Wednesday, April 30, 2025
Google search engine
Homeರಾಜ್ಯಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್‌ ಟ್ಯೂಮರ್‌ ಚಿಕಿತ್ಸೆ ನೀಡಿದ ಯುನೈಟೆಡ್‌ ಆಸ್ಪತ್ರೆ ವೈದ್ಯರಿಗೆ ರೋಗಿಯಿಂದ ಅಭಿನಂದನೆ..!!

ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್‌ ಟ್ಯೂಮರ್‌ ಚಿಕಿತ್ಸೆ ನೀಡಿದ ಯುನೈಟೆಡ್‌ ಆಸ್ಪತ್ರೆ ವೈದ್ಯರಿಗೆ ರೋಗಿಯಿಂದ ಅಭಿನಂದನೆ..!!

ವಿಶ್ವ ಬ್ರೈನ್‌ ಟ್ಯೂಮರ್‌ ದಿನಕ್ಕೆ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದ ರೋಗಿಗಳಿಂದ ಅಭಿನಂದನೆ….

ಬೆಂಗಳೂರು : ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್‌ ಟ್ಯೂಮರ್‌ ತಗೆದು ಪ್ರಾಣ ಉಳಿಸಿದ ವೈದ್ಯರುಗಳಿಗೆ 70 ವರ್ಷದ ರೋಗಿಯೊಬ್ಬರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ ಘಟನೆಗೆ ಇಂದು ಜಯನಗರದ ಯುನೈಟೆಡ್‌ ಆಸ್ಪತ್ರೆ ಸಾಕ್ಷಿಯಾಯಿತು. ಜೂನ್‌ 8 ವಿಶ್ವ ಬ್ರೈನ್‌ ಟ್ಯೂಮರ್‌ ದಿನಾಚರಣೆಯ ಹಿಂದಿನ ದಿನ ಇಂತಹದ್ದೊಂದು ಕಾರ್ಯಕ್ರಮ ನಡೆದಿದ್ದು ವಿಶೇಷ.

ವಿಶ್ವ ಬ್ರೈನ್‌ ಟ್ಯೂಮರ್‌ ದಿನಾಚರಣೆಯ ಅಂಗವಾಗಿ ಮಾಹಿತಿಯನ್ನು ನೀಡುವ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಂದ ರೋಗಿಗಳು ವೈದ್ಯರನ್ನ ಅಭಿನಂದಿಸಿದರು.

ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬ್ರೈನ್‌ ಟ್ಯೂಮರ್‌ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಸರ್ಜಿಕಲ್‌ ಇನ್ಪೇಕ್ಷನ್‌ ಕಡಿಮೆ ಮಾಡುವಂತಹ ಹಾಗೂ ದಕ್ಷತೆಯನ್ನು ಹೆಚ್ಚಿಸುವಂತಹ ಹೈ ಎಂಡ್‌ ಮಾಡ್ಯೂಲರ್‌ ಆಪರೇಷನ್‌ ಥಿಯೇಟರ್‌ಗಳು, ವಿದೇಶದಿಂದ ತರಿಸಲಾದ ಡೆಡಿಕೇಟೆಡ್‌ ಆಪರೇಟಿಂಗ್‌ ನ್ಯೂರೋ ಮೈಕ್ರೋಸ್ಕೋಪಿ, ಲ್ಯಾಪ್ರೋಸ್ಕೋಪಿ ಟವರ್‌ಗಳನ್ನು ಹೊಂದಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಕೆಲವು ದಿನಗಳ ಹಿಂದೆ ಜಯನಗರದ ಯುನೈಟೆಡ್‌ ಆಸ್ಪತ್ರೆಯ ನುರಿತ ನ್ಯೂರೋ ಸರ್ಜನ್‌ಗಳು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್‌ ಟ್ಯೂಮರ್‌ನ್ನು ತಗೆದು ಹಾಕಿ 70 ವರ್ಷದ ರೋಗಿಯ ಜೀವವನ್ನು ಉಳಿಸಿದ್ದಾರೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ರೋಗಿ ಯಾರ ಸಹಾಯವೂ ಇಲ್ಲದೇ ತನ್ನ ಸ್ವಂತ ಬಲದಿಂದ ನಡೆದಿದ್ದಾರೆ. ಅದರಲ್ಲೂ ಆ ರೋಗಿ ಪ್ರಾಣ ಉಳಿಸಿದ ವೈದ್ಯರಿಗೆ ಆಭಿನಂದನೆ ಸಲ್ಲಿಸಲು ಮುಂದಾಗಿದ್ದು ಯಾವುದೇ ವೈದ್ಯರಿಗೂ ಸಿಗುವ ಅತ್ಯಂತ ಸಂತಸದ ವಿಷಯ ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.

