Wednesday, May 7, 2025
Google search engine
Homeರಾಜ್ಯಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ’ ಪ್ರಶಸ್ತಿ ಪ್ರದಾನ.. !!

ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ’ ಪ್ರಶಸ್ತಿ ಪ್ರದಾನ.. !!

ದೈವಿ ಬಾಲಕರು ಮನುಕುಲವನ್ನು ಸುರಾಜ್ಯದತ್ತ ಕೊಂಡೊಯ್ಯುತ್ತಾರೆ !

ಸಂಪತ್ಕಾಲದಲ್ಲಿ ದೈವಿ ಬಾಲಕರು ಪೃಥ್ವಿಯ ಮೇಲೆ ಜನಿಸುತ್ತಾರೆ ಮತ್ತು ಇವರೇ ಮನುಕುಲವನ್ನು ಸುರಾಜ್ಯದ ಕಡೆ ಕೊಂಡೊಯ್ಯುವರು’ ಎಂದು ಶ್ರೀಲಂಕಾದಲ್ಲಿ ನಡೆದ ‘ದ ಫೋರ್ಥ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಚಿಲ್ಡ್ರನ್ ಆಂಡ್ ಯೂಥ 2022′ ಈ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸೌ. ಶ್ವೇತಾ ಕ್ಲಾರ್ಕ್ ಇವರು ಹೇಳಿದರು. ಈ ಪರಿಷತ್ತನ್ನು ‘ದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್‌ಮೆಂಟ್’ (TIIKM) ಆಯೋಜಿಸಿತ್ತು. ಸೌ. ಶ್ವೇತಾ ಕ್ಲಾರ್ಕ್ ಇವರು ‘ದೈವಿ ಬಾಲಕರನ್ನು ಹೇಗೆ ಗುರುತಿಸಬೇಕು ಮತ್ತು ಅವರನ್ನು ಹೇಗೆ ಪೋಷಿಸಬೇಕು’ ಈ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು. ಅದಕ್ಕಾಗಿ ಅವರಿಗೆ ‘ಅತ್ಯುತ್ತಮ ನಿರೂಪಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಶೋಧನಾ ಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಅಠವಲೆಯವರಾಗಿದ್ದ್ದು, ಶ್ರೀ. ಶಾನ್ ಕ್ಲಾರ್ಕ್ ಮತ್ತು ಸೌ. ಶ್ವೇತಾ ಕ್ಲಾರ್ಕ್ ಇವರು ಸಹ ಲೇಖಕರಾಗಿದ್ದಾರೆ. ಈ ವಿಶ್ವವಿದ್ಯಾಲಯದ ಮೂಲಕ ವೈಜ್ಞಾನಿಕ ಪರಿಷತ್ತಿನಲ್ಲಿ 94 ನೇ ಪ್ರಸ್ತುತಿಯಾಗಿತ್ತು.


ಸೌ. ಶ್ವೇತಾ ಕ್ಲಾರ್ಕ್ ತಮ್ಮ ಮಾತನ್ನು ಮುಂದುವರೆಸುತ್ತಾ,

ಉಚ್ಚ ಆಧ್ಯಾತ್ಮಿಕ ಮಟ್ಟವನ್ನು ಹೊಂದಿರುವ ಅನೇಕ ಮಕ್ಕಳು ಸಾಧಕರಲ್ಲಿ ಜನ್ಮತಾಳುತ್ತಿದ್ದಾರೆ; ಹಾಗಾಗಿ ಅವರನ್ನು ನಾವು ‘ದೈವಿ ಬಾಲಕ’ ಎಂದು ಕರೆಯುತ್ತೇವೆ. ಅವರಲ್ಲಿ ಆಜ್ಞಾಪಾಲನೆ, ಉನ್ನತ ವಿಚಾರಕ್ಷಮತೆ ಮತ್ತು ಆಧ್ಯಾತ್ಮಿಕ ಸಾಮರ್ಥ್ಯ, ಅಧ್ಯಾತ್ಮದ ಸೆಳೆತ ಮತ್ತು ಈಶ್ವರನ ಬಗೆಗಿನ ಭಾವ ಕಂಡುಬರುತ್ತದೆ. ಅವರು ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಾಗ ಸ್ಥಿರವಾಗಿರುತ್ತಾರೆ ಮತ್ತು ಜೀವನದತ್ತ ನೋಡುವ ಅವರ ದೃಷ್ಟಿಕೋನವು ಆಧ್ಯಾತ್ಮಿಕವಾಗಿರುತ್ತದೆ. ಅವರಲ್ಲಿ ಸೂಕ್ಷ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳನ್ನು ಅರಿತುಕೊಳ್ಳುವ ಕ್ಷಮತೆ ಇರುತ್ತದೆ ಎಂದು ಹೇಳಿದರು.


