Home ಶಿವಮೊಗ್ಗಆರೋಗ್ಯಹಸಿವು ಬಡತನ ಒಂದು ವಿಶ್ವ ವಿದ್ಯಾಲಯಕ್ಕಿಂತ ಹೆಚ್ಚಿನ ಪಾಠ ಕಲಿಸುತ್ತವೆ.ಡಾ//ಶ್ರೀನಿವಾಸ್ ..!!

ಹಸಿವು ಬಡತನ ಒಂದು ವಿಶ್ವ ವಿದ್ಯಾಲಯಕ್ಕಿಂತ ಹೆಚ್ಚಿನ ಪಾಠ ಕಲಿಸುತ್ತವೆ.ಡಾ//ಶ್ರೀನಿವಾಸ್ ..!!

by EDITOR NEWS WARRIORS
0 comments


ಪ್ರತಿಯೊಬ್ಬರಲ್ಲೂ ಒಬ್ಬ ಆಂಜನೇಯನಂತಹ ಶಕ್ತಿ ಇರುತ್ತದೆ.ಅದನ್ನು ಹೊರತೆಗೆಯಲು ಅವರನ್ನು ಪ್ರೇರೇಪಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ನಾನಿಲ್ಲಿ ಪರಿಶೀಲಿಸಲು ಬಂದಿಲ್ಲ ಬದಲಿಗೆ ಪ್ರೇರೇಪಿಸಲು ಬಂದಿದ್ದೇನೆ. ಬದಲಾಗುತ್ತಿರುವ ಜನರ ಮನೋಭಾವಗಳಿಂದ ಬದಲಾಗುತ್ತಿರುವ ಆಹಾರ ಪದ್ದತಿ,ಜೀವನ ಶೈಲಿಗಳಿಂದ ಮುಂದೆ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು.ಇದರಿಂದ ವಿವಿಧ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಬಹುದು.ರೋಗ ನಿರೋಧಕತೆ ಹೆಚ್ಚಿಸಿಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಲು ನೀವೆಲ್ಲ ಹೆಚ್ಚಿನ ಆಸಕ್ತಿ ಬದ್ದತೆಗಳಿಂದ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಆರೋಗ್ಯ ರಕ್ಷಣೆಯ ಮಹತ್ವದ ಜವಬ್ದಾರಿ ನಿಮ್ಮ ಮೇಲಿದೆ ಎಂದು ಆರೋಗ್ಯ ಇಲಾಖಾ ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ನುಡಿದರು.ಅವರು ತೀರ್ಥಹಳ್ಳಿ ಪ್ರಾ.ಆ.ಕೇಂದ್ರ ಕೋಣಂದೂರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಕನ್ನಂಗಿಗೆ ಭೇಟಿ ನೀಡಿದ್ದ ವೇಳೆ ನಡೆಸಿದ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.


ಮುಂದುವರೆದು, ಪ್ರಪಂಚದ ಅತೀ ಪರಿಣಾಮಕಾರಿ ಔಷಧಿ ಎಂದರೆ ನಗು ಪ್ರೀತಿ ಮತ್ತು ಕಾಳಜಿ.ರೋಗಿಗಳ ಚಿಕಿತ್ಸೆಯಲ್ಲಿ ಸದಾ ಈ ಔಷಧಿಗಳು ಜೊತೆಗಿರಬೇಕು. ಹಸಿವು ಮತ್ತು ಬಡತನ ಒಂದು ವಿಶ್ವ ವಿದ್ಯಾಲಯಕ್ಕಿಂತ ಹೆಚ್ಚಿನ ಪಾಠ ಕಲಿಸುತ್ತವೆ. ನನಗೆ ಬಡತನದ ಕಷ್ಟಗಳು ಗೊತ್ತಿದೆ.ಅದು ನನಗೆ ಬಡವರು ಅಸಹಾಯಕರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಕಲಿಸಿದೆ.ರೋಗಿಗಳನ್ನು ಅದರಲ್ಲೂ ತೀರಾ ಬಡ,ಅಸಹಾಯಕ ವರ್ಗಗಳನ್ನು ಅತ್ಯಂತ ಗೌರವದಿಂದ ಕಾಣಬೇಕು. ನೀವು ತೋರುವ ಕಾಳಜಿ,ಸ್ಪಂದನೆಗಳು ನಿಮ್ಮ ಬದುಕಿಗೆ ಸಾರ್ಥಕತೆ ನೀಡುತ್ತದೆ. ಸರ್ಕಾರ ಪ್ರತೀ ವರ್ಷ ಮೂವತ್ತೆಂಟು ಸಾವಿರ ಕೋಟಿಯಷ್ಟು ಹಣವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕಾಗಿ ಖರ್ಚು ಮಾಡುತ್ತದೆ.ಅದರ ಪ್ರಯೋಜನವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ನೀವು ಮಾಡಬೇಕಿದೆ ಎಂದರು.