ಬ್ರೈನ್‌ ಟ್ಯೂಮರ್‌ ಎಂದಾಕ್ಷಣ ಪ್ರತಿಯೊಬ್ಬರಲ್ಲೂ ಭಯದ ಛಾಯೆ ಆವರಿಸಿಕೊಳ್ಳುತ್ತದೆ. ಬ್ರೈನ್‌ ಟ್ಯೂಮರ್‌ ಬಂತೆಂದರೆ ಜೀವನವೇ ಮುಗಿದು ಹೋಯಿತು ಎನ್ನುವ ಭಾಗವನೆ ಕೆಲವರಲ್ಲಿ ಮೂಡುತ್ತದೆ. ಆದರೆ, ಭಯ ಹೊಂದದೇ ಸಾಕಷ್ಟು ನೂತನ ಚಿಕಿತ್ಸಾ ಪದ್ದತಿಗಳ ಆವಿಷ್ಕಾರ ಹೊಂದಿರುವ ಚಿಕಿತ್ಸೆ ಪಡೆದುಕೊಂಡಲ್ಲಿ ಭಯಪಡುವ ಅಗತ್ಯವಿಲ್ಲ. 70 ವರ್ಷದ ಈ ರೋಗಿಯ ಮೆದುಳಿನ ಪೋಸ್ಟೀರಿಯರ್‌ ಪೋಸಾದ ಆಳದಲ್ಲಿ (Deep seated Tumor in the posterior fossa of the brain) ಅಪಾಯಕಾರಿಯಾದ ಗೆಡ್ಡೆಯೊಂದು ಬೆಳೆದುಕೊಂಡಿತ್ತು. ಇದನ್ನು ತಗೆಯಲು ಬಹಳ ಕಷ್ಟವಾಗುವಂತ ಜಾಗದಲ್ಲಿ ಇದ್ದು ಅಕ್ಕಪಕ್ಕದ ಯಾವುದೇ ಮೆದುಳಿನ ಭಾಗಕ್ಕೆ ಹಾನಿಯಾದರೆ ವ್ಯಕ್ತಿಯ ಜೀವಕ್ಕೂ ಅಪಾಯವಾಗುವ ಸಂಭವವಿತ್ತು. ನಮ್ಮ ನುರಿತ ನ್ಯೂರೋ ಸರ್ಜರಿ ವೈದ್ಯರ ತಂಡ 4 ಗಂಟೆಗಳ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು. ಆ ರೋಗಿ ಶಸ್ತ್ರಚಿಕಿತ್ಸೆಯ ನಂತರ ಚೆನ್ನಾಗಿ ಚೇತರಿಸಿಕೊಂಡರು. ಅವರು ಇಂದು ನಮ್ಮ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು ಬಹಳ ಸಂತಸ ತಂದಿತು ಎಂದು ತಿಳಿಸಿದರು.

ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್‌ ಮುರುಡಾ ಮಾತನಾಡಿ, ಇಂತಹ ಘಟನೆಗಳು ವೈದ್ಯರಾದ ನಮಗೆ ಬಹಳ ಖುಷಿ ತರುವಂತಹದ್ದಾಗಿವೆ. ಒಂದು ವರ್ಷದ ಅವಧಿಯಲ್ಲೇ ಎನ್‌ಎಬಿಎಲ್‌ ಮತ್ತು ಎನ್‌ಎಬಿಹೆಚ್‌ ಸರ್ಟಿಫಿಕೇಟನ್ನು ಪಡೆದುಕೊಂಡಿದ್ದೇವೆ. ಈ ಶಸ್ತ್ರಚಿಕಿತ್ಸೆಯನ್ನ ಭಾನುವಾರದಂದೇ ಮಾಡಬೇಕಾದಂತಹ ತುರ್ತು ಇತ್ತು. ಪ್ರಿ ಸರ್ಜಿಕಲ್‌ ಡಯಾಗ್ನೋಸ್ಟಿಕ್‌ನಲ್ಲಿ ಮಾಲಿಗ್ನಾಂಟ್‌ ಟ್ಯೂಮರ್‌ ಎಂಬುದು ಕಂಡುಬಂದಿತು. ಭಾನುವಾರದ ರಜಾದಿನದಲ್ಲೂ ನಮ್ಮ ಆಸ್ಪತ್ರೆಯ ಪ್ಯಾಥಾಲಜಿ ವಿಭಾಗ ಶಸ್ತ್ರಚಿಕಿತ್ಸೆ ಮಧ್ಯದಲ್ಲೇ ಇಂಟ್ರಾ ಆಪರೇಟಿವ್‌ ಡಯಾಗ್ನೋಸಿಸ್‌ ಮಾಡಿ ಸಹಕಾರ ನೀಡಿತು. ಅನಿವಾರ್ಯ ಸಂಧರ್ಭಗಳಲ್ಲಿ ಮಾತ್ರ ನಮ್ಮ ಆಸ್ಪತ್ರೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡುತ್ತದೆ. ಇನ್ನು ಕೆಲವು ಸಂಧರ್ಭಗಳಲ್ಲಿ ಮಲ್ಟಿಡಿಸಪ್ಲೀನರೀ ಅಪ್ರೋಚ್‌ ಮೂಲಕ ಮಲ್ಟಿಡಿಸಿಪ್ಲೀನರೀ ಚಿಕಿತ್ಸೆಯ ಮೂಲಕ ಟ್ಯೂಮರ್‌ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ. ಇಂತಹ ಶಸ್ತ್ರಚಿಕಿತ್ಸೆ ನಡೆಸದೇ ಇರುವ ರೋಗಿಯೂ ಇಂದು ಬಂದಿರುವುದು ಸಂತಸ ಇಮ್ಮಡಿಯಾಗಿದೆ ಎಂದು ಹೇಳಿದರು.

ಯಾವುದೇ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸುವಿಕೆಯಿಂದ ದೊಡ್ಡ ಹಾನಿಯನ್ನು ತಪ್ಪಿಸಬಹುದಾಗಿದೆ. ಕಾಯಿಲೆಯ ಲಕ್ಷಣಗಳನ್ನು ಕಡೆಗಣಿಸದೇ ಚಿಕಿತ್ಸೆ ಪಡೆಯುವುದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.

ಈ ಸಂಧರ್ಭದಲ್ಲಿ ಜಯನಗರದ ಯುನೈಟೆಡ್‌ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ವೈದ್ಯರು ಉಪಸ್ಥಿತರಿದ್ದರು.

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...