
ಶಿವಮೊಗ್ಗ:- ಇತ್ತೀಚಿನ ಎಸಿಬಿ ದಾಳಿ ಹಲವು ತಿಂಗಳಿನಿಂದ ಬಾಕಿ ಉಳಿದಿದ್ದ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಿಸಿದೆ. ಇಂತದ್ದೊಂದು ಘಟನೆ ಶಿವಮೊಗ್ಗದ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯಿದೆ ಕಚೇರಿಯಲ್ಲಿ ನಡೆದಿದೆ.
ದಿನಸಿ ಅಂಗಡಿ ನೋಂದಣಿಗೆ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದರು. ಅರ್ಜಿ ವಿಲೇವಾರಿಗೆ ಅಲ್ಲಿನ ಎಫ್‌ಡಿಎ 2ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1 ಸಾವಿರ ಕೊಡುವಾಗ ಜೂನ್1ರಂದು ರೆಡ್‌ಹ್ಯಾಂಡ್ ಆಗಿ ಆರೋಪಿಯನ್ನು ಬಂಧಿಸಲಾಯಿತು. ನಂತರ ಅಧಿಕಾರಿ, ನೌಕರರಿಗೆ ಎಚ್ಚರಿಕೆ ನೀಡಲಾಗಿತ್ತು.
ಇದರ ಪರಿಣಾಮ ಮೂರು ದಿನದಲ್ಲಿ ಶಿವಮೊಗ್ಗ ತಾಲ್ಲೂಕು ಕಚೇರಿಯ 196 ಹಾಗೂ ಜಿಲ್ಲಾ ಕಚೇರಿಯ 93 ಅರ್ಜಿಗಳು ಸೇರಿ 289 ಅರ್ಜಿಗಳು ವಿಲೇವಾರಿಯಾಗಿದ್ದು ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದು ಅಧಿಕಾರಿಗಳು ಷರಾ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಭ್ರಷ್ಟ ಅಧಿಕಾರಿಗಳ ಸಿಂಹಸ್ವಪ್ನರಾದ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಲೋಕೇಶ್ ಹಾಗೂ ಅವರ ಭ್ರಷ್ಟಾಚಾರ ನಿಗ್ರಹ ದಳದ ಕರ್ತವ್ಯ ನಿರತ ತಂಡದ ಪ್ರಾಮಾಣಿಕ ಕರ್ತವ್ಯ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಭ್ರಷ್ಟರ ವಿರುದ್ಧ ನಿರಂತರ ದಾಳಿಯತ್ತ ಶಿವಮೊಗ್ಗ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪ್ರಾಮಾಣಿಕ ದಾಳಿಗೆ ಭ್ರಷ್ಟರ ವಿರುದ್ಧದ ಸಮರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು: 9449553305…