
ತೀರ್ಥಹಳ್ಳಿ: ಜಿಲ್ಲೆಯ ಪ್ರತಿಷ್ಠಿತ ನ್ಯಾಷನಲ್ ಸಂಸ್ಥೆ ನಿರ್ಮಾಣ ಮಾಡಿರುವ ಆಗುಂಬೆ ಹೈವೇ ರಸ್ತೆ ಗ್ರಾಮ ಪಂಚಾಯಿತಿ ಎದುರಿಗೆ ಸರ್ಕಲ್ಲಿನಲ್ಲಿ ಗುಂಡಿ ಬಿದ್ದಿದ್ದು ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ಹಿಂದೆ ಪತ್ರಿಕೆ ಇದರ ಬಗ್ಗೆ ವರದಿ ಬರೆದಾಗ ಕೂಡಲೇ ನ್ಯಾಷನಲ್ ಸಂಸ್ಥೆಯವರು ಆ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಿ ಸಿದ್ದರು… ಅಧಿಕ ಮಳೆಯ ಕಾರಣದಿಂದ ನಂತರ ಶಾಶ್ವತ ಪರಿಹಾರ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು . ಈಗ ಆ ಕೆಲಸ ಪೂರ್ಣವಾಗಿಲ್ಲ… ದಿನನಿತ್ಯ ಸಾಕಷ್ಟು ವಾಹನಗಳು ಓಡಾಡುವ ಮುಖ್ಯ ರಸ್ತೆ ಆಗಿರುವುದರಿಂದ ಇಲ್ಲಿನ ಸ್ಥಳೀಯರಿಗೂ ಸೇರಿದಂತೆ ಹೊರಗಿನಿಂದ ಬರುವ ವಾಹನಗಳಿಗೆ ಅಪಘಾತವಾಗುತ್ತಿದೆ….
ಆಕ್ರೋಶಗೊಂಡ ಯುವಕರಿಂದ ರಸ್ತೆಗೆ ಮತ್ತೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ::
6 ತಿಂಗಳಿಗಿಂತ ಹೆಚ್ಚು ಸಮಯ ದಿಂದ ಮೃತ್ಯು ಕೂಪ ಬಾಯಿ ತೆಗೆದು ನಿಂತಿದ್ದರು . ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಯಾವುದೇ ಕ್ರಮ ಕೈ ಗೊಂಡಿರುವುದಿಲ್ಲ . ಹೀಗಾಗಿ ಆಕ್ರೋಶ ಗೊಂಡ ಸ್ಥಳೀಯ ಯುವಕರು. ರಸ್ತೆ ಮದ್ಯದ ಗುಂಡಿ ಅಲ್ಲಿ ಬಾಳೆ ಮರ ನೆಟ್ಟು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ನ್ಯಾಷನಲ್ ಸಂಸ್ಥೆ ಇದರ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆಯನ್ನು ಸರಿಪಡಿಸಬೇಕು…ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕು….
ರಘುರಾಜ್ ಹೆಚ್.ಕೆ…9449553305…