ಸಂಗ್ರಹಾಲಯ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರ, ಮೋಡಿ, ತಿಗಳಾರಿ ಲಿಪಿ ಅಧ್ಯಯನ ಇತ್ಯಾದಿಯಲ್ಲಿ ಪರಿಣತಿಯನ್ನು ಪಡೆದವರಾಗಿದ್ದಾರೆ.


ಕೆಳದಿ ವಸ್ತುಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ,ವನ್ನು ಸ್ಥಾಪಿಸಿ ಅದನ್ನು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ನಿರ್ವಹಣೆಗಾಗಿ ನೀಡಿ ಅನಂತರ ವಿವಿಯ ಮನವಿ ಮೇರೆಗೆ ಅದರ ಮಾರ್ಗದರ್ಶಕರಾಗಿ, ತಿಗಳಾರಿ ಲಿಪಿ ಅಧ್ಯಯನದಲ್ಲಿ ಮತ್ತು ಅಧ್ಯಾಪನದಲ್ಲಿ ತೊಡಗಿದ್ದು ಜೊತೆಗೆ ರಾಷ್ಟ್ರೀಯ ಹಸ್ತಪ್ರತಿ ಪ್ರತಿಷ್ಠಾನ ಕೊಟ್ಟಿರುವ ಹಸ್ತಪ್ರತಿ ಸಂಪನ್ಮೂಲ ಮತ್ತು ಸಂರಕ್ಷಣಾ ಕೇಂದ್ರದ ನಿರ್ದೇಶಕ ಮತ್ತು ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದರ ಜೊತೆಯಲ್ಲಿ ರಾಜ್ಯ, ಕೇಂದ್ರ ಸರಕಾರಗಳು ವಹಿಸಿರುವ ಕೆಲವು ಯೋಜನೆಗಳನ್ನು ಪೂರೈಸಿಕೊಡುವಲ್ಲಿ ನಿರತರಾಗಿದ್ದಾರೆ.
ಕರ್ನಾಟಕ ಸರಕಾರದ ಹಿರಿಯ ಅಧಿಕಾರಿಗಳಿಗೆ ಮೋಡಿ ಲಿಪಿ ಕುರಿತು ಹಲವಾರು ವರ್ಷಗಳ ಕಾಲ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದು ಅನೇಕ ಶಿಬಿರ, ಕಾರ್ಯಾಗಾರ ತರಬ್ಭೆತಿಗಳನ್ನು ನಡೆಸುವ ಮೂಲಕ ಸಾವಿರಾರು ಜನರಿಗೆ ಇತಿಹಾಸದ ಹಾಗೂ ತಾಳೆಗರಿ ಮತ್ತು ಮೋಡಿ ಲಿಪಿಯ ಬಗ್ಗೆ ಮಾರ್ಗದರ್ಶನ ನೀಡುವಲ್ಲಿ ವಿಶೇಷ ಕಾರ್ಯವನ್ನು ನಡೆಸಿದ್ದು ಇವರ ಕಾರ್ಯವೈಖರಿಯಾಗಿದೆ.