ಆಸ್ಪತ್ರೆಯಲ್ಲಿದ್ದ ರೋಗಿಗಳ ಜೊತೆ ಮಾತನಾಡಿ ಮಾಹಿತಿ ಪಡೆದ ಅವರು ಅಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕ ರೋಗ ಚಿಕಿತ್ಸೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ವೈದ್ಯಾಧಿಕಾರಿಗಳು ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿದರು.ಅಪರಾಹ್ನ ತೀರ್ಥಹಳ್ಳಿಯ ಗೋಪಾಲಗೌಡ ರಂಗ ಮಂದಿರದಲ್ಲಿ ತಾಲ್ಲೂಕಿನ ಎಲ್ಲಾ ಸಂಸ್ಥೆಗಳ ವೈದ್ಯಾಧಿಕಾರಿಗಳು ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಅಸಾಂಕ್ರಾಮಿಕ ಘಟಕದ ಸಿಬ್ಬಂದಿಗಳ ಸಭೆ ನಡೆಸಿ, ಕಂಡು ಬಂದ ಉತ್ತಮ ಅಂಶಗಳಿಗೆ ಪ್ರಶಂಸೆ ವ್ಯಕ್ತಪಡಿಸಿ, ಉತ್ತಮ ಪಡಿಸಬೇಕಿರುವ ಅಂಶಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.


ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ ತಮ್ಮ ಪ್ರೇರಣಾತ್ಮಕ ಮಾತುಗಳಿಂದ ಗುಣಮಟ್ಟದ ಆರೋಗ್ಯ ಸೇವೆ ನೀಡುವತ್ತ ವೈದ್ಯಾಧಿಕಾರಿ ಸಿಬ್ಬಂದಿಗಳಿಗೆ ಸ್ಪೂರ್ತಿ ತುಂಬಿದ ಜಂಟಿ ನಿರ್ದೇಶಕರನ್ನು ಅಭಿನಂದಿಸುವುದಾಗಿ ತಿಳಿಸಿದರು.


ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ ಜಂಟಿ ನಿರ್ದೇಶಕರ ಜೀವನಾನುಭಗಳ ಮಾತುಗಳು ಅತ್ಯಂತ ಸ್ಪೂರ್ತಿದಾಯಕವಾಗಿದ್ದು ಆರೋಗ್ಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಎಲ್ಲರಲ್ಲೂ ಉತ್ಸಾಹ ತುಂಬಿವೆ. ಸೇವೆಯ ಮಹತ್ವ ಮತ್ತು ಅರಿವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ವೈದ್ಯಾಧಿಕಾರಿ ಸಿಬ್ಬಂದಿಗಳಿಗೆ ಇಂತಹ ಪ್ರೇರಣೆಗಳ ಅಗತ್ಯವಿದೆ. ಎಲ್ಲಾ ತಾಲ್ಲೂಕು,ಜಿಲ್ಲಾ ಮಟ್ಟಗಳಲ್ಲಿ ಇಲಾಖೆಯಿಂದ ಈ ಬಗ್ಗೆ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವಂತೆ ಮನವಿ ಮಾಡಿದರು. ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಎ ಎಂ ಜಗದೀಶ್ ಸ್ವಾಗತಿಸಿ, ನಿರೂಪಿಸಿದರು,ವೇದಾಶ್ರೀ ಪ್ರಾರ್ಥಿಸಿ, ಈಶ್ವರ್ ವಂದಿಸಿದರು.

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!