
ಶಿವಮೊಗ್ಗ: ಇಂದು ಬೆಳಗ್ಗೆ ಜೆಪಿಎನ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ರೋಟರಿ ಪೂರ್ವ ಶಿವಮೊಗ್ಗ ಹಾಗೂ ಎಸ್ ಎನ್ ಎಂಟರ್ ಪ್ರೈಸಸ್ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷರಾದ ಸತೀಶ್ ಚಂದ್ರ ರಕ್ತದಾನದಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ನಾವು ಮಾಡುವ 300ml ರಕ್ತದಾನದಿಂದ ಮೂರು ಜನರ ಪ್ರಾಣವನ್ನು ಉಳಿಸಬಹುದಾಗಿದೆ. ನಾವು ಮಾಡುವ ರಕ್ತದಾನದಿಂದ ದೈಹಿಕವಾಗಿ ಮಾನಸಿಕವಾಗಿ ಸದೃಢ ರಾಗುತ್ತೇವೆ ಎಂದು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ಬಗ್ಗೆ ಇರುವ ಮೂಢನಂಬಿಕೆಗಳನ್ನು ದೂರವಾಗಿಸಿ ಕೊಳ್ಳಬೇಕು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷರಾದ ಸತೀಶ್ ಚಂದ್ರ ಹೇಳಿಕೆ:
ಇಂದು ಹಲವು ಜನರು ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ ರಕ್ತದಾನದ ಬಗ್ಗೆ ಹಲವು ಮೂಢನಂಬಿಕೆಗಳು ಜನರಲ್ಲಿದೆ ಅದು ಹೋಗಬೇಕು ರಕ್ತದಾನ ಕ್ಕಿಂತ ಮಹಾದಾನ ಯಾವುದು ಇಲ್ಲ ಎನ್ನುವ ಅರಿವನ್ನು ನಾವು ಮೂಡಿಸಿಕೊಳ್ಳಬೇಕು. ನಮ್ಮ ರಕ್ತದಾನ ಮಾಡುವುದರ ಮುಖಾಂತರ ಬೇರೆಯವರ ಪ್ರಾಣವನ್ನು ಉಳಿಸಬಹುದು ಎನ್ನುವ ಅರಿವು ನಮಗೆ ಮೂಡಬೇಕು ಎಂದು ಮಾತನಾಡಿದರು.
ರಕ್ತದಾನ ಕ್ಕಿಂತ ದೊಡ್ಡ ದಾನ ಮತ್ತೊಂದಿಲ್ಲ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ವಿಜಯಕುಮಾರ್ ಅಭಿಪ್ರಾಯ:
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ ವಿಜಯ್ ಕುಮಾರ್ ಮಾತನಾಡಿ ರಕ್ತದಾನ ಕ್ಕಿಂತ ಮಹಾ ದಾನ ಮತ್ತೊಂದಿಲ್ಲ ಎಲ್ಲರೂ ರಕ್ತದಾನ ಮಾಡುವುದರ ಮೂಲಕ ಶ್ರೇಷ್ಠ ವ್ಯಕ್ತಿ ಗಳು ಎನಿಸಿಕೊಳ್ಳಬೇಕು. ಯುವಕರು ಹೆಚ್ಚಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದಿಂದ ಹಲವು ಕಾಯಿಲೆಗಳು ದೂರವಾಗುತ್ತವೆ ಹಾಗೂ ಹಲವು ಕಾಯಿಲೆಗಳು ಇರುವ ಅರಿವು ಬರುತ್ತದೆ. ಎಂದು ತಿಳಿಸಿದರು.
ರಕ್ತದಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದ Z D ಅನುಷ್ ಗೌಡ : ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ ಶುಭ ಹಾರೈಕೆ :
ಈ ಸಂದರ್ಭದಲ್ಲಿ Z D ಅನುಷ್ ಗೌಡ ಅವರು ರಕ್ತದಾನದ ಬಗ್ಗೆ ಮಹತ್ವದ ಮಾಹಿತಿ ನೀಡಿದರು. ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು. ರಕ್ತದಾನ ಶಿಬಿರದಲ್ಲಿ ಜೋನ್ ಕೋಆರ್ಡಿನೇಟರ್ ಜೆಸಿ ಕಿಶೋರ್, ಚಂದ್ರಹಾಸ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್, ಡಾ// ಲಲಿತ ಭರತ್, ಹಾಗೂ 108 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಾಕರ್ , ಮಂಜುನಾಥ್ ಕದಮ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಘುರಾಜ್ ಹೆಚ್. ಕೆ….9449553305…..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ :9449553305…