ವರದಹಳ್ಳಿಯ ಶ್ರೀಧರಸ್ವಾಮಿ ವ್ಮಠದಲ್ಲಿ ತಿಗಳಾರಿ ಮತ್ತು ಮೋಡಿ ಲಿಪಿಯನ್ನುನ್ನು ನಾಲ್ಕು ವರ್ಷಗಳ ಕಾಲ ತರಬೇತಿ ನೀಡಿದ್ದು, ಹೀಗೆ ರಾಜ್ಯದ ಅನೇಕ ಕಡೆಗಳಲ್ಲಿ ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಇನ್ನೂ ವಿಶೇಷವಾಗಿ ಕೆರಳದ ವಿದ್ವಾಂಸರಿಗೆ ತಿಗಳಾರಿ ಓದುವುದನ್ನು ಕಲಿಸಿದ್ದಾರೆ. ಅನೇಕ ಅಧ್ಯಯನಾಸಕ್ತಿರಿಗೆ ಮಾರ್ಗದರ್ಶನ ನೀಡಿದ್ದಾರೆ, ಪ್ರಾಚೀನ ಹಸ್ತಪ್ರತಿ ಅಧ್ಯಯನ ಸಂಶೋಧನೆ, ಪಕಟಣೆ. ತಿಗಳಾರಿ ಲಿಪಿ ಅಧ್ಯಯನ, ಸಂಶೋಧನೆ, ಪ್ರಕಟನೆ, ಕನ್ನಡ ಮೋಡಿಲಿಪಿ ಅಧ್ಯಯನ ಸಂಶೋಧನೆ, ಪ್ರಕಟನೆ ಇದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಹೊರ ರಾಜ್ಯಗಳಲ್ಲಿ ಕರ್ನಾಟಕ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಭಾಗಿ. ಇದರಲ್ಲಿ ಪತ್ರಾಗರ ಇಲಾಖೆಯ ಕಾರ್ಯಗಾರಗಳು ಉಲ್ಲೇಖಿಸುವಂತಹುವು. ಈ ವರೆಗೆ ಸುಮಾರು ೫೦ಕ್ಕೂ ಹೆಚ್ಚು ಕಡೆಗಳಲ್ಲಿ ಸಂಪನ್ಮೂಲಕಾರರಾಗಿ ಭಾಗವಹಿಸಿದ್ದಾರೆ.


ಇತಿಹಾಸ, ಸಾಹಿತ್ಯ, ಸಂಶೋಧನೆ ಕುರಿತಾಗಿ ಸುಮಾರು ೩೫೦ಕ್ಕೂ ಹೆಚ್ಚು ಲೇಖನ ಪ್ರಕಟವಾಗಿವೆ. ಅಲ್ಲದೆ ಸುಮಾರು ೫೦ಕ್ಕೂ ಹೆಚ್ಚು ಪುಸ್ತಕಗಳು ಕರ್ನಾಟಕ ಸರಕಾರ ಮತ್ತು ಇತರ ಪ್ರಕಾಶಕರ ಮೂಲಕ ಪ್ರಕಟವಾಗಿವೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲೇಖನಗಳು ಪ್ರಕಟವಾಗಿವೆ.


ಕರ್ನಾಟಕದ ಉದ್ದಗಲಕ್ಕೂ ನಡೆಸುವ ಇತಿಹಾಸ ಕುರಿತ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದು ಕರ್ನಾಟಕದ ಹೆಚ್ಚಿನ ವಿಶ್ವವಿದ್ಯನಿಲಯಗಳ ಇತಿಹಾಸ, ಕನ್ನಡ ವಿಭಾಗದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದು .ಪ್ರಾಚ್ಯವಸ್ತುಸಂಗ್ರಹಾಲಯ, ನಿರ್ದೇಶನಾಲಯ ನಡೆಸುವ ಹೆಚ್ಚಿನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.


ಭದ್ರಾವತಿ, ಬೆಂಗಳೂರು ಆಕಾಶವಾಣಿ, ದೂರದರ್ಶನ ಮತ್ತು ಇತರ ಮಾಧ್ಯಮಗಳಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.


