
ರಾಜ್ಯದ ವಿವಿದ ಭಾಗದಿಂದ ಬಂದಿರುವ ವಿಕಲಚೇತನ ಮಕ್ಕಳಿಗೆ ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿ ಶಿಕ್ಷಣ ಕೊಡುವ ಕೆಲಸವನ್ನು ಅವರ ಸ್ಥಿತಿಯ ಗುಣಮಟ್ಟವನ್ನು ಉತ್ತಮಗೊಳಿಸುವ ಕಾರ್ಯವನ್ನು ಕಳೆದ ಹತ್ತಾರು ವರ್ಷಗಳಿಂದ ಮಾಡಲಾಗುತ್ತಿದೆ,ಅಲ್ಲಿರುವ ಕುಮಾರ್ ಎನ್ನುವ ಶಿಕ್ಷಕರು ಸೇವಾ ಭಾವನೆಯಿಂದ ಬೇರೆಲ್ಲೂ ವರ್ಗಾವಣೆ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾತೃ ವಾತ್ಸಲ್ಯ ಸೇವಾ ಟ್ರಸ್ಟ್ ನ ಸದಸ್ಯರು ಕೂಡ ಸಮರ್ಪಣಾ ಭಾವದಿಂದ ಅಲ್ಲಿ ಸೇವೆಗೆಯುತ್ತಿದ್ದಾರೆ,
ಒಬ್ಬೊಬ್ಬ ತಾಯಿಯ ಕಣ್ಣೀರಿನ ಕಥೆ ಕೇಳಿದರೆ ಕರುಳು ಕಿತ್ತು ಬರುವಂತಾಗುತ್ತದೆ,
ದೇವರು ಕೊಟ್ಟ ಮಕ್ಕಳನ್ನು ಅವರಿರುವ ಸ್ಥಿತಿಯಲ್ಲಿಯೇ ಜೀವನ ಪೂರ್ತಿ ಸಾಕಿ ಸಲುಹಬೇಕಾದ ತಾಯಿ ತನ್ನ ಎಲ್ಲಾ ಅಪೇಕ್ಷೆ ಕನಸು ಸುಖ ಸಂತೋಷಗಳನ್ನು ಮರೆತು ಮಕ್ಕಳಿಗಾಗಿ ತ್ಯಾಗದ ಬದುಕನ್ನು ಬದುಕಬೇಕಾದ ಸಂಕಟದ ಸ್ಥಿತಿ, ಹೆತ್ತವರಿಗೆ ಮಕ್ಕಳು ಹೇಗಿದ್ದರೂ ನಾವೇ ಹೆತ್ತ ಮಕ್ಕಳು ಎನ್ನುವ ಆಸೆಯಿಂದ ಸಾಕಿ ಸಲಹುತಿದ್ದಾರೆ,ಆ ರೀತಿ ವಿಕಲಚೇತನರಾಗಿ ಹುಟ್ಟಿದ ಮಕ್ಕಳಿಗಾಗಿ ಬದುಕು ಸಮರ್ಪಿಸಿ ನೋಡಿಕೊಳ್ಳುತ್ತಿರುವ ತಾಯಂದಿರು, ಸೇವಾ ಸಂಸ್ಥೆಯವರು, ಮತ್ತು ಶಿಕ್ಷಕ ವರ್ಗದವರ ಸಮಸ್ಯೆ ಆಲಿಸುವ ಸಲುವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ವಾರದ ಹಿಂದೆ ತೀರ್ಥ ಹಳ್ಳಿ ಸೊಪ್ಪುಗುಡ್ಡೆ ವಿಕಲಚೇತನ ಶಾಲೆಗೆ ಬೇಟಿ ಕೊಟ್ಟಿದ್ದರು,, ಸುಮಾರು 3 ಗಂಟೆಗಳ ಕಾಲ ಅಲ್ಲಿದ್ದರು,ಅಲ್ಲಿದ್ದ ಎಲ್ಲಾ ತಾಯಂದಿರ ಕಣ್ಣೀರಿನ ಕಥೆ ಆಲಿಸಿದರು, ಸಚಿವರ ಕಣ್ಣಲ್ಲೂ ನೀರಾಡಿದವು,
