ಶಿವಮೊಗ್ಗ: ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಆಗುತ್ತಿದ್ದು ಹಲವು ಕಡೆ ಹಾನಿ ಸಂಭವಿಸಿದೆ.
ಮಳೆ ಹಾನಿ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಗೃಹ ಸಚಿವರ ಚರ್ಚೆ :
ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿರುವ ಗೃಹ ಸಚಿವರು ಮುಖ್ಯಮಂತ್ರಿಗಳು ಮಳೆಹಾನಿ ಕುರಿತಂತೆ ಕರೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಳೆ ಹಾನಿ ಕುರಿತು ಮುಖ್ಯಮಂತ್ರಿ ಗಳ ಜೊತೆ ತೀರ್ಥಹಳ್ಳಿ ತಾಲ್ಲೂಕು ಕಛೇರಿಯಿಂದ ಭಾಗವಹಿಸಿ ಚರ್ಚಿಸಿದರು, ಸಚಿವರ ಜೊತೆಗೆ ತೀರ್ಥಹಳ್ಳಿ ತಹಶೀಲ್ದಾರ್ ಅಮೃತ್ ಉಪಸ್ಥಿತರಿದ್ದರು…
ಪರಿಹಾರ ಧನವನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಗೃಹ ಸಚಿವರ ಮನವಿ:
ಒಂದುವರೆ ಲಕ್ಷ ಇರುವ ಪರಿಹಾರ ಧನವನ್ನು ಹೆಚ್ಚಳ ಮಾಡಿ 5 ಲಕ್ಷದವರೆಗೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವರು ಮನವಿ ಧ್ರುವ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಹೆಚ್ಚಳ ಮಾಡುವಂತೆ ಆದೇಶ ನೀಡಿದರು.
ರಘುರಾಜ್ ಹೆಚ್. ಕೆ…9449553305….