
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹಿಂದೂ ಮುಖಂಡ ಪ್ರವೀಣ ನೆಟ್ಟೂರರವರನ್ನು ಜಿಹಾದಿ ಮತಾಂಧರು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು. ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಶ್ರೀ. ಹರ್ಷ, ಬೆಂಗಳೂರಿನಲ್ಲಿ ಹಿಂದೂ ಯುವಕ ಚಂದ್ರರವರ ಹತ್ಯೆ ಪ್ರಕರಣ ಮಾಸುವ ಮೊದಲೇ ಪುನಃ ಹಿಂದೂ ನಾಯಕರ ಹತ್ಯೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ದ್ಯೋತಕವಾಗಿದೆ. ಪ್ರವೀಣ ಹತ್ಯೆಯ ಮೊದಲು ಮಂಗಳೂರು ಮೂಲದ ಜಯಕಿರಣ ಪತ್ರಿಕೆಯು ‘ಹಿಂದೂ ನಾಯಕರ ಹತ್ಯೆ ನಡೆಯಲಿದೆ’ ಎಂಬ ವರದಿಯನ್ನು ಮಾಡಿದ ನಂತರವೂ ಸಹ ಸಂವೇದನಾಶೀಲರಹಿತ ಸರಕಾರವು ಸತಕರ್ತೆಯಿಂದ ಘಟನೆ ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹರ್ಷರವರ ಹತ್ಯೆ ಮಾಡಿದ ಹಂತಕರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಗ್ರಹದಲ್ಲಿ ಮೊಬೈಲ್, ರಾಜಾತಿಥ್ಯ ನೀಡಿರುವ ಘಟನೆಯು ವರದಿಯಾಗಿತ್ತು. ಇದು ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಹಂತಕರಿಗೆ ಶಿಕ್ಷೆ ಕೊಡಿಸುವಲ್ಲಿ ರಾಜ್ಯ ಸರ್ಕಾರವು ಹೇಗೆ ನಿರ್ಲಕ್ಷ ಮಾಡುತ್ತಿದೆ ಎಂಬುದರ ದ್ಯೋತಕವಾಗಿದೆ. ಪದೇ ಪದೇ ಹತ್ಯೆ ನಡೆದಾಗ ಸರಕಾರವು ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡುತ್ತದೆ. ಆದರೆ ಪ್ರತ್ಯಕ್ಷ ಕಠಿಣ ಕ್ರಮಕ್ಕೆ ಯಾವುದೇ ರೀತಿಯ ಕೃತಿಯನ್ನು ಮಾಡದಿರುವುದೇ ಈ ಎಲ್ಲ ಘಟನೆಗಳಿಗೆ ಕಾರಣವಾಗಿದೆ. ಕಾರ್ಯಕರ್ತರ ಪಕ್ಷ ಎನ್ನುವ ಭಾಜಪದ ಕಾರ್ಯಕರ್ತರ ಮನೆಗಳು ಮಸಣವಾಗುತ್ತಿದೆ. ಸರಕಾರವು ಈಗಲಾದರೂ ಎಚ್ಚತ್ತು ಗೊಂಡು ಹಿಂದು ಕಾರ್ಯಕರ್ತರ ರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ಪರವಾಗಿ ಆಗ್ರಹಿಸಲಾಯಿತು.
ಮನವಿಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಯಿತು. ಪ್ರವೀಣ ನೆಟ್ಟೂರು ರವರ ಹತ್ಯೆ ಮಾಡಿದ ಹಂತಕರನ್ನು, ಹತ್ಯೆಗೆ ಕುಮ್ಮಕ್ಕು ನೀಡಿದವರನ್ನು ಹಾಗೂ ಅವರಿಗೆ ಆರ್ಥಿಕ ಸಹಾಯ ಮಾಡುವವರನ್ನು ಕೂಡಲೇ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು, ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಯ ಹಿಂದಿನ ಜಿಹಾದಿ ಮಾನಸಿಕತೆಯನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಜರುಗಿಸಬೇಕು, ಸರಣಿ ಕಾರ್ಯಕರ್ತರ ಹತ್ಯೆಗೆ ಹೊರರಾಜ್ಯದ ನಂಟು ಇರುವ ಕಾರಣ ಇದನ್ನು ರಾಷ್ಟ್ರೀಯ ತನಿಕಾ ದಳಕ್ಕೆ ವರ್ಗಾವಣೆ ಮಾಡಬೇಕು, ಹತ್ಯೆಗೆ ಕುಮ್ಮಕ್ಕು ನೀಡುವ ಮತಾಂಧ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್ ಡಿಪಿಐ ಮೇಲೆ ನಿಷೇಧವನ್ನು ಹಾಕಬೇಕು, ಶ್ರೀ. ಪ್ರವೀಣ ರವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಮಾಡಬೇಕು, ಈ ಹಿಂದೆ ನಡೆದ ಎಲ್ಲ ಹಿಂದೂ ಕಾರ್ಯಕರ್ತರ ಹತ್ಯೆಯ ತನಿಖೆಯನ್ನು ಕೂಡಲೇ ಪೂರ್ಣ ಮಾಡಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಈ ಸಂಧರ್ಭದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಹಾಗೂ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ.….
ರಘುರಾಜ್ ಹೆಚ್.ಕೆ…9449553305…..