
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಓಪ್ಪಿಗೆ ನೀಡಿದ್ದು ದೇಶದಲ್ಲಿನ 63000 ಕೃಷಿ ಪತ್ತಿನ ಸಹಕಾರ ಸಂಘಗಳು ಡಿಜಿಟಲ್ ವಹಿವಾಟಿಗೆ ಒಳಪಡಲಿರುತ್ತವೆ. ಇದರಿಂದ 13 ಕೋಟಿ ರೈತರಿಗೆ ಪ್ರಯೋಜನವಾಗಲಿದೆ 5 ವರ್ಷಗಳಲ್ಲಿ ಅನುಷ್ಟಾನ ಗೊಳ್ಳಲಿರುವ ಈ ಯೋಜನೆಗೆ 2516 ಕೋಟಿ ರೂಗಳ ಅಗತ್ಯ ಇದೆ ಎಂದು ಅಂದಾಜಿಸಲಾಗಿದ್ದು .
ಕೇಂದ್ರ ಸರ್ಕಾರವು ಈ ಸಂಬಂದ ನೆರವು ನೀಡಲಿದೆ.ಇದರಿಂದ ಗ್ರಾಮೀಣ ಅರ್ಥಿಕತೆ ಪ್ರಗತಿ ಕಾಣಲಿದ್ದು ವ್ಯವಹಾರ ಹೆಚ್ಚು ಪಾರದರ್ಶಕವಾಗಲಿದೆ ಅಲ್ಲದೆ ಕೆಲಸದಲ್ಲಿ ದಕ್ಷತೆ ಬಹುಸೇವೆಗಳು ಲಭ್ಯವಾಗಲಿದೆ.
ಇದರಿಂದಾಗಿ ಎಲ್ಲಾ ವ್ಯವಹಾರ ಹೆಚ್ಚು ಪಾರದರ್ಶಕವಾಗಲಿದೆ ಅಲ್ಲದೆ ಕೆಲಸದಲ್ಲಿ ದಕ್ಷತೆ ಬಹುಸೇವೆಗಳು ಲಭ್ಯವಾಗಲಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಹಕಾರ ಸಂಘಗಳ ಮೇಲೆ ವಿಶ್ವಾಸ ವೃದ್ಧಿಯಾಗಲಿರುತ್ತದೆ.
ಮುಖ್ಯವಾಗಿ ಸ್ಥಳೀಯ ಭಾಷೆಯಲ್ಲಿ ತಂತ್ರಾಂಶವನ್ನು ಅಳವಡಿಸುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.
ಈ ಯೋಜನೆಯನ್ನು ಜಾರಿಗೆ ತರಲಿರುವ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಇವರಿಗೆ ಮತ್ತು ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಸಹಕಾರ ಸಚಿವರೂ ಅದ ಅಮಿತ್ ಷಾ ಇವರಿಗೆ ವೈಯುಕ್ತಿಕವಾಗಿ, ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಹಾಗೂ ಜಿಲ್ಲೆಯ ಎಲ್ಲಾ ರೈತರ ಪರವಾಗಿ ಅಧ್ಯಕ್ಷರಾದ ಎಂಬಿ ಚೆನ್ನವೀರಪ್ಪನವರು ಅಭಿನಂದನೆ ಸಲ್ಲಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305….