
ಸಾಗರ: ಅಪಘಾತವಾದ ವ್ಯಕ್ತಿಗೆ ಖಾಸಗಿ ಬಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವ ಮೂಲಕ ಗ್ರಾಮಾಂತರ ಠಾಣಾ ಎ.ಎಸ್.ಐ ಶ್ರೀನಿವಾಸ ಹಾಗೂ ಖಾಸಗಿ ಬಸ್ ಸಿಬ್ಬಂದಿಗಳು ಮನವಿಯತೆ ಮೆರೆದ ಘಟನೆ ಗುರುವಾರ ರಾತ್ರಿ 9ಗಂಟೆಗೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಐಗಿನಬೈಲು ಸರ್ಕಲ್ ಬಳಿ ಗುರುವಾರ ರಾತ್ರಿ 9 ಘಂಟೆ ಸುಮಾರಿಗೆ ಸಾಗರ ಪೇಟೆಯ ತಿಲಕ್ ರಸ್ತೆಯಲ್ಲಿ ಇರುವ ಮಾಲ್ತೇಶ್ ಜುವೆಲರಿ ಶಾಪ್ ಮಾಲೀಕ ಅಶೋಕ(40) ಎಂಬುವರ ದ್ವಿಚಕ್ರ ವಾಹನ ಆಯತಪ್ಪಿ ಬಿದ್ದು ಅಪಘಾತದಲ್ಲಿ ಅಶೋಕ ರವರಿಗೆ ಗಂಭೀರ ಗಾಯಗಳಾಗಿದ್ದು ತಾಲ್ಲೂಕು ಉಪ ವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ.
ಅಪಘಾತವಾದ ಸಂದರ್ಭದಲ್ಲಿ ಆಂಬುಲೆನ್ಸ್ ಇಲ್ಲ: ಖಾಸಗಿ ಬಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವ ಮೂಲಕ ಮಾನವೀಯತೆ ಮೆರೆದ ಗ್ರಾಮಾಂತರ ಠಾಣಾ ಎ.ಎಸ್.ಐ ಹಾಗೂ ಬಸ್ ಸಿಬ್ಬಂದಿಗಳ”
ಇನ್ನು ಅಪಘಾತವಾದ ಸಂದರ್ಭದಲ್ಲಿ ಸ್ಥಳೀಯರು ತಕ್ಷಣ ಅಂಬುಲೆನ್ಸ್ ಗೆ ಸಂಪರ್ಕ ಮಾಡಿದ್ದಾರೆ,ಅದರೇ ವಿಪರ್ಯಾಸ ಎಂದರೆ ಆ ಸಮಯದಲ್ಲಿ ಅಂಬುಲೆನ್ಸ್ ಕಾಲ್ ಸೆಂಟರ್ ಕರೆ ಸ್ವೀಕರಿಸಲಿಲ್ಲ, ಅದೇ ಮಾರ್ಗದಲ್ಲಿ ಸಾಗರಕ್ಕೆ ಬರುತ್ತಿದ್ದ ಸಾಗರ ನಿವಾಸಿ ಇಸ್ಮೈಲ್ ಎಂಬುವರು ತಮ್ಮ ಮಾರುತಿ 800 ವಾಹನ ನಿಲ್ಲಿಸಿ ಗಾಯಲು ಅಶೋಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲು ಪ್ರಯತ್ನ ಮಾಡಿದ್ದಾರೆ ಮಾರುತಿ 800 ಕಾರಿನಲ್ಲಿ ಅಶೋಕನನ್ನು ಕೂರಿಸಲು ಕಷ್ಟವಾಗಿದೆ .
ಅದೇ ಮಾರ್ಗದಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಆಗಮಿಸುತ್ತಿದ್ದ ಭಾಗ್ಯಲಕ್ಷ್ಮಿ ಖಾಸಗಿ ಬಸ್ಸಿನಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ನೈಟ್ ಡ್ಯೂಟಿಗೆ ಆಗಮಿಸುತ್ತಿದ್ದ ಠಾಣೆಯ ಎ.ಎಸ್.ಐ ಶ್ರೀನಿವಾಸ ತಕ್ಷಣ ಬಸ್ಸನ್ನು ನಿಲ್ಲಿಸಿ ಗಾಯಲು ಅಶೋಕನನ್ನು ಬಸ್ನಲ್ಲಿ ಸಾಗರ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಬಳಿ ಪೋಲಿಸ್ ಇಲಾಖೆಯ ಹೈವೇ ಪೆಟ್ರೋಲಿಯಂ ವಾಹನ ಚಾಲಕ ಅವಿನಾಶ್ ರವರು ಶ್ರೀನಿವಾಸ್ ರವರಿಗೆ ಸಾಥ್ ನೀಡಿದರು.
ಎ.ಎಸ್.ಐ ಶ್ರೀನಿವಾಸ ರವರ ಕಾರ್ಯಕ್ಕೆ ಮೆಚ್ಚುಗೆ:
ಅಪಘಾತವಾದ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀನಿವಾಸ, ಹಾಗೂ ಪೋಲಿಸ್ ಪೇದೆ ಅವಿನಾಶ್ ರವರ ಕಾರ್ಯಕ್ಕೆ ಸಾಗರ ದೈವಜ್ಞ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಅಂಬುಲೆನ್ಸ್ ಸೇವೆ..
ಹೌದು, ತಾಲೂಕಿನಲ್ಲಿ ಕೆಲವು ದಿನಗಳಿಂದ ಅಪಘಾತವಾದ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸೇವೆ ಲಭ್ಯವಾಗುತ್ತಿಲ್ಲ, ಜಿವಿಕೆ ಕಂಪನಿಯ ಅಂಬುಲೆನ್ಸ್ 108 ಗೆ ಸಂಪರ್ಕಿಸಿದರೆ ಅಂಬುಲೆನ್ಸ್ ತಾಲೂಕಿನಿಂದ ಬೇರೆ ಕಡೆ ಹೋಗಿದೆ ಎಂದು ಉತ್ತರ ನೀಡುತ್ತಾರೆ , ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸಿಗದೆ ಹೋದಲ್ಲಿ ಪ್ರಣಹಾನಿ ಆಗುವುದು ಕಟ್ಟಿಟ್ಟ ಬುತ್ತಿ.
108 ಆಂಬುಲೆನ್ಸ್ ಜಿಲ್ಲಾ ನಿರ್ವಹಣಾಧಿಕಾರಿ ದೃವೇಶ್ ರವರೆ ತಕ್ಷಣ ಗಮನ ಹರಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದೆ ಇರುವ ರೀತಿ ನೋಡಿಕೊಳ್ಳಬೇಕು, ಮುಂದಿನ ದಿನಗಳು ಯಾವುದೇ ಅನಾಹುತಗಳಾದರೆ ನೇರ ಕಾರಣ ತಾವೇ ಆಗುತ್ತೀರಿ ಎಂದು ತಿಳಿದುಕೊಳ್ಳಬೇಕು.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….