ಪ್ರಸಿದ್ದ ಚಲನಚಿತ್ರ ನಟ,ನಿರ್ದೇಶಕ ಹಾಗೂ ನಿರ್ಮಾಪಕರಾದ ನಾಗಾಭರಣರಿಗೆ ಕೆಳದಿ ರಾಣಿ ಚೆನ್ನಮ್ಮಾಜಿ ಮತ್ತು ಕೆಳದಿ ಶಿವಪ್ಪನಾಯಕ ದಾರಾವಾಹಿ ಮತ್ತು ಚಲನಚಿತ್ರಗಳಿಗೆ ಇತಿಹಾಸದ ಮಾಹಿತಿ ನೀಡಿದ್ದಾರೆ. ರಾಣಿ ಚೆನ್ನಮ್ಮಾಜಿ ತ್ರಿಶತಮಾನೋತ್ಸವ ಸಂದರ್ಭದಲ್ಲಿ ಶ್ರೀ ವಿದ್ಯಾಶಂಕರ್ ಎಂಬುವವರು ಚಂದನಕ್ಕಾಗಿ ತೆಗೆದ ದಾರಾವಾಹಿಗೆ ಮಾಹಿತಿ ಒದಗಿಸಿದ್ದಾರೆ ಸರೋಜಿನಿ ಮಹಿಷಿ, ಶ್ರೀ ಪುಟ್ಟಣ್ಣ ಕಣಗಾಲ್ ಮೊದಲಾದವರಿಗೆ ಐತಿಹಾಸಿಕÀ ಮಾಹಿತಿಯನ್ನು ನೀಡಿದ್ದಾರೆ.
ಕೆಳದಿಯ ಇತಿಹಾಸ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಕೆಳದಿ ಸಾಮ್ರಾಜ್ಯದ ಬಗ್ಗೆ ವಿಶೇಷವಾಗಿ ಅಧ್ಯಯನ ಹಾಗೂ ಸಂಶೋಧನೆಯನ್ನು ನಡೆಸಿದ್ದಾರೆ.
ಕರ್ನಾಟಕ ಇತಿಹಾಸ ಅಕಾಡೆಮಿ ಹೊನ್ನಾಳಿ ಇದರ ಸರ್ವಾಧ್ಯಕ್ಷ.ಪ್ರಾಚ್ಯವಸ್ತುಸಂಗ್ರಹಾಲಯ ನಿರ್ದೇಶನಾಲಯ ಏರ್ಪಡಿಸಿದ್ದ ಸಮ್ಮೇಳನ, ಶಿವಮೊಗ್ಗದ ಸರ್ವಾಧ್ಯಕ್ಷ.ಕನ್ನಡ ವಿಶ್ವವಿದ್ಯಾನಿಲಯದಲ್ಲಿ ನಡೆದ ಮೋಡಿ ಲಿಪಿ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ.ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾ ಅಧ್ಯಕ್ಷ.ಸಾಗರ ತಾಲ್ಲೂಕು ಇತಿಹಾಸ ಸಮ್ಮೇಳನದ ಅಧ್ಯಕ್ಷ ಇತ್ಯಾದಿ.ರಾಷ್ಟ್ರೀಯ ಹಸ್ತಪ್ರತಿ ಪ್ರತಿಷ್ಠಾನ ನಡೆಸುವ ಸಮ್ಮೇಳನಗಳು ಹೀಗೆ ಅನೇಕ ಸಮ್ಮೇಳನಗಳ ಸರ್ವಾಧ್ಯಕ್ಷತೆಯನ್ನು ವಹಿಸಿದ ಇವರಿಗೆ ಅನೇಕ ಪ್ರಶಸ್ತಿ ಗೌರವಗಳು ಲಭಿಸಿವೆ.


ಜಗತ್ತಿನ ಅನೇಕ ಇತಿಹಾಸ ಸಂಶೋಧಕರ ಪರಿಚಯ ಇರುವ ಇವರು ರಾಷ್ಟ್ರದ ಅನೇಕ ಗಣ್ಯರೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದರು ಸಹ ಯಾವುದೇ ಹಮ್ಮು ಬಿಮ್ಮಿಲ್ಲದೆ ತಮ್ಮಷ್ಟಕ್ಕೆ ತಾವು ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಿದ್ದು ಇವರ ಸಾಧನೆಗೆ ಸಂದ ಗೌರವವಾಗಿದೆ.

ವರದಿ: ಓಂಕಾರ ಎಸ್. ವಿ. ತಾಳಗುಪ್ಪ..

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305...

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...