
ಶಿವಮೊಗ್ಗ :- ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಸ್ವೀಕಾರ ಸಭೆ ನಡೆಸುವರು. ಜೂ 14ರಂದು ಸಾಗರ ಪ್ರವಾಸಿ ಮಂದಿರ, ಜೂ.16ರಂದು ತೀರ್ಥಹಳ್ಳಿ ಪ್ರವಾಸಿ ಮಂದಿರ, ಜೂ.21ರಂದು ಸೂರಬ ಪ್ರವಾಸಿ ಮಂದಿರ, ಜೂ.22ರಂದು ಹೊಸನಗರದ ಪ್ರವಾಸಿ ಮಂದಿರ ಹಾಗೂ ಜೂ.28ರಂದು ಶಿಕಾರಿಪುರ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಭೆ ನಡೆಯಲಿದೆ. ಸಾರ್ವಜನಿಕರು ಸರಕಾರಿ ಕರ್ತವ್ಯ ನಿರ್ವಹಿಸಲು ವಿಳಂಬ ಮತ್ತು ನಿರ್ಲಕ್ಷ್ಯ ತೋರಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಲಿಖಿತ ಅಹವಾಲು ಸಲ್ಲಿಸಬಹುದು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್. ಕೆ…9449553305…