
ಮಹಾತ್ಮ ಗಾಂಧೀಜಿ ಪ್ರತಿಮೆಗೆ ರಕ್ಷಣೆ ಇಲ್ಲ , ಈಜುಕೊಳ ಇದ್ದರು ಉಪಯೋಗ ಮಾಡುವಂತಿಲ್ಲ…

ಚಿಕ್ಕ ಮಕ್ಕಳು ಆಟವಾಡುವ ಆಟಿಕೆಗಳು ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಹಾಗಿದೆ… ಉಪಯೋಗಿಸುವಂತಿಲ್ಲ…

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಕೋಟಿಗಳ ಲೆಕ್ಕದಲ್ಲಿ ನಡೆಯುತ್ತಿದೆ. ಆದರೆ ಗುಣಮಟ್ಟದ ಕಾಮಗಾರಿಗಳು ಆಗುತ್ತಿಲ್ಲ. ನಿರಂತರವಾಗಿ ಮಾಧ್ಯಮಗಳು ಹೋರಾಟಗಾರರು ಇದರ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಈ ಅಕ್ರಮಗಳ ಪಿತಾಮಹ ಎಂ ಡಿ ಚಿದಾನಂದ ವಠಾರೆಗೆ ಬುದ್ಧಿ ಬಂದಿಲ್ಲ.
ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಉದ್ಯಾನವನದ ಅವ್ಯವಸ್ಥೆ:
ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನದ ವ್ಯವಸ್ಥೆ ನೋಡಿ ನಾಗರಿಕರು ಚೀಮಾರಿ ಹಾಕುತ್ತಿದ್ದಾರೆ. ಕನಿಷ್ಠ ವಾರ್ಡ್ಗಳಲ್ಲಿ ಇರುವ ಉದ್ಯಾನವನದ ಸೌಲಭ್ಯಗಳು ಈ ಉದ್ಯಾನವನದಲ್ಲಿ ಇಲ್ಲ …
ಗಾಂಧಿ ಪ್ರತಿಮೆಗೆ ರಕ್ಷಣೆ ಇಲ್ಲ ಸ್ವಚ್ಛತೆಯಿಂದ ಕೂಡಿಲ್ಲ:
ಗಾಂಧಿ ನಾಡಿನಲ್ಲಿ ಗಾಂಧಿ ಪ್ರತಿಮೆಗೆ ರಕ್ಷಣೆ ಇಲ್ಲ ಇನ್ನೇನು ಬಿದ್ದುಹೋಗುವ ಸ್ಥಿತಿಯಲ್ಲಿದೆ ಪ್ರತಿಮೆ ಸ್ವಚ್ಛತೆಯಿಂದ ಕೂಡಿಲ್ಲ..
ಸ್ತ್ರೀ-ಪುರುಷರ ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ:
ಉದ್ಯಾನವನದಲ್ಲಿರುವ ಸ್ತ್ರೀ-ಪುರುಷರ ಶೌಚಾಲಯಗಳು ನಾಗರಿಕರು ಬಳಸಲು ಯೋಗ್ಯವಾಗಿಲ್ಲ ಅದಕ್ಕೋಸ್ಕರ ಪತ್ರಿಕೆ ಫೋಟೋವನ್ನು ಕೂಡ ಹಾಕಿಲ್ಲ..
ಅಕ್ರಮ ಅನೈತಿಕ ಚಟುವಟಿಕೆಗಳ ತಾಣವಾದ ಉದ್ಯಾನವನ:
ಅಕ್ರಮ ಅನೈತಿಕ ಚಟುವಟಿಕೆಗಳ ತಾಣವಾದ ಉದ್ಯಾನವನ ರಾತ್ರಿಯಾದರೆ ಸಾಕು ಎಲ್ಲಾ ಚಟುವಟಿಕೆಗಳು ಉದ್ಯಾನವನದಲ್ಲಿ ನಡೆಯುತ್ತವೆ. ಹಗಲು ಹೊತ್ತಿನಲ್ಲಿ ಜೂಜಿನ ಆಟಗಳು ನಡೆಯುತ್ತಿರುತ್ತವೆ. ಇಸ್ಪೀಟ್ ಓಸಿ ಆಟಗಳ ಲೆಕ್ಕಾಚಾರದಲ್ಲಿ ಜೂಜುಕೋರರು ನಿರತರಾಗಿರುತ್ತಾರೆ…
ವಿದ್ಯುದ್ದೀಪಗಳು ಇದ್ದರು ಬೆಳಕು ಬರುವುದಿಲ್ಲ:

ಉದ್ಯಾನವನದಲ್ಲಿರುವ ವಿದ್ಯುದ್ದೀಪಗಳು ಕೆಲವು ಕಡೆ ಒಡೆದು ಹೋಗಿದ್ದು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ.ದೀಪಗಳು ಇದ್ದರೂ ಬೆಳಕು ಮಾತ್ರ ಇಲ್ಲ ಕತ್ತಲಲ್ಲಿ ಅಕ್ರಮ ಚಟುವಟಿಕೆಗಳಿಗೆ ಉಪಯುಕ್ತ ಸ್ಥಳವಾಗಿದೆ..
ರಘುರಾಜ್ ಹೆಚ್. ಕೆ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..