
ಶಿವಮೊಗ್ಗ: ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಶಿವಮೊಗ್ಗ ಸಿಟಿ ಕ್ಲಬ್ ನಲ್ಲಿ ಕ್ಲಬ್ ನ ಸದಸ್ಯರಾದ ಬಳ್ಳಕೆರೆ ಸಂತೋಷ್ ಅವರು ನಿಯಮ ಮೀರಿ ಪಾರ್ಟಿ ನಡೆಸಿದ್ದು.
ಈಗ ವಿವಾದಕ್ಕೆ ಈಡಾಗಿದೆ ಇದೇ ತಿಂಗಳ ಏಪ್ರಿಲ್ 3ರ ರಾತ್ರಿ ಬಳ್ಳಕೆರೆ ಸಂತೋಷ ರವರು ತಮ್ಮ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರೊಂದಿಗೆ ನಿಯಮ ಮೀರಿ ಪಾರ್ಟಿ ಮಾಡಿದ್ದಾರೆ.
ಕ್ಲಬ್ನ ನ ನಿಯಮಗಳನ್ನು ಗಾಳಿಗೆ ತೂರಲಾಗಿದೆ:
ಸಾಮಾನ್ಯವಾಗಿ ಕ್ಲಬ್ನ ನ ನಿಯಮಗಳ ಪ್ರಕಾರ, ಅತಿಥಿಗಳು ರಾತ್ರಿ 9:30 ಒಳಗೆ ಬರಬೇಕು. ಹೊರಗಿನಿಂದ ತಿನಿಸುಗಳನ್ನು ತರುವಂತಿಲ್ಲ . ಆದರೆ ಇಲ್ಲಿ ಅತಿಥಿಗಳು ರಾತ್ರಿ 10:30 ರ ನಂತರ ಬಂದಿದ್ದಾರೆ.ಹಾಗೇ ಪಾರ್ಟಿ ಮಾಡಬೇಕೆಂದರೆ ಪಾರ್ಟಿ ಹಾಲ್ ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡಿರಬೇಕು. ಇದ್ಯಾವುದನ್ನು ಇಲ್ಲಿ ಪಾಲಿಸಿಲ್ಲ.
ಬಳ್ಳಕೆರೆ ಸಂತೋಷ್ ಪಾರ್ಟಿಯಿಂದ ಕ್ಲಬ್ನ ನ ಉಳಿದ ಸದಸ್ಯರಿಗೆ ಬೇಸರತಂದಿದೆ:
ಅಂದು ನಡೆದ ಪಾರ್ಟಿಯಿಂದ ಉಳಿದ ಕ್ಲಬ್ನ ಅನೇಕ ಸದಸ್ಯರಿಗೆ ತೊಂದರೆಯಾಗಿದ್ದು. ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬಳ್ಳಕೆರೆ ಸಂತೋಷ್, ಸುದರ್ಶನ್, ನಾಗರಾಜ್ ವಿರುದ್ಧ ಕ್ರಮಕ್ಕೆ ಕ್ಲಬ್ನ ಸದಸ್ಯರಾದ ಅವಿನಾಶ್ ಗೌಡ ಆಗ್ರಹ:
ಕ್ಲಬ್ಬಿನ ಸದಸ್ಯರಾದ ಅವಿನಾಶ್ ಗೌಡ ಅವರು ಕಾರ್ಯದರ್ಶಿಯವರಿಗೆ ಮನವಿ ನೀಡಿದ್ದು. ನಿಯಮಗಳನ್ನು ಗಾಳಿಗೆ ತೂರಿ ವಿರುದ್ಧವಾಗಿ ವರ್ತಿಸಿ ಪಾರ್ಟಿ ನಡೆಸಿರುವ ಕ್ಲಬ್ನ ಸದಸ್ಯರಾದ ಬಳ್ಳಕೆರೆ ಸಂತೋಷ್ ವಿರುದ್ಧ, ಇದಕ್ಕೆ ಸಹಕಾರ ನೀಡಿದ ಕ್ಲಬ್ಬಿನ ಕ್ಯಾಂಟೀನ್ ನಡೆಸುತ್ತಿರುವ ಸುದರ್ಶನ್ ವಿರುದ್ಧ, ಹಾಗೂ ಇದಕ್ಕೆ ಅವಕಾಶ ನೀಡಿದ ಸೆಕ್ಯೂರಿಟಿ ನಾಗರಾಜ್ ವಿರುದ್ಧ ನೋಟಿಸ್ ನೀಡಿ ಕ್ಲಬ್ನ ಮಹಾ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಯದರ್ಶಿ ಗಳಲ್ಲಿ ಒತ್ತಾಯಿಸಿದ್ದಾರೆ.
ಕ್ರಮ ತೆಗೆದುಕೊಳ್ಳುತ್ತಾರಾ ಕಾರ್ಯದರ್ಶಿಗಳು?
ಕ್ಲಬ್ನ ನ ನಿಯಮ ಮೀರಿ ವರ್ತನೆ ಮಾಡಿರುವವರ ವಿರುದ್ಧ ಕಾರ್ಯದರ್ಶಿಗಳು ನಿರ್ಧಾಕ್ಷಿಣ್ಯವಾಗಿ, ಯಾರ ಮುಲಾಜಿಗೂ ಒಳಗೊಳ್ಳದೆ, ಕ್ರಮ ಕೈಗೊಳ್ಳುತ್ತಾರಾ? ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇತರ ಸದಸ್ಯರು ಕೂಡ ಇತರದ ವರ್ತನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಇತರ ಸದಸ್ಯರ ಮನವಿ…..
ರಘುರಾಜ್ ಹೆಚ್, ಕೆ…9449553305…
#####################################ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…