ದೂರದ ಊರುಗಳಿಂದ ಬಂದು ಬಾಡಿಗೆ ಮನೆಯಲ್ಲಿ ಇದ್ದು ಇಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡುತ್ತಿರುವ ತಾಯಂದಿರು ಮತ್ತು ನಮ್ಮ ಕ್ಷೇತ್ರದ ತಾಯಂದಿರ ಕಷ್ಟಕ್ಕೆ ನೆರವಾಗುವ ಸಲುವಾಗಿ ಪಟ್ಟಣಕ್ಕೆ ಸಮೀಪದಲ್ಲಿ ಒಂದು ಜಾಗ ನೋಡಿ ವಿಕಲ ಚೇತನ ಮಕ್ಕಳಿಗೆ ಪೋಷಕರಿಗೆ ಅನುಕೂಲವಾಗುವಂತೆ” ಒಂದೇ ಜಾಗದಲ್ಲಿ ವಸತಿ ಮತ್ತು ಶಾಲೆ ನಿರ್ಮಿಸಬೇಕೆನ್ನುವ ಯೋಜನೆಯೊಂದಿಗೆ ಬಂದಿದ್ದಾರೆ,ಬೇರೆ
ಏನೂ ಮಾಡಲಾಗದಿದ್ದರೂ ಈ ಕೆಲಸ ಮಾಡಲೇಬೇಕು
ಮಾನವೀಯತೆಯ ನಿಜವಾದ ಪ್ರದರ್ಶನ ಆಗಬೇಕಿರುವ ಜಾಗ ಇದು, ಸೇವೆಯ ನಿಜವಾದ ಅವಶ್ಯಕತೆ ಇರುವ ಜಾಗ ಇದು, ಸಚಿವರ ವಿಕಲಚೇತನ ಮಕ್ಕಳ ವಸತಿ ಶಾಲೆಯ ಪ್ರಯತ್ನಕ್ಕೆ ನೆರವಾಗುವ ಮನಸಿರುವವರು ಕೈ ಜೋಡಿಸಿದರೆ ಕೆಲಸ ಸುಲಭವಾಗಬಹುದು,
ಸರಕಾರದಿಂದ ಆದಷ್ಟು ಅನುದಾನ ತರುವ ಪ್ರಯತ್ನ ನಡೆಯುತ್ತದೆ, ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಗಳು ಮಾನವೀಯತೆಯ ಅಂತಃಕರಣದಿಂದ ನೋಡಿದರೆ ಖಂಡಿತಾ ವಿಕಲಚೇತನರಿಗೆ ವಸತಿ ಶಾಲೆ ಕಷ್ಟವಾಗಲಾರದು, ಎಲ್ಲವೂ ಇದ್ದರೂ ಇಲ್ಲದೇ ಇರುವಂತೆ ಹುಟ್ಟಿದ ಮಕ್ಕಳಿಗಾಗಿ ಸುಖ ಸಂತೋಷವನ್ನು ತ್ಯಾಗ ಮಾಡಿ ಬದುಕಬೇಕಾದ ಸ್ಥಿತಿಯಲ್ಲಿರುವವರಿಗೆ ಒಂದೊಳ್ಳೆ ವಸತಿ ಶಾಲೆ ನಿರ್ಮಾಣವಾದರೆ ನಿತ್ಯಾ ಪ್ರತಿಕ್ಷಣ ಜೊತೆಯಲ್ಲೇ ಇದ್ದು ಮಕ್ಕಳ ಆರೈಕೆ ಮಾಡುತ್ತಿರುವ ಪೋಷಕರಿಗೆ ಅವರ ನಿತ್ಯದ ಕಣ್ಣೀರಿನ ಬದುಕಿಗೆ ಕೊಂಚ ಸಾಂತ್ವನ ಹೇಳಿದಂತೆ ಆಗುತ್ತೆ ಎನ್ನುವುದು ಸಚಿವರ ಆಶಯ, ಈಡೇರಿಸುವ ಪ್ರಯತ್ನ ಆರಂಭವಾಗಿದೆ…
ರಘುರಾಜ್ ಹೆಚ್.ಕೆ…9449553305….