
ರಾಣೆಬೆನ್ನೂರು : ತಾಲೂಕಿನ ಮಾಗೋಡ ರಸ್ತೆಯ ನಂದಿ ಲೇಔಟ್ ಹತ್ತಿರ ಸುಮಾರು ಏಳು ಜನ ದರೋಡೆಕೋರರ ತಂಡವು ದಿನಾಂಕ 10.07.2022ರಂದು ರಾತ್ರಿ 8:30 ರಿಂದ 9 ಗಂಟೆಗೆ ರಾಣೆಬೆನ್ನೂರು ಪಿಬಿ ರಸ್ತೆಯ ಶ್ರೀ ನಂದಿ ಲೇಹೌಟ್ ಹತ್ತಿರ ಮನೆಗೆ ನುಗ್ಗಿ ಮಾರಕಸ್ತ್ರಗಳಿಂದ ಮನೆಯಲ್ಲಿದ್ದ ಕುಟುಂಬದವರೆಲ್ಲರನ್ನು ಬೆದರಿಸಿ ಚಾಕು ತೋರಿಸಿ ಕೈಕಾಲು ಕಟ್ಟಿ ಅವರಿಂದ ಬೆಲೆಬಾಳುವ ಬಂಗಾರದ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು.
ಕೂಡಲೇ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸರಿಗೆ ಹಾವೇರಿ, ಉಪ ಪೊಲೀಸ್ ಅಧೀಕ್ಷಕರು ರಾಣೆಬೆನ್ನೂರು ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕುಮಾರ ಪಟ್ಟಣ ವೃತ್ತದ ಸಿಪಿಐ ಶ್ರೀಮತಿ ಭಾಗ್ಯವತಿ ಬಂತಿ ರವರು ತನಿಖೆ ಕೈಗೊಂಡು ಹಲಗೇರಿ ಠಾಣೆಯ ಪಿಎಸ್ಐ ಶ್ರೀ ಮೇಘರಾಜ್ ಎಂ ವಿ, ಮತ್ತು ಪಿಎಸ್ಐ ಶ್ರೀ ಕೆ, ಸಿ, ಕೋಮಲಾಚಾರ್ ರವರು ಹಾಗೂ ಸಿಬ್ಬಂದಿ ಜನರಾದ ಕೃಷ್ಣ ಎಂ ಆರ್ ವಿ ಎಚ್ ಕೊಪ್ಪದ್ ಎಂ ಎಚ್ ಬಣಕಾರ್ ಎಂ ಎನ್ ಗೊಣೇರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಮಾರುತಿ ಹಾಲಬಾವಿ ಹಾಗೂ ಇತರೆ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಮಹಾರಾಷ್ಟ್ರ ಮೂಲದ ಎರಡು ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೂ 4-5 ಜನ ಆರೋಪಿತರ ಹುಡುಕಾಟದಲ್ಲಿ ಕಾರ್ಯ ಪ್ರವೃತ್ತರಾಗಿದ್ದು, 2 ಜನ ಆರೋಪಿದರಿಂದ 1 ಜೊತೆ ಬಂಗಾರದ ಕಿವಿ ಓಲೆಗಳು ಹಾಗೂ ಒಂದು ಬೆಳ್ಳಿಯ ಉಂಗುರ ಮತ್ತು 1 ಬಂಗಾರದ ಉಂಗುರ,1ಮೊಬೈಲ್ ಸೆಟ್, ಮತ್ತು 1100/- ರೂಗಳ ನಗದು ಹಣ, 1 ಸ್ಕಾರ್ಪಿಯೋ ಗಾಡಿ ಎಲ್ಲಾ ಸೇರಿ ಒಟ್ಟು 21,41,200/-ರೂಗಳ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ…
ಪವನ್ ಎಂ, ಸಿ,….
ರಘುರಾಜ್ ಹೆಚ್.ಕೆ…9449553305….