ಸೂಕ್ಷ್ಮ ಪರೀಕ್ಷಣೆಯಿಂದ ಗುರುತಿಸಲಾದ 8 ದೈವಿ ಬಾಲಕರು ಮತ್ತು 32 ಸಾಮಾನ್ಯ ಬಾಲಕರ ಸೂಕ್ಷ್ಮ-ಊರ್ಜೆಯನ್ನು ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಅಳೆಯಲಾಯಿತು. ಸಾಮಾನ್ಯ ಬಾಲಕರಲ್ಲಿ ಅತ್ಯಲ್ಪ ಸಕಾರಾತ್ಮಕ ಊರ್ಜೆ ಮತ್ತು ಬಹಳಷ್ಟು ನಕಾರಾತ್ಮಕ ಊರ್ಜೆ ಇರುವುದು ಕಂಡುಬಂದಿತು. ತದ್ವಿರುದ್ಧ ದೈವಿ ಬಾಲಕರಲ್ಲಿ ಬಹಳ ಕಡಿಮೆ ನಕಾರಾತ್ಮಕ ಊರ್ಜೆ ಮತ್ತು ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಗಮನಕ್ಕೆ ಬಂದಿತು. ಇವರಲ್ಲಿ, ಹುಟ್ಟುವಾಗಲೇ ಸಂತ ಪದವಿಯ ಆಧ್ಯಾತ್ಮಿಕ ಮಟ್ಟ ಹೊಂದಿರುವ 3 ವರ್ಷದ ಇಬ್ಬರು ದೈವಿ ಬಾಲಕರ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಸರ್ವೋಚ್ಚ ಅಂದರೆ ಅನುಕ್ರಮವಾಗಿ 821 ಮತ್ತು 793 ಮೀಟರ್ ಇತ್ತು. ಮತ್ತೊಂದು ಪರೀಕ್ಷಣೆಯಲ್ಲಿ 3 ದೈವಿ ಬಾಲಕರನ್ನು 1 ಗಂಟೆ ‘ಓಂ ನಮೋ ಭಗವತೇ ವಾಸುದೇವಾಯ |’ ಎಂದು ನಾಮಜಪ ಮಾಡುವಂತೆ ಹೇಳಲಾಯಿತು. ಅವರಲ್ಲಿ ಮುಲತಃ ಅತ್ಯಲ್ಪವಾಗಿರುವ ನಕಾರಾತ್ಮಕ ಊರ್ಜೆಯ ಪ್ರಭಾವಳಿಯು ನಾಮಜಪದ ನಂತರ ಶೇ. 86 ರಷ್ಟು ಕಡಿಮೆ ಆಯಿತು ಹಾಗೂ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಶೇ. 87 ರಷ್ಟು ಹೆಚ್ಚಾಗಿತ್ತು.

ದೈವಿ ಬಾಲಕರಿಗೆ ಸಕಾರಾತ್ಮಕತೆಯನ್ನು ಹೆಚ್ಚಿಸುವ ಮತ್ತು ನಕಾರಾತ್ಮಕತೆಯನ್ನು ಕಡಿಮೆ ಮಾಡುವ ಚಟುವಟಿಕೆಗಳನ್ನು ಕಲಿಸಲಾಗುತ್ತದೆ, ಉದಾ. ‘ಕೋಪ, ಹಠ, ಸೋಮಾರಿತನ’ದಂತಹ ಸ್ವಭಾವದೋಷ ತೊಡೆದುಹಾಕಲು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ, ಸಂಗೀತ-ನೃತ್ಯದಂತಹ ವಿವಿಧ ಕಲೆಗಳ ಜೊತೆಗೆ ಆಶ್ರಮ ಸ್ವಚ್ಛತೆ, ಧ್ವನಿಮುದ್ರಣ ಸಂಕಲನ, ತಾಂತ್ರಿಕ ಸೇವೆ ಇತ್ಯಾದಿಗಳ ಮೂಲಕ ಸತ್ಸೇವೆಯಲ್ಲಿರುವುದು.


ಕೊನೆಯಲ್ಲಿ ಸೌ. ಕ್ಲಾರ್ಕ್ ಮಾತನಾಡುತ್ತಾ,

ತಮ್ಮ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರ ಮಾಡುವುದು, ಅದೇ ರೀತಿ ಅಧ್ಯಾತ್ಮಕ್ಕೆ ಪೂರಕ ವಾತಾವರಣವನ್ನು ಒದಗಿಸುವ ಮೂಲಕ ಅವರು ಜನ್ಮಕ್ಕೆ ಬರಲು ಕಾರಣವಾದ ‘ಈಶ್ವರ ಪ್ರಾಪ್ತಿ’ಯನ್ನು ಸಾಧಿಸಲು ಅವರ ಜೀವನವನ್ನು ಬಳಸುವುದು’, ಪೋಷಕರ ಕರ್ತವ್ಯವಾಗಿದೆ’ ಎಂದು ಹೇಳಿದರು.


ಆಶಿಷ ಸಾವಂತ,
ಸಂಶೋಧನಾ ವಿಭಾಗ, ಮಹರ್ಷಿ ವಿಶ್ವವಿದ್ಯಾಲಯ, (ಸಂಪರ್ಕ : 9561574972)….

ರಘುರಾಜ್ ಹೆಚ್.ಕೆ….9449553305…..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..!